ವಾಷಿಂಗ್ ಪೌಡರ್ ನಿರ್ಮಾ ಯಶೋಗಾಥೆ : ಸೈಕಲ್ನಲ್ಲಿ ವ್ಯಾಪರ ಆರಂಭಿಸಿದ ವಾಷಿಂಗ್ ಪೌಡರ್ “ನಿರ್ಮಾ’ ಉದ್ಯಮ ಇಂದು ಬರೋಬ್ಬರಿ ₹75,000 ಕೋಟಿ ವಹಿವಾಟು.!!
news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಭಾರತದಲ್ಲಿ ಪ್ರಾರಂಭವಾದ ಉದ್ಯಮಗಳಿಗೆ ಲೆಕ್ಕವೇ ಇಲ್ಲ. ಅದರಲ್ಲೂ ವಾಷಿಂಗ್ ಪೌಡರ್ ನಿರ್ಮಾ (Nirma) ದೇಶದ ಕೋಟ್ಯಾಂತರ ಜನರ ಅಚ್ಚುಮೆಚ್ಚಿನ ಬ್ರ್ಯಾಂಡ್. 90 ರ ಇಸವಿಯ ಮಕ್ಕಳಿಗಂತೂ ಈ ಪ್ರಾಡೆಕ್ಟ್ನ ಜಾಹೀರಾತು ಮತ್ತು ಅದರಲ್ಲಿನ ಹಾಡು ಇವತ್ತಿಗೂ ನೆನಪಿನಲ್ಲಿ ಉಳಿದಿದೆ.ಅ ಮಟ್ಡದ ಜನಪ್ರಿಯತೆಯನ್ನು ಗಳಿಸಿತ್ತು. ಒಂದು ಮಟ್ಟಕ್ಕಿಂತಲೂ ನಿರ್ಮಾ ಜಾಹೀರಾತುವಿನ ಹಾಡು ದೇಶದ ಜನ ಚಲನಚಿತ್ರದ ಸೂಪರ್ ಹಿಟ್ ಹಾಡನ್ನು ಗುನುಗುವಂತೆ ಗುನುಗುತ್ತಿದ್ದರು, ವಾಷಿಂಗ್ ಪೌಡರ್ ನಿರ್ಮಾ ಅಥವಾ ನಿರ್ಮಾ ಕಂಪನಿಯ ಸಂಸ್ಥಾಪಕ, ಉದ್ಯಮಿ ಕರ್ಸನ್ಭಾಯ್ ಪಟೇಲ್ ಅವರು ಅತ್ಯಂತ ಸಣ್ಣ ಮೊತ್ತದಲ್ಲಿ ಈ ಪ್ರಾಡೆಕ್ಟ್ ಪ್ರಾರಂಭಿಸಿದರು.
ತಾವು ಪ್ರಾರಂಭಿಸಿದ ಬ್ರ್ಯಾಂಡ್ಗೆ ತಮ್ಮ ದಿವಂಗತ ಮಗಳ ಹೆಸರಿಟ್ಟರು. ಮೊದಲ ಮೂರು ವರ್ಷಗಳ ಕಾಲ ಅವರು ಸೈಕಲ್ನಲ್ಲಿ ಈ ಪ್ರಾಡೆಕ್ಟ್ ತೆಗೆದುಕೊಂಡು ಗಲ್ಲಿ ಗಲ್ಲಿಗೆ ಹೋಗಿ ಮಾರಾಟ ಮಾಡುತ್ತಿದ್ದರು. ಆದರೆ ಇದಾದ ನಂತರ ನಡೆದಿದ್ದೆಲ್ಲವೂ ಈಗ ಇತಿಹಾಸ. ನಿರ್ಮಾ ಪ್ರಾಡೆಕ್ಟ್ನಿಂದಲೇ ಕರ್ಸನ್ಭಾಯ್ ಪಟೇಲ್ ಅವರು ಬೃಹತ್ ಉದ್ಯಮ ಪ್ರಾರಂಭಿಸಿದರು. ಕೋಟ್ಯಾಂತರ ರೂಪಾಯಿ ಆದಾಯ ಗಳಿಸಿದರು. ಇದರ ಸಂಪೂರ್ಣ ವಿವರ ಈ ವರದಿಯಲ್ಲಿದೆ…
ವಾಷಿಂಗ್ ಪೌಡರ್ “ನಿರ್ಮಾ” ಯಶೋಗಾಥೆ..
3 ವರ್ಷ ಸೈಕಲ್ನಲ್ಲಿ ಡಿಟರ್ಜೆಂಟ್ ಮಾರಾಟ :
ಕರ್ಸನ್ಭಾಯ್ ಪಟೇಲ್ ಅವರು 3 ವರ್ಷಗಳ ಕಾಲ ಸೈಕಲ್ನಲ್ಲಿ ಡಿಟರ್ಜೆಂಟ್ ಮಾರಾಟ ಮಾಡಿದರು. ತಮ್ಮ ಬ್ರ್ಯಾಂಡ್ಗೆ ತಮ್ಮ ದಿವಂಗತ ಮಗಳ ಹೆಸರಿಟ್ಟರು ಮತ್ತು ಬೃಹತ್ ವ್ಯಾಪಾರ ಸಾಮ್ರಾಜ್ಯವನ್ನು ಕಟ್ಟಿದರು.ಇಂದು ಕರ್ಸನ್ಭಾಯ್ ಪಟೇಲ್ ಅವರು ಭಾರತದ ಪ್ರಖ್ಯಾತ ಬಿಲಿಯನೇರ್ ಉದ್ಯಮಿ, ಕೈಗಾರಿಕೋದ್ಯಮಿ ಮತ್ತು ನಿರ್ಮಾ ಗ್ರೂಪ್ನ ಸಂಸ್ಥಾಪಕ. ತಮ್ಮ ಸೈಕಲ್ ಮೇಲೆ ಡಿಟರ್ಜೆಂಟ್ ಪೌಡರ್ ಮಾರಾಟ ಮಾಡುವುದರಿಂದ ಹಿಡಿದು ಸಾವಿರಾರು ಕೋಟಿ ರೂಪಾಯಿಗಳ ಉದ್ಯಮ ಸಾಮ್ರಾಜ್ಯವನ್ನು ಅವರು ಕಟ್ಟಿದ್ದಾರೆ. ಇವರ ಯಶೋಗಾಥೆ ಭಾರತೀಯ ಉದ್ಯಮ ರಂಗದಲ್ಲಿ ಅತ್ಯಂತ ಸ್ಫೂರ್ತಿದಾಯಕವಾಗಿದೆ.
ಗುಜರಾತ್ ನಲ್ಲಿ ಸರ್ಕಾರಿ ಪ್ರಯೋಗಾಲಯ ತಂತ್ರಜ್ಞರಾಗಿದ್ದ ಕರ್ಸನ್ಭಾಯ್ ಪಟೇಲ್ 1969 ರಲ್ಲಿ ತಮ್ಮ ಮನೆಯ ಹಿಂಭಾಗದಲ್ಲಿ ಡಿಟರ್ಜೆಂಟ್ ಪೌಡರ್ ತಯಾರಿಸಲು ಪ್ರಾರಂಭಿಸಿದರು. ಸಾಮಾನ್ಯ ಕುಟುಂಬಗಳಿಗೆ ಪ್ರೀಮಿಯಂ ಡಿಟರ್ಜೆಂಟ್ಗಳು ದುಬಾರಿಯಾಗಿದ್ದ ಸಮಯದಲ್ಲಿ ಬಡ ಮತ್ತು ಮಧ್ಯಮ ವರ್ಗದವರಿಗೆ ಕೈಗೆಟುಕುವ ಹಾಗೂ ಉತ್ತಮ ಗುಣಮಟ್ಟದ ಪರ್ಯಾಯವನ್ನು ಡಿಟರ್ಜೆಂಟ್ ಸೃಷ್ಟಿಸಿದರು. ಅದಾದ ನಂತರ ನಡೆದಿದ್ದೆಲ್ಲವೂ ಈಗ ಇತಿಹಾಸ.
ನಿರ್ಮಾ ಪ್ರಾಡೆಕ್ಟ್ ಪ್ರಾರಂಭ ಮಾಡಿದ ಪ್ರಾರಂಭದ ದಿನಗಳಲ್ಲಿ ಕರ್ಸನ್ಭಾಯ್ ಪಟೇಲ್ ಅವರು ಮೂರು ವರ್ಷಗಳ ಕಾಲ ತಮ್ಮ ಸೈಕಲ್ನಲ್ಲಿಯೇ ಪ್ಯಾಕೆಟ್ಗಳನ್ನು ಲೋಡ್ ಮಾಡಿಕೊಂಡು ಅಹಮದಾಬಾದ್ನಲ್ಲಿ ಮನೆ-ಮನೆಗೆ ತೆರಳಿ ಮಾರಾಟ ಮಾಡಿದರು. ನಿರ್ಮಾ ಪ್ರಾಡೆಕ್ಟ್ ನಂಬಿಕೆಯನ್ನು ಬೆಳೆಸಲು ಉತ್ಪನ್ನ ಚೆನ್ನಾಗಿಲ್ಲ ಅಂದರೆ ಹಣ ಹಿಂತಿರುಗಿಸುವ ಗ್ಯಾರಂಟಿಯನ್ನು ಸಹ ಕೊಟ್ಟರು. ಈ ಪ್ರಾಡೆಕ್ಟ್ಗೆ ತಮ್ಮ ದಿವಂಗತ ಮಗಳು ನಿರುಪಮಾ ಅವರ ಹೆಸರನ್ನು ಬ್ರ್ಯಾಂಡ್ಗೆ ಹೆಸರಿಸಿದರು ಮತ್ತು ಐಕಾನಿಕ್ ಪ್ಯಾಕೇಜಿಂಗ್ ಮತ್ತು ಜಾಹೀರಾತುಗಳ ಮೂಲಕ ಮನೆ ಮನೆ ಮಾತಾಗುವಂತೆ ಮಾಡಿದರು.
ಅಂದಾಜು ಇಂದು 75,000 ಕೋಟಿ ರೂ. ವಹಿವಾಟು.!!
ಒಬ್ಬ ವ್ಯಕ್ತಿಯಿಂದ ಪ್ರಾರಂಭವಾದ ಉದ್ಯಮವು ಮುಂದೆ ಭಾರತಾದ್ಯಂತ ಗುರುತಿಸಲ್ಪಟ್ಟ FMCG ಬ್ರ್ಯಾಂಡ್ಗಳಲ್ಲಿ ಒಂದಾಗಿ ಬೆಳೆಯಿತು. ನಿರ್ಮಾ ಹಿಂದೂಸ್ತಾನ್ ಯೂನಿಲಿವರ್ನಂತಹ ಸಂಸ್ಥೆಗೆ ಪೈಪೋಟಿ ನೀಡಿತು. ಸೋಪ್ಗಳು, ರಾಸಾಯನಿಕಗಳು, ಸಿಮೆಂಟ್ (ನುವೊಕೊ ವಿಸ್ಟಾಸ್) ಮತ್ತು ಇನ್ನೂ ಹಲವು ಉತ್ಪನ್ನಗಳನ್ನು ನಿರ್ಮಾ ಸಂಸ್ಥೆ ಉತ್ಪಾದಿಸಲು ಪ್ರಾರಂಭಿಸಿತು. ಇಂದು ಈ ಉದ್ಯಮವು ಸಾವಿರಾರು ಜನರನ್ನು ನೇಮಿಸಿಕೊಳ್ಳುವ ಮತ್ತು ಸಾವಿರಾರು ಕೋಟಿ ವಹಿವಾಟು ಉತ್ಪಾದಿಸುವ ವೈವಿಧ್ಯಮಯ ಗ್ರೂಪ್ ಆಗಿ ದೇಶದಲ್ಲಿ ಖ್ಯಾತಿ ಗಳಿಸಿದೆ. ಈಗ ಈ ಉದ್ಯಮದ ಮೌಲ್ಯ ಅಥವಾ ಕಂಪನಿಯ ವಹಿವಾಟು ಅಂದಾಜು 75,000 ಕೋಟಿಗೂ ಹೆಚ್ಚು ಎಂದು ಹೇಳಲಾಗಿದೆ.


