ತೀರ್ಥಹಳ್ಳಿ : ತೀರ್ಥಹಳ್ಳಿಯಲ್ಲಿ ” ಮಲೆನಾಡು ಸಿರಿ” ಸಹಕಾರಿ ಸಂಘದ ಅದ್ದೂರಿ ಆರಂಭ — ಆಗಸ್ಟ್ 31ರಂದು ಭವ್ಯ ಉದ್ಘಾಟನೆ.

ಸದಸ್ಯರ ಆರ್ಥಿಕ ಅಗತ್ಯಗಳಿಗೆ ಸ್ಪಂದಿಸುವ ಉದ್ದೇಶದಿಂದ ಸಂಘವು ವಿವಿಧ ಉಳಿತಾಯ ಹಾಗೂ ಸಾಲ ಸೌಲಭ್ಯಗಳನ್ನು ಒದಗಿಸುವುದಾಗಿ ತಿಳಿಸಿದೆ. ಸದಸ್ಯರ ಉಳಿತಾಯ ಖಾತೆ, ನಿತ್ಯ ನಿಧಿ ಸಂಗ್ರಹ, ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳ ಸಾಲ, ಗೃಹ ನಿರ್ಮಾಣ ಮತ್ತು ಖರೀದಿ ಸಾಲ, ನಿವೇಶನ ಖರೀದಿ ಸಾಲ, ಸ್ಥಿರಾಸ್ತಿ ಆಧಾರಿತ ಸಾಲ, ಚಾಮೀನು ಸಾಲ, ವೇತನ ಆಧಾರಿತ ಸಾಲ ಸೇರಿದಂತೆ ಹಲವು ಸೌಲಭ್ಯಗಳನ್ನು ಸಂಘದ ಮೂಲಕ ಪಡೆಯಬಹುದಾಗಿದೆ.
ಇದರ ಜೊತೆಗೆ ನಿಶ್ಚಿತ ಠೇವಣಿಗಳಿಗೆ ಆಕರ್ಷಕ ಬಡ್ಡಿದರಗಳನ್ನು ಪ್ರಕಟಿಸಲಾಗಿದೆ. 91ರಿಂದ 180 ದಿನಗಳ ಠೇವಣಿಗೆ ಶೇ.6, ಒಂದು ವರ್ಷದ ಠೇವಣಿಗೆ ಶೇ.9 ಹಾಗೂ ಎರಡು ವರ್ಷದ ಠೇವಣಿಗೆ ಶೇ.9.5 ಬಡ್ಡಿದರ ನೀಡುವುದಾಗಿ ಆಹ್ವಾನ ಪತ್ರಿಕೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!