
ನವದೆಹಲಿ : ಕೈ ಸಂಪುಟ ವಿಸ್ತರಣೆಗೆ ಕ್ಷಣ ಗಣನೆ.! ಹಳಬರಿಗೂ ಮಣೆ ಹೊಸ ಸಚಿವರು ಯಾರು.?
news.ashwasurya.in
ಅಶ್ವಸೂರ್ಯ/ನವದೆಹೆಲಿ : ಕಾಂಗ್ರೆಸ್ನಲ್ಲಿ ಸಚಿವ ಸಂಪುಟ ವಿಸ್ತರಣೆ ಅಸಲಿ ಆಟ ಈಗ ಶುರುವಾಗಿದೆ ಇಂದು ರಾತ್ರಿಯೆ ಅಂತಿಮ ಪಟ್ಟಿ ರೆಡಿಯಾಗಲಿದೆ. ದೆಹಲಿ ಅಂಗಳದಲ್ಲಿ ಸಚಿವರ ಆಯ್ಕೆಗೆ ದೊಡ್ಡಮಟ್ಟದ ಚರ್ಚೆ ಶುರುವಾಗಿದ್ದು.ಈ ಮೊದಲು ಎರಡು ಪಟ್ಟಿ ಸಿದ್ಧಪಡಿಸಿದ್ದ ಸಿಎಂ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅದನ್ನೂ ಫಿಲ್ಟರ್ ಮಾಡಿದ್ದಾರೆ. ಹೊಸ ಪಟ್ಟಿಯನ್ನು ಹೈಕಮಾಂಡ್ ಹೊಸ್ತಿಲಿಗೆ ಮುಂದೆ ಇಟ್ಟಿದ್ದಾರೆ.
ಹೌದು ಕಾಂಗ್ರೆಸ್ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಸಲ್ಲಿಸಿರೋ ಪಟ್ಟಿಗೆ ಹೈಕಮಾಂಡ್ ಅಂತಿಮ ಮುದ್ರೆ ಒತ್ತುವುದೊಂದೇ ಬಾಕಿ ಉಳಿದಿದ್ದು 43 ಶಾಸಕರ ಪಟ್ಟಿಯನ್ನು 29ಕ್ಕೆ ತಗ್ಗಿಸಲಾಗಿದೆ. ಹೊಸ ಪಟ್ಟಿಯಲ್ಲಿ ಜಾತಿವಾರು, ವರ್ಗವಾರು ಲೆಕ್ಕಾಚಾರ ಹಾಕಲಾಗಿದೆ. ವರಿಷ್ಠರಿಗೆ ಅಂತಿಮ ಪಟ್ಟಿ ತಲುಪಿದ್ದು, ಯರ್ಯಾರಿಗೆ ಲಕ್ ಹೊಡೆದಿದೆ ಎನ್ನುವುದು ಇನ್ನೂ ನಿಗೂಢವಾಗಿದೆ.ಒಂದು ಮೂಲದ ಪ್ರಕಾರ ಯಾರ್ಯಾರಿಗೆ ಶಾಕ್.ಯಾರ್ಯಾರಿಗೆ ಲಕ್ ಎನ್ನುವುದು ಇಲ್ಲಿದೆ. ಇದು ಕೂಡ ಅಂತಿಮವಲ್ಲ.
ಡಿಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯನವರ ಪಟ್ಟಿ..!
ಲಿಂಗಾಯತ ಸಮುದಾಯದಿಂದ..
1) ಯಶವಂತ ರಾಯಗೌಡ ಪಾಟೀಲ್
2) ಲಕ್ಷ್ಮಿ ಹೆಬ್ಬಾಳ್ಕರ್
3) ಶಿವಾನಂದ ಪಾಟೀಲ್
4)ಲಕ್ಷ್ಮಣ ಸವದಿ
5) ಅಪ್ಪಾಜಿ ನಾಡಗೌಡ
6) ಜಿ.ಎಸ್.ಪಾಟೀಲ್
7) ಎಸ್.ಎಸ್.ಮಲ್ಲಿಕಾರ್ಜುನ
ಒಕ್ಕಲಿಗ ಸಮುದಾಯದಿಂದ…
1) ಶರತ್ ಬಚ್ಚೇಗೌಡ
2) ಹೆಚ್.ಸಿ.ಬಾಲಕೃಷ್ಣ
3) ಎನ್.ಚಲುವರಾಯಸ್ವಾಮಿ
4) ಕೆ.ಎಂ.ಶಿವಲಿಂಗೇಗೌಡ
ಪರಿಶಿಷ್ಟ ಜಾತಿ
1) ರೂಪಕಲಾ ಶಶಿಧರ್
2) ರುದ್ರಪ್ಪ ಲಮಾಣಿ
3) ಬಸಂತಪ್ಪ (ಬಸವರಾಜ್)
4) ಆನೇಕಲ್ ಶಿವಣ್ಣ
5) ಶಿವರಾಜ್ ತಂಗಡಗಿ
ಪರಿಶಿಷ್ಟ ಪಂಗಡ…
1) ಟಿ.ರಘು ಮೂರ್ತಿ
2) ಬಿ.ನಾಗೇಂದ್ರ
3) ಜೆ.ಎನ್.ಗಣೇಶ
ಮುಸ್ಲಿಂ ಸಮುದಾಯ..
1) ರಿಜ್ವಾನ್ ಅರ್ಷದ್
2) ಎನ್.ಎ.ಹ್ಯಾರಿಸ್
3) ಜಮೀರ್ ಅಹಮ್ಮದ್
4) ತನ್ವಿರ್ ಸೇಟ್
5) ಖನೀಜ್ ಫಾತಿಮಾ
ಹಿಂದುಳಿದ ವರ್ಗ…
1) ಬೇಳೂರು ಗೋಪಾಲಕೃಷ್ಣ
2) ರಾಘವೇಂದ್ರ ಹಿಟ್ನಾಳ್
3) ಶ್ರೀನಿವಾಸ್ ಮಾನೆ
4) ಎನ್.ಎಸ್ ಬೋಸರಾಜು
5) ಮಂಕಾಳು ವೈದ್ಯ
ಸಂಪುಟ ವಿಸ್ತರಣೆಯಲ್ಲೂ ಹಿರಿಯರಿಗೆ ಮಣೆ?
ನೂತನ ಸಂಪುಟದಲ್ಲಿ ಹೊಸ ಮುಖಗಳಿಗೆ ಮಣೆ ಹಾಕಬೇಕು ಎಂಬುದು ದೆಹಲಿ ನಾಯಕರ ಲೆಕ್ಕಾಚಾರವಾಗಿದೆ. ಆದ್ರೆ, ರಾಜ್ಯ ನಾಯಕರು ಕೊಟ್ಟ ಪಟ್ಟಿಯಲ್ಲಿ ಮತ್ತೆ ಹಿರಿಯ ನಾಯಕರ ಹೆಸರುಗಳೇ ಮುಂಚೂಣಿಯಲ್ಲಿ ಕಂಡುಬಂದಿದೆ. ಈ ಹಿಂದಿನ ಸಿದ್ದರಾಮಯ್ಯ ಸಂಪುಟದಲ್ಲಿದ್ದ ಬಹುತೇಕ ಸಚಿವರಿಗೆ ಮತ್ತೊಮ್ಮೆ ಸಚಿವ ಸ್ಥಾನ ನೀಡುವ ಯೋಚನೆಯಲ್ಲಿ ರಾಜ್ಯ ನಾಯಕರು ಇದ್ದಾರೆ. ಇದಕ್ಕೆ ಪುಷ್ಟಿ ನೀಡುವಂತಾ ಪಟ್ಟಿಯನ್ನ ಹೈಕಮಾಂಡ್ಗೆ ಕೊಟ್ಟಿದ್ದಾರೆ.
ಇನ್ನೂ, ಹೈಕಮಾಂಡ್ 11 ಮಾಜಿ ಸಚಿವರ ಹೆಸರು ಫಿಲ್ಟರ್ಗೆ ಹೇಳಿದ್ದರೂ ಸರ್ಕಾರ ಅದಕ್ಕೆ ಒಪ್ಪಿದಂತೆ ಕಾಣ್ತಿಲ್ಲ. 11 ಮಾಜಿ ಸಚಿವರ ಪಟ್ಟಿಯಲ್ಲಿ 8 ಜನ ಸೇಫ್ ಆಗಿದ್ರೆ, ಮೂವರಿಗೆ ಗೇಟ್ಪಾಸ್ ನೀಡಲಾಗಿದೆ. ಹೊಸದಾಗಿ ಓರ್ವ ಮಾಜಿ ಸಚಿವರ ಹೆಸರನ್ನ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. 11 ಮಾಜಿಗಳ ಪಟ್ಟಿಯಲ್ಲಿ ಹೊರಬಿದ್ದವರು ಯಾರು? ಮಾಜಿ ಸಚಿವರ ಪೈಕಿ ಯಾರಿಗೆ ಮತ್ತೊಮ್ಮೆ ಸಚಿವ ಸ್ಥಾನ ಒಲಿಯಬಹುದು? ಎಂಬುದನ್ನ ನೋಡೋದಾದ್ರೆ….
8 ಮಾಜಿ ಸಚಿವರು ಸೇಫ್?
ಲಕ್ಷ್ಮಿ ಹೆಬ್ಬಾಳ್ಕರ್
ಶಿವಾನಂದ ಪಾಟೀಲ್
ಎಸ್.ಎಸ್ ಮಲ್ಲಿಕಾರ್ಜುನ
ಚೆಲುವರಾಯಸ್ವಾಮಿ
ಶಿವರಾಜ್ ತಂಗಡಗಿ
ಬಿ.ನಾಗೇಂದ್ರ
ಜಮೀರ್ ಅಹಮ್ಮದ್
ಮಂಕಾಳು ವೈದ್ಯ
3 ಮಾಜಿ ಸಚಿವರು ಔಟ್?
ಹೆಚ್.ಕೆ ಪಾಟೀಲ್
ಮಧು ಬಂಗಾರಪ್ಪ
ಸಂತೋಷ ಲಾಡ್
ಪಟ್ಟಿಗೆ ಹೊಸ ಸೇರ್ಪಡೆ ಯಾರು?
ಎನ್.ಎಸ್.ಬೋಸರಾಜು
ದೆಹಲಿ ಅಂಗಳದಲ್ಲಿ ಸಂಪುಟ ವಿಸ್ತರಣೆ ಕಸರತ್ತು
ದೆಹಲಿ ಅಂಗಳದಲ್ಲಿ ಸಚಿವ ಸಂಪುಟ ವಿಸ್ತರಣೆ ಕಸರತ್ತು ನಡೆದಿದೆ. ಇಂದೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ ಸಮ್ಮುಖದಲ್ಲಿ ಸಭೆ ನಡೆಯಲಿದೆ. ಈಗಾಗಲೆ ಬದಲಾದ ಪಟ್ಟಿಯೊಂದಿಗೆ ಹಾಲಿ, ಮಾಜಿ ಸಿಎಂಗಳು ದೆಹಲಿಗೆ ತೆರಳಿದ್ದಾರೆ. ರಾಜ್ಯ ನಾಯಕರ ಪಟ್ಟಿಗೆ ರಾಹುಲ್ ಗಾಂಧಿ ಅಸ್ತು ಎನ್ನುವುದೊಂದೇ ಬಾಕಿ ಉಳಿದಿದೆ. ಪಟ್ಟಿ ಅಂತಿಮಗೊಂಡರೆ ರಾಜ್ಯಪಾಲರ ಕಚೇರಿಗೆ ಮಾಹಿತಿ ರವಾನೆ ಮಾಡಲಾಗುತ್ತದೆ.
ರಾಜ್ಯದಲ್ಲಿ ಮಂತ್ರಿಗಿರಿ ನಿರೀಕ್ಷೆಯಲ್ಲಿ ಆಕಾಂಕ್ಷಿಗಳು ದೇವಸ್ಥಾನಗಳ ಕಡೆ ಹೆಜ್ಜೆ ಹಾಕಿದ್ದಾರೆ. ಈಗಾಗಲೇ ದೆಹಲಿಗೆ ಹೋಗಿ ವರಿಷ್ಠರಿಗೂ ಮನವಿ ಮಾಡಿರೋ ಶಾಸಕರು, ಈ ಬಾರಿ ಸಚಿವ ಸ್ಥಾನ ಸಿಗೋತ್ತೆ ಎನ್ನುವ ಭರವಸೆಯಲ್ಲಿದ್ದಾರೆ.


