Shocking News : ಭಟ್ಕಳದಲ್ಲಿ ರೌಡಿಗಳ ಅಟ್ಟಹಾಸ.! ಗಲಾಟೆ ಬಿಡಿಸಲು ಹೋದ ಪೊಲೀಸರಿಗೆ ರೌಡಿಗಳಿಂದ ಚಾಕು ಇರಿತ.!
news.ashwasurya.in
ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ರೌಡಿಶೀಟರ್ಗಳ ನಡುವೆ ಗಲಾಟೆ ನೆಡೆಯುತ್ತದ್ದ ಸಂಧರ್ಭದಲ್ಲಿ ಬಿಡಿಸಲು ಹೋದ ಪೊಲೀಸ್ ಸಿಬ್ಬಂದಿ ಮೇಲೆಯೇ ರೌಡಿಗಳು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.! ಈ ಘಟನೆಯಲ್ಲಿ ಇಬ್ಬರು ಪೊಲೀಸ್ ಪೇದೆಗಳು ಗಾಯಗೊಂಡಿದ್ದು, ಆರೋಪಿ ರೌಡಿಶೀಟರ್ಗಳ ವಿರುದ್ಧ ದೂರು ದಾಖಲಾಗಿದೆ, ಕೆಲವರನ್ನು ವಶಕ್ಕೆ ಪಡೆಯಲಾಗಿದ್ದು ಇನ್ನಷ್ಟು ಆರೋಪಿಗಳ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ…
ಅಶ್ವಸೂರ್ಯ/ಕಾರವಾರ : ಕಾರವಾರದಲ್ಲಿ ಪುಡಿ ರೌಡಿಗಳ ಹಾವಳಿ ಮಿತಿ ಮೀರಿದ್ದು ರಕ್ಷಣೆ ನೀಡುವ ಪೊಲೀಸರ ಮೇಲೆ ಹಲ್ಲೆಗಳು ನೆಡೆಯುತ್ತಿವೆ. ಸಾರ್ವಜನಿಕರ ಮೇಲೆ ಹಲ್ಲೆ ನಡೆಸುತ್ತಿದ್ದ ರೌಡಿಶೀಟರ್ಗಳು ಇದೀಗ ಪೊಲೀಸರ ಮೇಲೂ ಹಲ್ಲೆಗೆ ಮುಂದಾಗುತ್ತಿರುವುದು ಕಾನೂನು ಸುವ್ಯವಸ್ಥೆ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಗಲಾಟೆ ನಡುವೆ ಪೊಲೀಸ್ ಸಿಬ್ಬಂದಿಗೆ ಚಾಕು ಇರಿದ ರೌಡಿಗಳು.!:

ಕಾರವಾರ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ರಾತ್ರಿವೇಳೆ ರೌಡಿಶೀಟರ್ಗಳ ಮಧ್ಯೆ ನಡೆದ ಗಲಾಟೆಗೆ ಸಂಬಂಧಿಸಿದದಂತೆ ಸ್ಥಳಕ್ಕೆ ಬಂದಿದ್ದ ಪೊಲೀಸ್ ಸಿಬ್ಬಂದಿ ಮೇಲೆಯೇ ರೌಡಿಗಳು ಏಕಾಏಕಿ ಚಾಕುವಿನಿಂದ ದಾಳಿ ಮಾಡಿ ಪರಾರಿಯಾಗಿದ್ದಾರೆ. ಈ ಘಟನೆಯಲ್ಲಿ ಚಾಕು ಇರಿತಕ್ಕೊಳಗಾದ ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದು ಸ್ಥಳೀಯರ ಸಹಾಯದಿಂದ ಮಂಗಳೂರಿನ ಆದರ್ಶ ಹಾಸ್ಪೆಟಲ್ ಗೆ ದಾಖಲಿಸಲಾಗಿದೆ.
ಪೊಲೀಸರಿಗೆ ಚಾಕು ಇರಿದ ರೌಡಿಗಳು ಸ್ಥಳದಿಂದ ಎಸ್ಕೇಪ್! :
ಮುರುಡೇಶ್ವರದಲ್ಲಿ ತಡರಾತ್ರಿ ರೌಡಿಶೀಟರ್ ರಾಜು, ಅವನ ಗುಂಪು ಮನೋಜ್ ಎಂಬುವವನ ನಡುವೆ ಯಾವುದೋ ಕಾರಣಕ್ಕೆ ಜಗಳ ನಡೆದಿದೆ. ಎರಡು ಗುಂಪುಗಳ ನಡುವೆ ಮಾರಾಮಾರಿ ಆಗುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಕರೆಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸ್ ಸಿಬ್ಬಂದಿ ಸಂಗಪ್ಪ, ವಿನಾಯಕ್ ಶಟ್ಟಿ ಸ್ಥಳಕ್ಕೆ ಬಂದಿದ್ದಾರೆ. ಬಂದ ವೇಳೆ ರೌಡಿಶೀಟರ್ಗಳು ಜಗಳ ಮುಂದುವರಿಸಿದ್ದರು ಎನ್ನಲಾಗಿದೆ.
ರೌಡಿಗಳ ಮಧ್ಯೆ ನಡೆಯುತ್ತಿದ್ದ ಜಗಳ ಬಿಡಿಸಲು ಸಿಬ್ಬಂದಿ ಮುಂದಾಗಿದ್ದಾರೆ. ಈ ವೇಳೆ ರೌಡಿಗಳು ಪೊಲೀಸ್ ಸಿಬ್ಬಂದಿ ಸಂಗಪ್ಪಗ ಮತ್ತು ವಿನಾಯಕ್ ಶೆಟ್ಟಿ ಗೆ ಚಾಕುವಿನಿಂದ ಇರಿದಿದ್ದಾರೆ. ಪೊಲೀಸರಿಗೆ ಚಾಕು ಇರಿಯುತ್ತಿದ್ದಂತೆ ರೌಡಿಗಳು ಸ್ಥಳದಿಂದ ಕಾಲ್ಕಿತ್ತು ಪರಾರಿಯಾಗಿದ್ದಾರೆ. ಇತ್ತ ಗಾಯಗೊಂಡ ಪೊಲೀಸರನ್ನು ಸ್ಥಳೀಯರು ಮಂಗಳೂರಿನ ಆದರ್ಶ ಹಾಸ್ಪಿಟಲ್ಗೆ ದಾಖಲಿಸಿದ್ದಾರೆ.

ರೌಡುಗಳ ವಿರುದ್ದ ದೂರು ದಾಖಲು. :
ಪೊಲೀಸ್ ಸಿಬ್ಬಂದಿಗೆ ಚಾಕು ಇರಿದ ಪ್ರಕರಣ ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿಗಳಾದ ರಾಜು, ರಿತೀಕ್, ಮದನ್ ನಾಯ್ಕ್, ಯೋಗೇಶ್, ದರ್ಶನ್ ಎಂಬ ನಾಲ್ವರು ರೌಡಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸದ್ಯ ರೌಡಿಶೀಟರ್ಗಳಾದ ರಾಜು, ಮನೋಜ್ ಎಂಬುವವರನ್ನ ವಶಕ್ಕೆ ಪಡೆದಿರುವ ಪೊಲೀಸರು ಉಳಿದ ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ.
ತಡರಾತ್ರಿ ನಡೆದ ಈ ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಪೊಲೀಸರ ಮೇಲೆಯೇ ಈ ರೀತಿ ದಾಳಿ ಮಾಡುವ ರೌಡಿಗಳು ಇನ್ನು ಸಾಮಾನ್ಯ ಜನರನ್ನು ಬಿಡುತ್ತಾರೆಯೇ ಎನ್ನುವ ಅತಂಕ ಸ್ಥಳೀಯರನ್ನು ಕಾಡಿದೆ. ಪೊಲೀಸರು ರೌಡಿಶೀಟರ್ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಮತ್ತು ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ತಮ್ಮ ಸೊಂಟದಲ್ಲಿರುವ ರಿವಲ್ವಾರ್ ಕೆಲಸ ಕೋಟ್ಟರಷ್ಟೆ ರೌಡಿಗಳ ಪುಂಡಾಟಕ್ಕೆ ಬ್ರೇಕ್ ಹಾಕ ಬಹುದಾಗಿದೆ…


