Headlines

ಪ್ರಿನ್ಸಿಪಾಲ್ ರೂಪಾ ರೆಡ್ಡಿಗೆ ಇರಿದು ಬರ್ಬರ ಹತ್ಯೆ.! ಶಾಲಾ ವಿದ್ಯಾರ್ಥಿಗಳೇ ಆರೋಪಿಗಳು. CCTV ದೃಶ್ಯ ನೋಡಿ ಪೊಲೀಸರೇ ಬೆಚ್ಚಿ ಬಿದ್ರು.!

ಅಶ್ವಸೂರ್ಯ/ತೆಲಂಗಾಣ : ನಲ್ಗೊಂಡ ಜಿಲ್ಲೆಯ ಕೊಂಡಮಲ್ಲೇಪಲ್ಲಿಯಲ್ಲಿ ನಡೆದ ಪ್ರಿನ್ಸಿಪಾಲ್ ರೂಪಾ ರೆಡ್ಡಿ ಕೊಲೆ ಪ್ರಕರಣದಲ್ಲಿ ಕೊಲೆಯ ಹಿಂದಿನ ಸತ್ಯಗಳು ಬಯಲಾಗಿದೆ.! ಪೊಲೀಸ್ ತನಿಖೆಯ ಸಮಯದಲ್ಲಿ ಮನ ಕಲಕುವ ಸಂಗತಿಗಳು ಬೆಳಕಿಗೆ ಬಂದಿವೆ.
ಪ್ರಾಂಶುಪಾಲರನ್ನು ಅವರ ವಿಧ್ಯಾರ್ಥಿಗಳೇ ಕೊಲೆ ಮಾಡಿದ್ದಾರೆ ಎಂಬುದು ಬಹಿರಂಗವಾಗಿದೆ. 10 ನೇ ತರಗತಿಯ ವಿದ್ಯಾರ್ಥಿಗಳು ಜಲ್ಸಾ ಚಟಕ್ಕೆ ಒಳಗಾಗಿ ಹಣಕ್ಕಾಗಿ ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.


ಪ್ರಾಂಶುಪಾಲ ರೂಪಾ ರೆಡ್ಡಿ ಅವರ ಕೊಲೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ನಲ್ಗೊಂಡ ಜಿಲ್ಲಾ ಎಸ್ಪಿ ಶರತ್ ಚಂದ್ರ ಪವಾರ್, ಪ್ರಕರಣದ ತನಿಖೆಗೆ ವಿಶೇಷ ತಂಡಗಳನ್ನು ರಚಿಸಿ ತನಿಖೆ ಕೈಗೆತ್ತಿಕೊಂಡರು. ಪ್ರಕರಣವನ್ನು ಎರಡು ವಿಶೇಷ ತಂಡಗಳೊಂದಿಗೆ ಭೇದಿಸಲಾಯಿತು. ಸಧ್ಯಕ್ಕೆ ನಾಗಾರ್ಜುನ ಗ್ರಾಮರ್ ಕಾನ್ಸೆಪ್ಟ್ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿಗಳು ಪ್ರಾಂಶುಪಾಲ ರೂಪಾ ರೆಡ್ಡಿ ಅವರನ್ನು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದ್ದು ಇನ್ನಷ್ಟು ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!