ನೇಪಾಳ : ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ 1643 ವಿದ್ಯಾರ್ಥಿಗಳು! ಶಿಕ್ಷಕ ಮಾಡಿದ್ದಾದರು ಎನು.?
news.ashwasurya.in
ಅಶ್ವಸೂರ್ಯ/ನೇಪಾಳ : ನೇಪಾಳ ಪ್ರವಾಹದ ನೀರು ಎಲ್ಲವನ್ನು ಕೊಚ್ಚಿಕೊಂಡು ಹೋಗಿತ್ತಿತ್ತು,ಅದೆ ಸಮಯದಲ್ಲಿ ಶಿಕ್ಷಕರೊಬ್ಬರು ತೆಗೆದುಕೊಂಡು ನಿರ್ಧಾರದಿಂದ ಶಾಲೆಯಲ್ಲಿದ್ದ 1643 ವಿದ್ಯಾರ್ಥಿಗಳು ಬದುಕುಳಿದಿದ್ದಾರೆ. ಇದೀಗ ಶಾಲೆ ಎಲ್ಲಿತ್ತು ಅನ್ನೋ ಕುರುಹೂ ಕೂಡ ಈಗ ಅಲ್ಲಿ ಕಾಣುತ್ತಿಲ್ಲ.!
ನೇಪಾಳ ಪ್ರವಾಹದ ದುರಂತ ಕತೆಗಳು ಒಂದೊಂದಾಗಿ ಹೊರಬರುತ್ತಿದೆ.ಒಂದೊಂದು ಘಟನೆಯು ಮನಕಲುಕುವಂತಿದೆ ಇನ್ನೂ ಕೇಲವು ಘಟನೆಗಳು ರೊಚಕವಾಗಿದೆ, ಇದೇ ವೇಳೆ ಹಲವರು ಪ್ರಾಣ ಉಳಿಸಿದ ಹಿರೋಗಳಿಗೆ ಎಲ್ಲೆಡೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೀಗೆ ನೇಪಾಳ ಮಹಾ ಪ್ರವಾಹದಲ್ಲಿ ಮೂರು ಅಂತಸ್ತಿನ ದೊಡ್ಡ ಶಾಲೆಯೊಂದು ಕೊಚ್ಚಿ ಹೋಗಿದೆ. ಆದರೆ ಈ ಶಾಲೆಯಲ್ಲಿದ್ದ 1643 ವಿದ್ಯಾರ್ಥಿಗಳು ಮಾತ್ರ ಸುರಕ್ಷಿತರಾಗಿದ್ದಾರೆ.!! ಇದಕ್ಕೆ ಕಾರಣ ಶಾಲೆಯ ಶಿಕ್ಷಕ ಸೆಕೆಂಡ್ಗಳ ಅಂತರದಲ್ಲಿ ತೆಗೆದುಕೊಂಡು ಅವರ ನಿರ್ಧಾರದಿಂದ ವಿದ್ಯಾರ್ಥಿಗಳ ಜೀವ ಉಳಿದಿದೆ.!
47 ವರ್ಷದ ಶಿಕ್ಷಕ ರಾಜೇಂದ್ರ ದವಾಡಿ ರಿಯಲ್ ಹೀರೋ ಆಗಿದ್ದಾರೆ.
ನೇಪಾಳದ ನುವಾಕೋಟ್ ಜಿಲ್ಲೆಯ ತ್ರಿಶೂಲಿ ಕಣವೆಯಲ್ಲಿನ ಮೂರು ಅಂತಸ್ತಿನ ದೊಡ್ಡ ಶಾಲೆ ಇತ್ತು, ಪ್ರವಾಹದ ಸಂದರ್ಭದಲ್ಲಿ ಈ ಶಾಲೆಯಲ್ಲಿ 1643 ವಿದ್ಯಾರ್ಥಿಗಳು ಕಲಿಕೆಯಲ್ಲಿ ಮಗ್ನರಾಗಿದ್ದರು.ಇದೆ ಸಮಯಕ್ಕೆ 9.20ಕ್ಕೆ ದವಾಡಿ ಸ್ನೇಹಿತ ಕರೆ ಮಾಡಿದ್ದರು. ಆತಂಕದಲ್ಲೇ ನಮ್ಮ ಗ್ರಾಮ ಕೊಚ್ಚಿ ಹೋಗಿದೆ. ಕಂಡು ಕೇಳರಿಯದ ಪ್ರವಾಹ ಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾಗಲು ದಾವಾಡಿಗೆ ಹೇಳಿದ್ದ. ನದಿಯಿಂದ ಕೆಲ ದೂರಗಳಲ್ಲಿ ಶಾಲೆ ಇತ್ತು. ಇಷ್ಟೇ ಅಲ್ಲ ನದಿಯಿಂದ 60 ಮೀಟರ್ ಎತ್ತರದಲ್ಲಿ ಶಾಲೆ ಇದೆ. ಇನ್ನು ಕಾಂಕ್ರೀಟ್ನಿಂದ ಕಟ್ಟಿದ ಗಟ್ಟಿಮುಟ್ಟಾದ ಶಾಲೆ ಇದು. ಹೀಗಾಗಿ ಅಪಾಯ ಆಗದು ಎಂದು ರಾಜೇಂದ್ರ ಭಾವಿಸಿದ್ದರು. ಕರೆ ಕಟ್ ಮಾಡಿ ಕೆಲ ನಿಮಿಷಗಳಲ್ಲೇ ಪೋಷಕರೊಬ್ಬರು ಶಾಲೆಯ ಬಳಿಗೆ ಓಡೋಡಿ ಬಂದಿದ್ದರು. ಪ್ರವಾಹ ತೀವ್ರವಾಗಿದೆ ಎಂದು ಸಂಬಂಧಿಕರು ಹೇಳಿದ್ದಾರೆ. ಹಲವರು ಕೊಚ್ಚಿ ಹೋಗಿದ್ದಾರೆ ಎಂದಿದ್ದಾರೆ. ಅಷ್ಟರಲ್ಲೇ ರಾಜೇಂದ್ರ ಅವರಿಗೆ ಪರಿಸ್ಥಿತಿ ಅರಿವಾಗಿದೆ. ಸಮಯವೂ ಮೀರಿದೆ.

ಶಾಲೆಯ ಬೆಲ್ ಹೊಡೆಯಲು ಸೂಚಿಸಿದ ಶಿಕ್ಷಕ
ಪರಿಸ್ಥಿತಿ ಅರಿವಾಗುತ್ತಿದ್ದಂತೆ ಸಮಯವೂ ಮಿಂಚಿತ್ತು. ಪ್ರವಾಹದ ನೀರು 75 ಕಿಲೋಮೀಟರ್ ವೇಗದಲ್ಲಿ ಬರುತ್ತಿತ್ತು. ಶಾಲೆಯ ಬೆಲ್ ಬಾರಿಸಲು ಸೂಚಿಸಿದ್ದು ಮಾತ್ರವಲ್ಲ, ಶಿಕ್ಷಕರಿಗೆ ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದಾರೆ. ಎಲ್ಲಾ ಕೊಠಡಿಗಳಿಂದ ಮಕ್ಕಳನ್ನು ಶಾಲೆಯಿಂದ ಹೊರಕಳುಹಿಸಲು ಸೂಚಿಸಿದ್ದಾರೆ. ಪ್ರವಾಹ ಬರುತ್ತಿದೆ. ಹೀಗಾಗಿ ರಾಜೇಂದ್ರ ಸರ್ ದ್ವಾರದ ಬಳಿ ನಿಂತಿದ್ದಾರೆ. ನೂಕು ನುಗ್ಗಲು ಮಾಡದೇ ಸೂಚನೆ ಪಾಲಿಸಿ ಎಂದು ಶಾಲಾ ಕೊಠಡಿಗಳಲ್ಲಿ ಶಿಕ್ಷಕರು ಸೂಚಿಸಿದ್ದಾರೆ. ಇತ್ತ ಮಕ್ಕಳು ಬರುತ್ತಿದ್ದಂತೆ ಕಾಲ್ನಡಿಗೆಯಲ್ಲಿ ಶಾಲೆಯಿಂದ ಕೆಲ ದೂರ ಓಡಲು ಆರಂಭಿಸಿದ್ದಾರೆ. ಶಿಕ್ಷಕ ರಾಜೇಂದ್ರ, ವಿದ್ಯಾರ್ಥಿಗಳು ಹಾಗೂ ಇತರ ಸಿಬ್ಬಂದಿಗಳು ಹಿಂಬಾಲಿಸಿದ್ದಾರೆ. ಇದರ ನಡುವೆ ಪ್ರವಾಹದ ಸುದ್ದಿ ತಿಳಿದ ವಿದ್ಯಾರ್ಥಿಯೊಬ್ಬಳು ಅಸ್ವಸ್ಥಳಾಗಿದ್ದಾಳೆ. ಈಕೆಯನ್ನು ಬೈಕ್ನಲ್ಲಿ ಎತ್ತರ ಪ್ರದೇಶಕ್ಕೆ ಕರೆಯದೊಯ್ಯಲಾಯಿತು.
ಇತ್ತ ವಿದ್ಯಾರ್ಥಿಗಳು ಸೇರಿದಂತೆ ಇಡೀ ಶಾಲೆಯ ಸಿಬ್ಬಂದಿಗಳು ನದಿ ಎಷ್ಟೇ ತುಂಬಿ ಹರಿದರೂ ಯಾವುದೇ ಸಮಸ್ಯೆಯಾಗದಂತೆ ಪಕ್ಕದ ಎತ್ತರದ ಪ್ರದೇಶ ಹತ್ತಿದ್ದಾರೆ. ಅಷ್ಟರಲ್ಲೇ ಪ್ರವಾಹದಿಂದ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಕೆಲವೇ ಕ್ಷಣದಲ್ಲಿ ಶಾಲೆ ಮೇಲಿನಿಂದ ನೀರು ಹರಿದಿದೆ. ಶಾಲೆ ಕಟ್ಟಡ ಕೊಚ್ಚಿ ಹೋಗಿದೆ. ಶಿಕ್ಷನ ತಕ್ಷಣದ ನಿರ್ಧಾರದಿಂದ 1643 ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ.


