
ಶಿವಮೊಗ್ಗ : ಮಲೆನಾಡಿನ ಮದ್ಯದ ಸಾಮ್ರಾಜ್ಯ ಮತ್ತು ಅಬಕಾರಿ ಇಲಾಖೆಯ ‘ವರ್ಗಾವಣೆ’ ರಹಸ್ಯ.!! 🍺 🍺 🍺 🍺 🍺.
ಮದ್ಯಪಾನ ಆರೋಗ್ಯಕ್ಕೆ ಹಾನಿಕರ.

news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆ ಕೇವಲ ಪ್ರಕೃತಿ ಸೌಂದರ್ಯಕ್ಕಷ್ಟೇ ಅಲ್ಲ,ಈ ಪವಿತ್ರ ನೆಲದಲ್ಲಿ ಅದಷ್ಟೋ ಅಕ್ರಮಗಳು “ನೆಲೆ ಊರಿ ಕುಳಿತಿದೆ”.!ಸಾಕಷ್ಟು ಅಂದಾದುಂದಿಯ ದಂಧೆಯ ಜೋತೆಗೆ ಕೆಲವು ಇಲಾಖೆಗಳಂತು ಭ್ರಷ್ಟಾಚಾರದ ಬಯಲಾಗಿದೆ.!ಅದರಲ್ಲೂ ಪ್ರಮುಖವಾಗಿ
ಅಬಕಾರಿ ಇಲಾಖೆಯ ಪಾಲಿಗೆ ಅತ್ಯಂತ ‘ಲಾಭದಾಯಕ’ ಮತ್ತು ‘ ಭರ್ಜರಿ ವಸೂಲಾತಿಯ ಪ್ರಮುಖ ಜಿಲ್ಲೆಯಾಗಿ ಗುರುತಿಸಿಕೊಂಡಿದೆ. ಜಿಲ್ಲೆಯಲ್ಲಿ ಅಬಕಾರಿ ಉಪ ಆಯುಕ್ತರು (DC) ಗಳು ವರ್ಗಾವಣೆಯಾದಾಗಲೆಲ್ಲಾ ತೆರೆಮರೆಯಲ್ಲಿ ನಡೆಯುವ ಒಳ ಒಪ್ಪಂದಗಳು, ಹರಿದಾಡುವ ಕೋಟಿ ಕೋಟಿ ಹಣದ ಮಾತುಗಳು ಮತ್ತು ಮದ್ಯದ ಸನ್ನದುಗಳ (Licences) ಸುತ್ತ ಹೆಣೆಯಲಾದ ಜಾಲ ಸದಾ ಚರ್ಚೆಗೆ ಗ್ರಾಸವಾಗುತ್ತದೆ. ಹಾಗಾದರೆ ಪ್ರತಿ ಬಾರಿ ಅಧಿಕಾರಿಗಳು ಬದಲಾದಾಗಲೂ ಜಿಲ್ಲೆಯಿಂದ ಹೊರಹೋಗುವ ಮತ್ತು ಹೊಸದಾಗಿ ಆಗಮಿಸುವ ಅಬಕಾರಿ ಡಿಸಿಗಳ ನಡುವೆ ನಡೆಯುವ ಆ ‘ಒಳ ಒಪ್ಪಂದ’ ಮತ್ತು ಇಲ್ಲಿನ ಮದ್ಯದ ದಂಧೆಯ ಕಥೆ ಏನು? ಎನ್ನುವುದರ ಒಂದಷ್ಟು ಮಾಹಿತಿ ಇಲ್ಲಿದೆ…
🛑 ವರ್ಗಾವಣೆ ವೇಳೆ ನಡೆಯುವ ‘ಒಳ ಒಪ್ಪಂದ’ದ ರಹಸ್ಯವೇನು?

ರಾಜ್ಯ ಅಬಕಾರಿ ಇಲಾಖೆಯಲ್ಲಿ ಇತ್ತೀಚೆಗೆ ಕೇಳಿ ಬಂದಿರುವ ಕೋಟ್ಯಂತರ ರೂಪಾಯಿಗಳ ಭ್ರಷ್ಟಾಚಾರದ ಆರೋಪಗಳು ಹಾಗೂ ದೂರುಗಳ ಹಿನ್ನೆಲೆಯಲ್ಲಿ, ವರ್ಗಾವಣೆಗಳ ಹಿಂದಿನ ಅಸಲಿ ಆಟ ಬಯಲಾಗಿದೆ. ಮೂಲಗಳ ಪ್ರಕಾರ, ಶಿವಮೊಗ್ಗದಂತಹ ಪ್ರಮುಖ ಜಿಲ್ಲೆಗೆ ಬರಲು ಅಧಿಕಾರಿಗಳು ಭಾರೀ ಮೊತ್ತದ ‘ಲಂಚ’ ಅಥವಾ ‘ವರ್ಗಾವಣೆ ಶುಲ್ಕ’ ನೀಡಬೇಕಾಗುತ್ತದೆ ಎಂಬ ಆರೋಪಗಳಿವೆ.?
ಮಾಮೂಲಿ ವಸೂಲಾತಿಯ ‘ಹಸ್ತಾಂತರ’ (Handover of Collection Roots) :
ಜಿಲ್ಲೆಯಿಂದ ಹೊರಹೋಗುವ ಡಿಸಿ, ತಾನು ಇಲ್ಲಿಯವರೆಗೆ ಯಾವೆಲ್ಲಾ ಸನ್ನದುದಾರರಿಂದ (Licence Holders) ಮತ್ತು ಮದ್ಯದ ಅಂಗಡಿಗಳಿಂದ ಎಷ್ಟೆಷ್ಟು ‘ತಿಂಗಳ ಮಾಮೂಲಿ’( fix amount ) ಪಡೆಯುತ್ತಿದ್ದೆ ಎಂಬ ಸಂಪೂರ್ಣ ನೆಟ್‌ವರ್ಕ್ ನ ಮಾಹಿತಿಯನ್ನು ಹೊಸದಾಗಿ ಬರುವ ಅಧಿಕಾರಿಗೆ ತಿಳಿಸುತ್ತಾರೆ.
ಬಾಕಿ ವಸೂಲಾತಿಯ ಹೊಂದಾಣಿಕೆ: ಹಳೇ ಅಧಿಕಾರಿ ವರ್ಗಾವಣೆಯಾಗುವ ಮುನ್ನ ಜಿಲ್ಲೆಯ ಅಬಕಾರಿ ಸನ್ನದು ಮಾಲಿಕರಿಂದ ಬರಬೇಕಾದ ಬಾಕಿ ಹಣವನ್ನು (Pending Collections) ವಸೂಲಿ ಮಾಡಲು ಹೊಸ ಅಧಿಕಾರಿ ಹೇಳಿ ಹೋಗುತ್ತಾರಂತೆ.!? ಅಥವಾ ಆ ಜವಾಬ್ದಾರಿಯನ್ನು ತಾವೇ ವಹಿಸಿಕೊಂಡು ನಂತರ ಹಂಚಿಕೊಳ್ಳುವ ಒಪ್ಪಂದ ಕೂಡ ನೆಡೆಯುತ್ತದೆ ಎನ್ನುವ ಮಾತು ಅಬಕಾರಿ ಅಖಾಡದಿಂದಲೆ ಕೇಳಿಬರುತ್ತಿದೆ.
‘ಸೇಫ್ ಜೋನ್’ ಭರವಸೆ: ಜಿಲ್ಲೆಯಲ್ಲಿ ನಡೆದಿರುವ ನಿಯಮಬಾಹಿರ ಪರವಾನಗಿ ನವೀಕರಣಗಳು ಅಥವಾ ಅಕ್ರಮಗಳ ಫೈಲ್‌ಗಳನ್ನು ಮುಚ್ಚಿಹಾಕಲು ಮತ್ತು ಹೊಸದಾಗಿ ಬರುವ ಅಧಿಕಾರಿಗೆ ಯಾವುದೇ ತನಿಖೆಯ ಬಿಸಿ ತಟ್ಟದಂತೆ ಇಲಾಖೆಯ ಒಳಗೇ ಪರಸ್ಪರ ಸಹಕರಿಸುವ ಒಪ್ಪಂದವು ಪ್ರಮುಖವಾಗಿರುತ್ತದೆ.
🍺 ಶಿವಮೊಗ್ಗ ಜಿಲ್ಲೆಯ ವಿವಿಧ ಮದ್ಯದ ಸನ್ನದುಗಳು (Licences) ಮತ್ತು ಅಕ್ರಮದ ಆಟ :

ಶಿವಮೊಗ್ಗ ಜಿಲ್ಲೆಯಲ್ಲಿ ವಿವಿಧ ರೀತಿಯ ಮದ್ಯದ ಸನ್ನದುಗಳಿದ್ದು, ಪ್ರತಿಯೊಂದು ವರ್ಗದಲ್ಲೂ ಅಬಕಾರಿ ಅಧಿಕಾರಿಗಳು ತಮ್ಮದೇ ಆದ ‘ದರ’ ನಿಗದಿಪಡಿಸಿದ್ದಾರಂತೆ.!? ಎಂಬ ಆರೋಪ ವ್ಯಾಪಕವಾಗಿದೆ.
1. CL-1: ಸಗಟು ಮದ್ಯ ಮಾರಾಟ ಸನ್ನದು (Wholesale)ಇದು ಇಡೀ ಜಿಲ್ಲೆಗೆ ಮದ್ಯ ಸರಬರಾಜು ಮಾಡುವ ದೊಡ್ಡ ನೆಟ್‌ವರ್ಕ್. ಇಲ್ಲಿ ಕರ್ನಾಟಕ ಸ್ಟೇಟ್ ಬೇವರೇಜಸ್ ಕಾರ್ಪೊರೇಷನ್ ಲಿಮಿಟೆಡ್ (KSBCL) ಡಿಪೋಗಳ ಮೂಲಕ ವ್ಯವಹಾರ ನಡೆಯುತ್ತದೆ. ಸಗಟು ವ್ಯಾಪಾರಿಗಳಿಂದ ತಿಂಗಳ ಕೋಟಾ ಆಧಾರದ ಮೇಲೆ ಅಧಿಕಾರಿಗಳು ಕಮಿಷನ್ ಪಡೆಯುತ್ತಾರೆ ಎಂಬ ಮಾತುಗಳು ದೊಡ್ಡದಾಗಿ ಕೇಳಿಬರುತ್ತಿದೆ.
2.CL-2: ಚಿಲ್ಲರೆ ಮದ್ಯ ಮಾರಾಟ ಮಳಿಗೆಗಳು (Retail Liquor Shops)ಸಾಮಾನ್ಯ ವೈನ್ ಶಾಪ್‌ಗಳು ಇದರ ಅಡಿಗೆ ಬರುತ್ತವೆ. ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ಭಾಗದಲ್ಲಿರುವ CL-2 ಅಂಗಡಿಗಳಲ್ಲಿ ನಿಗದಿತ ಬೆಲೆಗಿಂತ (MRP) ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡಲು ಅಧಿಕಾರಿಗಳು ‘ಅಲಿಖಿತ ಅನುಮತಿ’ ನೀಡಿರುತ್ತಾರೆ. ಇದಕ್ಕೆ ಪ್ರತಿಯಾಗಿ ಪ್ರತಿ ಅಂಗಡಿಯಿಂದ ತಿಂಗಳ ನಿಗದಿತ ಹಫ್ತಾ ವಸೂಲಿಯಾಗುತ್ತದೆ,
3. CL-4: ಕ್ಲಬ್‌ಗಳಿಗೆ ನೀಡುವ ಸನ್ನದು: ಜಿಲ್ಲೆಯ ವಿವಿಧ ಪ್ರತಿಷ್ಠಿತ ಕ್ಲಬ್‌ಗಳಲ್ಲಿ ಮದ್ಯ ಪೂರೈಸಲು ಈ ಪರವಾನಗಿ ನೀಡಲಾಗುತ್ತದೆ. ಕ್ಲಬ್‌ಗಳಲ್ಲಿ ನಿಯಮಾವಳಿಗಳ ಉಲ್ಲಂಘನೆಯಾಗುತ್ತಿದ್ದರೂ (ಸಮಯದ ಮಿತಿ, ಸಾರ್ವಜನಿಕರ ಪ್ರವೇಶ ಇತ್ಯಾದಿ) ಅಬಕಾರಿ ಇಲಾಖೆ ಕಣ್ಣು ಮುಚ್ಚಿ ಕುಳಿತುಕೊಳ್ಳಲು ಈ ಒಳ ಒಪ್ಪಂದವೇ ಕಾರಣ.
4,CL-6 & CL-6A: ಹೋಟೆಲ್ ಹಾಗೂ ಸ್ಟಾರ್ ಹೋಟೆಲ್‌ಗಳಲ್ಲಿ ಮದ್ಯ ಪೂರೈಕೆ ಸನ್ನದು: ಪ್ರವಾಸಿ ತಾಣವಾದ ಶಿವಮೊಗ್ಗದಲ್ಲಿ ರೆಸಾರ್ಟ್‌ಗಳು ಮತ್ತು ಸ್ಟಾರ್ ಹೋಟೆಲ್‌ಗಳ ಸಂಖ್ಯೆ ಹೆಚ್ಚಿದೆ. ಇಲ್ಲಿಗೆ ಬರುವ ಶ್ರೀಮಂತ ಗ್ರಾಹಕರನ್ನು ಗುರಿಯಾಗಿಸಿಕೊಂಡು ನಿಯಮ ಬಾಹಿರವಾಗಿ ಬಾರ್ ನಡೆಸಲು ಇಲಾಖೆಯ ಅಧಿಕಾರಿಗಳು ದೊಡ್ಡ ಮೊತ್ತದ ಹಣ ಪಡೆದು ರಕ್ಷಣೆ ನೀಡುತ್ತಾರೆ ಎನ್ನುವ ಮಾತು ಸದ್ದು ಮಾಡುತ್ತಿದೆ, 5. CL-7: ಹೋಟೆಲ್ ಮತ್ತು ಬೋರ್ಡಿಂಗ್ ಹೌಸ್ ಸನ್ನದು : ಇತ್ತೀಚಿನ ದಿನಗಳಲ್ಲಿ ಅಬಕಾರಿ ಇಲಾಖೆಗೆ ದೊಡ್ಡಮೊತ್ತದ ಹಣ ಹರಿದು ಬರುತ್ತಿರುವುದು ಆರೋಪಿಸಿರುವಂತೆ, CL-7 ಪರವಾನಗಿ ನೀಡಲು ಮತ್ತು ನವೀಕರಿಸಲು ಬರೋಬ್ಬರಿ ಲಕ್ಷಾಂತರ ರೂಪಾಯಿ ಲಂಚ ವಸೂಲಿ ಮಾಡಲಾಗುತ್ತಿದೆ. ಕೇವಲ ಹೆಸರಿಗಷ್ಟೇ ವಸತಿ ಗೃಹ (Lodging) ತೋರಿಸಿ, ವಾಸ್ತವದಲ್ಲಿ ಬಾರ್ ಆಂಡ್ ರೆಸ್ಟೋರೆಂಟ್ ತರಹವೇ ನಡೆಸಲು ಅಧಿಕಾರಿಗಳು ಲಕ್ಷಾಂತರ ರೂಪಾಯಿ ಒಪ್ಪಂದ ಮಾಡಿಕೊಳ್ಳುತ್ತಾರೆ ಜೋತೆಗೆ ಚಿಲ್ಲರೆ ಅಂಗಡಿ (CL-7 ರೀತಿಯಲ್ಲಿ ) ತೆರೆಯಲು ಅವಕಾಶ ಮಾಡಿಕೊಟ್ಟು ಜೋತೆಗೆ ಗ್ರಾಹಕರಿಗೆ ಅಲ್ಲೆ ಕುಳಿತು ಕುಡಿಯಲು ಆವಕಾಶ ಮಾಡಿಕೋಡಿತ್ತಾರೆ ಎಂದರೆ, ಯಾವ ಮಟ್ಟಕ್ಕೆ ಅಬಕಾರಿ ಇಲಾಖೆಯ ಅಧಿಕಾರಿಗಳು ಇಳಿದಿದ್ದಾರೆ ಎಂದು ನೀವೆ ಯೋಚಿಸಿ.! CL-7 ಸನ್ನದು ಹೊಂದಿರುವ ಇನ್ನೂ ಕೆಲವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಾವು ಕಾನೂನು ಬಾಹಿರವಾಗಿ ತೆರೆದ ಕೌಂಟರ್ ಮುಂದೆ MRP ಬೋರ್ಡ್‌ನ್ನು ಹಾಕಿ ಕೊಂಡಿದ್ದಾರೆಂದರೆಬಯಾವ ಮಟ್ಟದ ವಸೂಲಾತಿಗೆ ಅಬಕಾರಿ ಇಲಾಖೆ ಇಳಿದಿದೆ ಎಂದು ನೀವೆ ಯೋಚಿಸ ಬೇಕಿದೆ. 6. CL-9: ಬಾರ್ ಮತ್ತು ರೆಸ್ಟೋರೆಂಟ್ ಸನ್ನದು (Bar & Restaurant)ಜಿಲ್ಲೆಯಲ್ಲಿ ಅತಿ ಹೆಚ್ಚು ಹಣದ ವಹಿವಾಟು ನಡೆಸುವ ಮತ್ತು ಅತಿ ಹೆಚ್ಚು ಭ್ರಷ್ಟಾಚಾರ ನಡೆಯುವ ವಿಭಾಗವಿದು. ಸಮಯ ಮೀರಿ ಬಾರ್ ನಡೆಸುವುದು,ಕೆಲವು ಬಾರ್ ಗಳಲ್ಲಿ ಮಿಕ್ಸಿಂಗ್ ಮದ್ಯದ ಮಾರಾಟ.! ಮತ್ತು ಅಕ್ಕಪಕ್ಕದ ಅಂಗಡಿಗಳು, ಸಾರ್ವಜನಿಕರ ಆಕ್ಷೇಪವಿದ್ದರೂ ಕೆಲವು ಮಂದಿ ಪರವಾನಗಿ ಮುಂದುವರಿಸಲು ಬಾರ್ ಮಾಲೀಕರು ಮತ್ತು ಅಬಕಾರಿ ಡಿಸಿ ಕಚೇರಿಯ ನಡುವೆ ದೊಡ್ಡಮಟ್ಟದ ಒಪ್ಪಂದ.?
- CL-11 / MSIL: ಎಂ.ಎಸ್.ಐ.ಎಲ್ ಮಳಿಗೆಗಳು;
ಸರ್ಕಾರಿ ಸ್ವಾಮ್ಯದ ಎಂ.ಎಸ್.ಐ.ಎಲ್ ಮಳಿಗೆಗಳಲ್ಲಿ ಕಡ್ಡಾಯವಾಗಿ ಎಂಆರ್‌ಪಿ ದರದಲ್ಲೇ ಮದ್ಯ ಮಾರಾಟ ಮಾಡಬೇಕು. ಆದರೆ, ಕೆಲವು ಕಡೆ ಖಾಸಗಿ ವೈನ್ ಶಾಪ್ ಮಾಲೀಕರ ಜೊತೆ ಒಪ್ಪಂದ ಮಾಡಿಕೊಂಡು, ಎಂ.ಎಸ್.ಐ.ಎಲ್ ಮಳಿಗೆಗಳು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಮುಚ್ಚುವಂತೆ ಅಥವಾ ಕೆಲವು ಬ್ರಾಂಡ್‌ಗಳು ಸಿಗದಂತೆ ಕೃತಕ ಅಭಾವ ಸೃಷ್ಟಿಸುವಲ್ಲಿ ಅಬಕಾರಿ ಅಧಿಕಾರಿಗಳ ಕೈವಾಡವಿರುತ್ತದೆ ಎಂಬ ದೂರುಗಳು ಕೇಳಿಬಂದಿದೆ.ಇನ್ನೂ ಕೆಲವು MSIL ಮಳಿಗೆಗಳಲ್ಲಿ MRP ಗಿಂತ ಹೆಚ್ಚಗೆ ಹಣ ಪಡೆಯುತ್ತಾರೆ ಎನ್ನುವುದು ತಿಳಿದುಬಂದಿದೆ,
🍺 🍺 🍺 🍺 🍺
🚨 ರಾಜ್ಯಾದ್ಯಂತ ಸೃಷ್ಟಿಯಾಗಿರುವ ಅಬಕಾರಿ ಹಗರಣದ ಸದ್ದು ಮತ್ತು ಇತ್ತೀಚೆಗೆ ಜಾರಿ ನಿರ್ದೇಶನಾಲಯ (ED) ಹಾಗೂ ಲೋಕಾಯುಕ್ತ ಇಲಾಖೆ ನಡೆಸುತ್ತಿರುವ ದಾಳಿಗಳು ಶಿವಮೊಗ್ಗ ಜಿಲ್ಲೆಯ ಅಬಕಾರಿ ಇಲಾಖೆಯ ಕಚೇರಿಯ ಮೇಲೆ ಒಮ್ಮೆ ನೆಡೆದರೆ ಶಿವಮೊಗ್ಗ ಜಿಲ್ಲೆಯಲ್ಲಿ ನೆಡೆದ ನೆಡೆಯುತ್ತಿರುವ ಅಷ್ಟು ಭ್ರಷ್ಟಾಚಾರದ ಕರ್ಮಕಾಂಡ ಬಯಲಾಗಿದೆ.

ಮುಂದಿನ ವರದಿಯಲ್ಲಿ CL-7 ಅಂದರೆ ಎನು.? ಶಿವಮೊಗ್ಗ ಜಿಲ್ಲೆಯಲ್ಲಿ ಎಷ್ಟು CL-7 ಸನ್ನದು ಗಳಿವೆ. ಇವರುಗಳು CL-7 ಸನ್ನದುವಿನ ನಿಯಮವನ್ನೆ ದಾಟಿ ಯಾವ ಯಾವ ರೀತಿಯಲ್ಲಿ ಮದ್ಯ ಮಾರಾಟಕ್ಕೆ ನಿಂತಿದ್ದಾರೆ.? ಇವರುಗಳಿಂದ ಅಧಿಕಾರಿಗಳು ಪ್ರತಿ ತಿಂಗಳು ಪಡೆಯುವ ವಸೂಲಾತಿ ಹಣವೇಷ್ಟು.? ಎಲ್ಲವನ್ನೂ ಫೋಟೊ ವಿಡಿಯೋಗಳ ಜೋತೆಗೆ ಸಂಪೂರ್ಣ ವರದಿಯನ್ನು ನಿಮ್ಮ ಮುಂದಿಡಲಿದ್ದೇನೆ ನಿರೀಕ್ಷಿಸಿ…
” CL-7″ ಕರ್ಮಕಾಂಡ ಅಬಕಾರಿ ಇಲಾಖೆ ಸಾತ್.! ಚಿಲ್ಲರೆ ವ್ಯಾಪಾರಕ್ಕೂ ವೇದಿಕೆ ಮಾಡಿಕೊಟ್ಟ ಉಪ ಆಯುಕ್ತರು.!! ಅಬಕಾರಿ ಇಲಾಖೆಯೆ ಭ್ರಷ್ಟಾಚಾರದ ಗಂಗೋತ್ರಿಯಾಗಿದೆ…. ನಿರೀಕ್ಷಿಸಿ..

