ಮಂಡಗದ್ದೆ ಅಕ್ರಮ ಮರಳು ಸಾಗಾಟದ ಕಿಂಗ್‌ಪಿನ್ ಯಾರು?
news.ashwasurya.in
ಅಶ್ವಸೂರ್ಯ/ಮಂಡಗದ್ದೆ : ಮಂಡಗದ್ದೆ ಯಿಂದ ಶಿವಮೊಗ್ಗ ಮತ್ತು ಚಿಲೂರಿನಿಂದ ಅಕ್ರಮ ಮರಳು ಸಾಗಾಟದ ದಂಧೆ ಭರ್ಜರಿಯಾಗಿ ನೆಡೆಯುತ್ತಿದೆ.! ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ತನ್ನ ಟಿಪ್ಪರ್ಗಳ ಮೂಲಕ ಅಕ್ರಮ ಮರಳು ದಂಧೆಯನ್ನು ನಿರ್ಭಯವಾಗಿ ಮಾಡುತ್ತಿದ್ದಾನೆ ಈ ಮಂಡಗದ್ದೆಯ ಮರಳು ದಂಧೆಕೋರ.
ಶಿವಮೊಗ್ಗ ಮತ್ತು ಮಂಡಗದ್ದೆ
ಮಲೆನಾಡಿನ ನದಿಗಳು, ಹೊಳೆಗಳು ಹಾಗೂ ಪರಿಸರದ ಮೇಲೆ ಅಕ್ರಮ ಮರಳುಗಾರಿಕೆಯ ಕರಿನೆರಳು ಬೀಳುತ್ತಿದೆ.!? ಶಿವಮೊಗ್ಗ ತಾಲೂಕಿನ ಚಿಲೂರು ಸೇರಿದಂತೆ ವಿವಿಧ ಪ್ರದೇಶಗಳಿಂದ ಹಾಗೂ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಶಿವಮೊಗ್ಗ ನಗರಕ್ಕೆ ಅಕ್ರಮವಾಗಿ ಮರಳು ಸಾಗಾಟ ನಡೆಯುತ್ತಿದೆ ಅದರಲ್ಲೂ ಈ ಅಕ್ರಮ ಮರಳು ಸಾಗಾಟದಲ್ಲಿ ತನ್ನನ್ನು ನಿರಂತರವಾಗಿ ತೊಡಗಿಸಿಕೊಂಡು ಸರ್ಕಾರದ ಬೊಕ್ಕಸಕ್ಕೆ ತಿಲಾಂಜಲಿ ಇಟ್ಟಿರುವ ಈ ಮಂಡಗದ್ದೆಯ ಮರಳು ಚೋರನಿಗೆ ಪೋಲಿಸರು ಮತ್ತು ಸಂಭಂದಪಟ್ಟ ಇಲಾಖೆಯ ಅಧಿಕಾರಿಗಳು ಆತನ ಮಗ್ಗಲು ಮುರಿಯಬೇಕಿದೆ.
ಮರಳು ಸಾಗಾಟಕ್ಕೆ ಸರ್ಕಾರದ ನಿಯಮಗಳಿದ್ದರೂ, ನಿಯಮಗಳನ್ನು ಮೀರಿ ಅಕ್ರಮ ಮರಳು ತುಂಬಿದ ಟಿಪ್ಪರ್ ಲಾರಿಗಳನ್ನು ರಾತ್ರಿ–ಹಗಲೇನ್ನದೆ ಶಿವಮೊಗ್ಗ ನಗರಕ್ಕೆ ಹೋಡೆಯುತ್ತಾನೆ.

ಯಾರು ಈ ‘ಕಿಂಗ್‌ಪಿನ್’?
ಮಂಡಗದ್ದೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿರುವ ಅಕ್ರಮ ಮರಳು ಸಾಗಾಟದ ಹಿಂದೆ ಒಬ್ಬ ವ್ಯಕ್ತಿಯ ಕೈವಾಡವಿದೆ ಈ ಅಕ್ರಮ ಮರಳು ದಂಧೆಯನ್ನೆ ತನ್ನ ಬದುಕಾಗಿ ಮಾಡಿಕೊಂಡಿದ್ದಾನೆ.
ಮರಳು ಸಂಗ್ರಹಿಸುವ ಸ್ಥಳದಿಂದ ಹಿಡಿದು ಲಾರಿಗಳ ಮೂಲಕ ಶಿವಮೊಗ್ಗ ನಗರಕ್ಕೆ ತಲುಪಿಸುವವರೆಗೆ ಇತನ ಹಿಂದೆ ಯಾರಿದ್ದಾರೆ.? ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಇತನದು ಎಷ್ಟು ಟಿಪ್ಪರ್ ಲಾರಿಗಳು? ಯಾವ ನಂಬರ್ಗಳು?
ಪ್ರತಿದಿನ ಮಂಡಗದ್ದೆ–ತೀರ್ಥಹಳ್ಳಿ ಭಾಗದಿಂದ ಶಿವಮೊಗ್ಗದತ್ತ ಸಂಚರಿಸುವ ಇತನ ಅಕ್ರಮ ಮರಳು ತುಂಬಿದ ಲಾರಿಗಳ ಸಂಖ್ಯೆಯ ಬಗ್ಗೆ ಸದ್ಯದಲ್ಲೇ ತಿಳಿಸುವೆ.ಇತನ ಹೆಸರೇನು.? ಇವನು ಯಾರು.? ಎಲ್ಲವನ್ನೂ ತಿಳಿಸುವೆ.
ದಿನಕ್ಕೆ ಎಷ್ಟು ಲೋಡ್?
ಈತ ದಿನನಿತ್ಯ ಎಷ್ಟು ಲೋಡ್ ಮರಳನ್ನು ಅಕ್ರಮವಾಗಿ ಸಾಗಿಸುತ್ತಾನೆ.ಒಂದು ಲೋಡ್ ಮರಳಿನ ಮಾರುಕಟ್ಟೆ ಬೆಲೆ ಎನು.? ಹಾಗೂ ಪ್ರತಿದಿನ ಎಷ್ಟು ಮರಳನ್ನು ಅಕ್ರಮವಾಗಿ ಸಾಗಿಸುತ್ತಾನೆ ಎಂದು ಲೆಕ್ಕ ಹಾಕಿದರೆ, ಈ ದಂಧೆಯಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿರುವ ವಹಿವಾಟಿನ ಅಂದಾಜು ಕೂಡ ಹೊರಬರಲಿದೆ.
ಈ ಅಕ್ರಮ ಮರಳು ದಂಧೆಕೋರನನ್ನು ಮಟ್ಟಹಾಕಲು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಮುಂದಾಗಬೇಕಿದೆ.
ಅಧಿಕಾರಿಗಳ ಗಮನಕ್ಕೆ
ಶಿವಮೊಗ್ಗ ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಟದ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಸಮಿತಿಗಳು ಇರುವುದಾಗಿ ಇತ್ತೀಚಿನ ವರದಿಗಳು ತಿಳಿಸಿವೆ.
ಹೀಗಿದ್ದರೂ ಮಂಡಗದ್ದೆ–ಚಿಲೂರು–ಶಿವಮೊಗ್ಗ ಮಾರ್ಗದಲ್ಲಿ ಅಕ್ರಮ ಸಾಗಾಟ ನಡೆಸುತ್ತಿರುವ ಈ ಮಂಡಗದ್ದೆಯ ಮರಳು ದಂಧೆಯ ಖದೀಮನ ಬಗ್ಗೆ ಮೌನವೇಕೆ.?
ಕಿಂಗ್‌ಪಿನ್ ಯಾರು?
ಮಧ್ಯವರ್ತಿಗಳು ಯಾರು?
ಲಾರಿಗಳ ಮಾಲೀಕರು ಯಾರು?
ದಿನಕ್ಕೆ ಎಷ್ಟು ಲೋಡ್?
ತಿಂಗಳಿಗೆ ಎಷ್ಟು ಲಕ್ಷ ವಹಿವಾಟು?
ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಇಲ್ಲವೆ?
ಈ ಎಲ್ಲಾ ಪ್ರಶ್ನೆಗಳಿಗೆ ಸಂಪೂರ್ಣ ವರದಿ ಮಾಡಲಿದ್ದೇನೆ
ಮುಂದಿನ ವರದಿಯಲ್ಲಿ
ನಿರೀಕ್ಷಿಸಿ…
“ಮಂಡಗದ್ದೆಯ ಅಕ್ರಮ ದಂಧೆಕೋರ ಯಾರು..?”
— ಅಶ್ವಸೂರ್ಯ ನ್ಯೂಸ್ ನಲ್ಲಿ

