ಬಿ ವೈ ರಾಘವೇಂದ್ರ ರವರ ಹುಟ್ಟುಹಬ್ಬ ಪ್ರಯುಕ್ತ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿದ ಬಿ ಆರ್ ಸುಭಾಷ್ & ಬಿ ಆರ್ ಭಗತ್.
ಈ ಪಂದ್ಯಾವಳಿಗೆ ಮುಖ್ಯ ಅತಿಥಿಗಳಾಗಿ ಮಾನ್ಯ ಸಂಸದರ ಪುತ್ರರು ಯುವ ನಾಯಕರುಗಳಾದ ಬಿ ಆರ್ ಸುಭಾಷ್ ಮತ್ತು ಬಿ ಆರ್ ಭಗತ್ ರವರು ಪಂದ್ಯಾವಳಿಯನ್ನು ಉದ್ಘಾಟಿಸಿ ಯುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದರು
ಕೇಕ್ ಕತ್ತರಿಸಿ ಎಲ್ಲಾ ಕ್ರೀಡಾಪಟುಗಳಿಗೆ ಸಿಹಿ ಹಂಚಿದರು
ಪಂದ್ಯಾವಳಿಯಲ್ಲಿ ಯುನೈಟೆಡ್ ಶಿವಮೊಗ್ಗ ಪ್ರಥಮ ಬಹುಮಾನ 20000/-ರೂ ಮತ್ತು ಟ್ರೋಫಿ ಯನ್ನು ತನ್ನದಾಗಿಸಿಕೊಂಡಿತು….

news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ರಾಜ್ಯದ ಜನಪ್ರಿಯ, ಜಿಲ್ಲೆಯ ಜನತೆಯ ಪ್ರೀತಿಪಾತ್ರರು,ಅಭಿವೃದ್ಧಿ ಹರಿಕಾರರು ಅದ ಸಂಸದರಾದ ಸನ್ಮಾನ್ಯ ಶ್ರೀ ಬಿ ವೈ ರಾಘವೇಂದ್ರ ರವರ ಹುಟ್ಟುಹಬ್ಬದ ಪ್ರಯುಕ್ತ ನಗರದ ನೆಹರು ಕ್ರೀಡಾಂಗಣ ದಲ್ಲಿ ಜಿಲ್ಲಾ ವಾಲಿಬಾಲ್ ಸಂಸ್ಥೆ ಮತ್ತು ಬಿ ವೈ ರಾಘವೆಂದ್ರ ಅಭಿಮಾನಿ ಬಳಗದ ವತಿಯಿಂದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು,
ಈ ಪಂದ್ಯಾವಳಿಗೆ ಮುಖ್ಯ ಅತಿಥಿಗಳಾಗಿ ಮಾನ್ಯ ಸಂಸದರ ಪುತ್ರರು ಯುವ ನಾಯಕರುಗಳಾದ ಬಿ ಆರ್ ಸುಭಾಷ್ ಮತ್ತು ಬಿ ಆರ್ ಭಗತ್ ರವರು ಪಂದ್ಯಾವಳಿಯನ್ನು ಉದ್ಘಾಟಿಸಿ ಯುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದರು
ಕೇಕ್ ಕತ್ತರಿಸಿ ಎಲ್ಲಾ ಕ್ರೀಡಾಪಟುಗಳಿಗೆ ಸಿಹಿ ಹಂಚಿದರು
ಪಂದ್ಯಾವಳಿಯಲ್ಲಿ ಯುನೈಟೆಡ್ ಶಿವಮೊಗ್ಗ ಪ್ರಥಮ ಬಹುಮಾನ 20000/-ರೂ ಮತ್ತು ಟ್ರೋಫಿ ಯನ್ನು ಪಡೆದರೆ, ರಿಪ್ಪನ್ ಪೇಟೆಯ ಸಿದ್ಧಿವಿನಾಯಕ ತಂಡ ದ್ವಿತೀಯ ಬಹುಮಾನವನ್ನು ತನ್ನ ಮಡಿಲಿಗೆ ಹಾಕಿಕೊಂಡಿತು.

ಮತ್ತು ಮಿಶಾ ತೀರ್ಥಹಳ್ಳಿ ತಂಡ ತೃತಿಯ ಬಹುಮಾನವನ್ನು ಶಿವಮೊಗ್ಗ ಗ್ರಾಮಾಂತರ ತಂಡ ಚತುರ್ಥ ಬಹುಮಾನವನ್ನು ಪಡೆದರು.
ಈ ಪಂದ್ಯಾವಳಿಯಲ್ಲಿ ಮಾಜಿ ಪಾಲಿಕೆ ಸದಸ್ಯರಾದ ಐಡಿಯಲ್ ಗೋಪಿ. ಜಿಲ್ಲಾ ವಾಲಿಬಾಲ್ ಸಂಸ್ಥೆಯ ಶಶಿ, ವಿಜಯ್, ಸಚಿನ್ ಪೂಜಾರಿ, ಡಾಕ್ಟರ್ ನಾಗರಾಜ್ ರವರು ಭಾಗವಹಿಸಿ ಕ್ರೀಡಾ ಪಟುಗಳಿಗೆ ಪ್ರೋತ್ಸಹಿಸಿ ಈ ಪಂದ್ಯಾವಳಿ ಯಶಸ್ಸಿಗೆ ಕಾರಣರಾಗಿದ್ದಾರೆ.