ಮಹಾರಾಷ್ಟ್ರ : ಐಫೋನ್ EMI ಕಿರಿಕ್ ಮಗನ ಹುಚ್ಚಾಟಕ್ಕೆ ಕುಟುಂಬವೆ ಬಲಿ.
news.ashwasurya.in
ದುಬಾರಿ iPhone ಖರೀದಿಸಿ ಅದರ ಕಂತು (EMI) ಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ಹಣದ ವಿಷಯಕ್ಕೆ ಸಂಬಂಧಿಸಿದಂತೆ ದೊಡ್ಡ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಅಪ್ಪ ಅಮ್ಮ ಮತ್ತು ಮಗನ ನಡುವೆ ಉಂಟಾದ ಜಗಳ ಕೊನೆಗೆ ದುರಂತ ಅಂತ್ಯದೊಂದಿಗೆ ಕೊನೆಯಾಗಿದೆ….
ಅಶ್ವಸೂರ್ಯ/ಮುಂಬೈ : ಮಹಾರಾಷ್ಟ್ರದ ಸಂಭಾಜಿನಗರದ ಬೆಟ್ಟದ ಮೇಲಿಂದ ಬಿದ್ದು ತಂದೆ-ತಾಯಿ-ಮಗ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಟ್ವಿಸ್ಟ್ ದೊರೆತಿದ್ದು,ಸಂಪೂರ್ಣ ಕುಟುಂಬದ ದುರಂತ ಅಂತ್ಯಕ್ಕೆ ಐಫೋನ್ ಸಾಲವೇ ಕಾರಣ ಎಂಬ ಅಂಶ ಬೆಳಕಿಗೆ ಬಂದಿದೆ.
ಸಂಭಾಜಿನಗರದಲ್ಲಿ ಬೆಟ್ಟದಿಂದ ಬಿದ್ದ ಕುಟುಂಬ :
ಹೌದು.. ದುಬಾರಿ iPhone ಖರೀದಿಸಿ ಅದರ ಕಂತು (EMI) ಪಾವತಿಸಲು ಹಣದ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ಉಂಟಾದ ಜಗಳ ಕೊನೆಗೆ ಭೀಕರ ದುರಂತಕ್ಕೆ ಕಾರಣವಾಯಿತು ಎನ್ನಲಾಗಿದೆ. 18 ವರ್ಷದ ಯುವಕನನ್ನು ಮನವೊಲಿಸಲು ತೆರಳಿದ್ದ ಆತನ ತಂದೆ-ತಾಯಿಯೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ಸಂದರ್ಭದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲಿದ್ದರೂ, ಸುರಕ್ಷತಾ ಜಾಲವನ್ನು ಏಕೆ ಅಳವಡಿಸಲು ಸಾಧ್ಯವಾಗಲಿಲ್ಲ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ.?
ಆರಂಭದಲ್ಲಿ ಯುವಕ ಖಿನ್ನತೆಯಿಂದ ಬಳಲುತ್ತಿದ್ದ ಎನ್ನುವ ವರದಿಗಳು ಬಂದಿದ್ದರೂ, ಈ ಕುರಿತು ಪೊಲೀಸರು ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಕುಟುಂಬದೊಳಗಿನ ವಿವಾದದ ಇತರ ವಿವರಗಳ ಬಗ್ಗೆಯೂ ತನಿಖೆ ಮುಂದುವರಿದಿದ್ದು ಇನ್ನಷ್ಟು ಮಾಹಿತಿ ಹೊರ ಬರಬೇಕಿದೆ.


