ಬೆಂಗಳೂರು : ಆಪ್ನಲ್ಲಿ ಅಪ್ಸರೆಯರ ಆಸೆ ತೋರಿಸಿ ಹನಿಟ್ರ್ಯಾಪ್.. ಆಟೋದಲ್ಲಿ ಕಿಡ್ನ್ಯಾಪ್, ಆಮೇಲೆ ಬೆತ್ತಲೆಗೊಳಿಸಿ ವಿಕೃತಿ..!
news.ashwasurya.in
ಕೆಲವು ಯುವಕರ ವೀಕ್ನೆಸ್ ಅನ್ನೇ ಬಂಡವಾಳ ಮಾಡಿಕೊಂಡು ಸುಲಿಗೆ ಮಾಡುವವರಿಗೇನು ನಮ್ಮ ರಾಜ್ಯದಲ್ಲಿ ಕಮ್ಮಿ ಇಲ್ಲ. ಅದಕ್ಕೆ ಹೇಳೋದು ಯುವಕರು ಸ್ವಲ್ಪ ಎಚ್ಚರದಿಂದ ಇರಬೇಕು ಅಂತಾ. ಅಂತೆಯೇ ಬೆಂಗಳೂರಿನಲ್ಲಿ ಯುವತಿಯರ ಸೌಂದರ್ಯದ ಆಸೆ ತೋರಿಸಿ, ಪ್ರೀತಿಯ ಬಲೆ ಬೀಸಿ ನಿಮ್ಮ ಇಡೀ ಬದುಕನ್ನೇ ಬೀದಿಗೆ ತರುವ ಕಿರಾತಕರ ಗ್ಯಾಂಗ್ಗಳು ರಾಜಧಾನಿಯಲ್ಲಿ ಸಕ್ರಿಯವಾಗಿದೆ, ಎಚ್ಚರ ಎಚ್ಚರವಿಲಿ…!
ಅಶ್ವಸೂರ್ಯ/ಬೆಂಗಳೂರು : ಲೋಕಾಂಟೊ (Locanto) ಆಪ್ನಲ್ಲಿ ಸುಂದರಿಯರ ಫೋಟೋ ಹಾಕಿ ಮೋಹದ ಬಲೆಗೆ ಬೀಳಿಸಿಕೊಂಡು, ಬಳಿಕ ಅವರನ್ನು ಅಪಹರಿಸಿ ಸುಲಿಗೆ ಮಾಡುತ್ತಿದ್ದ ಗ್ಯಾಂಗ್ ಅನ್ನು ಬೆಂಗಳೂರು ಸಿಸಿಬಿ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಹೆಡೆಮುರಿಕಟ್ಟಿದ್ದಾರೆ. ಹಣದ ಸುಲಿಗೆಗಾಗಿ ಗ್ಯಾಂಗ್ ಒಂದು ಬಳಸಿಕೊಂಡಿದ್ದು ಲೋಕಾಂಟೊ ಎನ್ನುವ ಡೇಟಿಂಗ್ ಆಪ್. ಈ ಆಪ್ನಲ್ಲಿ ಆಕರ್ಷಕ ಹುಡುಗಿಯರ ಫೋಟೋ ಹಾಕಿ, ನಿಮ್ಮನ್ನು ಭೇಟಿಯಾಗಲು ಹುಡುಗಿಯರು ಕಾಯುತ್ತಿದ್ದಾರೆ ಎಂದು ಜಾಹೀರಾತು ಪೋಸ್ಟ್ ಮಾಡಲಾಗುತ್ತಿತ್ತು. ಇದನ್ನು ನಂಬಿ ಕಾಮದ ಹಸಿವಿನಲ್ಲಿ ಹೋದವರು ಈ ಕಿರಾತಕರ ಬಲೆಗೆ ಬಿದ್ದು ಸರ್ವಸ್ವವನ್ನೂ ಕಳೆದು ಕೊಳ್ಳುತ್ತಿದ್ದರು ಜೊತೆಗೆ ಬ್ಯಾಂಕ್ ಖಾತೆ ಬರಿದು ಪರ್ಸ್ ಖಾಲಿಮಾಡಿಕೊಂಡು ಬಿದಿಗೆ ಬಿಳುತ್ತಿದ್ದರು.
ಯುವಕನ ‘ಡೆಡ್ಲಿ’ ಕಿಡ್ನಾಪ್.!

ಇತ್ತೀಚೆಗೆ ಈ ಗ್ಯಾಂಗ್ನಿಂದ ಸಂತ್ರಸ್ತನೊಬ್ಬ ಭೀಕರವಾಗಿ ಸುಲಿಗೆಗೊಳಗಾಗಿದ್ದಾನೆಲೋಕಾಂಟೊದಲ್ಲಿ ಹುಡುಗಿಯನ್ನು ಭೇಟಿಯಾಗುವ ಆಸೆಯಿಂದ ಆತ ಕೆ.ಜಿ.ಹಳ್ಳಿಯ ಹೆಚ್ಆರ್ ಬಿಆರ್ ಲೇಔಟ್ಗೆ ತಲುಪಿದ್ದ. ಅಲ್ಲಿ ಆತನಿಗಾಗಿ ಜೀಬಾ ಖಾನ್ ಮತ್ತು ದೀಪಾ ಎನ್ನುವ ಇಬ್ಬರು ಸುಂದರಿಯರು ಆಟೋದಲ್ಲಿ ಕಾದು ಕುಳಿತಿದ್ದರು. ಯುವತಿಯರನ್ನು ಕಂಡು ಮರುಳಾದ ಆ ಸಂತ್ರಸ್ತ ಅವರ ಬಳಿ ಹೋಗುತ್ತಿದ್ದಂತೆಯೇ ದೃಶ್ಯ ಬದಲಾಯಿತು!ಯುವತಿಯರ ಜೊತೆ ಮಾತನಾಡಲು ಮುಂದಾಗುವ ಮುನ್ನವೇ ಅಲ್ಲಿ ಹೊಂಚು ಹಾಕಿ ಕುಳಿತಿದ್ದ 11 ಮಂದಿ ಗ್ಯಾಂಗ್ ಆತನನ್ನು ಸುತ್ತುವರಿಯಿತು. ಬಲವಂತವಾಗಿ ಆಟೋ ಹತ್ತಿಸಿಕೊಂಡ ಕಿರಾತಕರು, ಆತನನ್ನು ನಗರದ ಮೂಲೆ ಮೂಲೆಗೆ ಸುತ್ತಾಡಿಸಿದರು. ಆಟೋದೊಳಗೆ ಆತನನ್ನು ಹಿಂಸಿಸಿ, ಪ್ರಾಣ ಬೆದರಿಕೆ ಹಾಕಿ ಮೈಮೇಲಿದ್ದ ಚಿನ್ನದ ಚೈನ್, ದುಬಾರಿ ಮೊಬೈಲ್ ಮತ್ತು ಜೇಬಿನಲ್ಲಿದ್ದ ನಗದನ್ನು ಕಿತ್ತುಕೊಂಡರು. ಅಷ್ಟೇ ಅಲ್ಲದೆ ಬೆತ್ತಲೆ ಮಾಡಿ ಆತನ ಅಸಹಾಯಕತೆಯನ್ನು ನೋಡಿ ವಿಕೃತವಾಗಿ ಆನಂದಿಸಿದ್ದರು!

ಸಿಸಿಬಿ ಬಲೆಗೆ ಬಿದ್ದ ‘ಮನ್ಮಥ’ ಕಿರಾತಕರು!
ಈ ಘಟನೆ ಕುರಿತು ಸುಳಿವು ಸಿಗುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಸಿಸಿಬಿ (CCB WPW) ವಿಭಾಗದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 11 ಮಂದಿಯನ್ನು ಬಂಧಿಸಿದ್ದಾರೆ. ಚೇತನ್, ಮನು, ಶಾಬು, ಮಂಜುನಾಥ, ಜಯಕುಮಾರ್, ಅರುಣ ಕೀರ್ತಿ, ಕಾಂತ ರಾಜು, ಸಂದೀಪ್ ಮತ್ತು ಆಟೋ ಸುಂದರಿಯರಾದ ಜೀಬಾ ಖಾನ್, ದೀಪಾ ಬಂಧಿತ ಆರೋಪಿಗಳು. ಆರೋಪಿಗಳು ಬಳಸುತ್ತಿದ್ದ 2 ಆಟೋಗಳು, 4 ದ್ವಿಚಕ್ರ ವಾಹನಗಳು 13 ಮೊಬೈಲ್ಗಳು ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆಸದ್ಯಕ್ಕೆ 11 ಮಂದಿ ಪೊಲೀಸರ ಅತಿಥಿಗಳಾಗಿದ್ದಾರೆ. ಈ ಗ್ಯಾಂಗ್ನ ಇನ್ನೂ ಇಬ್ಬರು ಭೂಪರು ತಲೆಮರೆಸಿಕೊಂಡಿದ್ದು, ಪೊಲೀಸರು ಅವರಿಗಾಗಿ ಗಾಳ ಬೀಸಿದ್ದಾರೆ.

ಈ ಗ್ಯಾಂಗ್ ಕೇವಲ ಒಬ್ಬ ವ್ಯಕ್ತಿಯನ್ನಲ್ಲ, ಬದಲಿಗೆ ನೂರಾರು ಜನರಿಗೆ ಹುಡುಗಿಯರ ಆಸೆ ತೋರಿಸಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿರುವ ಶಂಕೆಯಿದೆ. ಮಾನಹಾನಿಗೆ ಹೆದರಿ ಹಲವರು ದೂರು ನೀಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ನಿಮಗೆ ಪರಿಚಯವಿಲ್ಲದ ಆಪ್ಗಳಲ್ಲಿ ಬರುವ ಸುಂದರಿಯರ ಫೋಟೋ ಕಂಡು ಮರುಳಾಗಬೇಡಿ. ಅಪರಿಚಿತ ಪ್ರದೇಶಗಳಿಗೆ ಹುಡುಗಿಯರನ್ನು ಭೇಟಿ ಮಾಡಲು ಹೋಗುವ ಮುನ್ನ ಎಚ್ಚರವಿರಲಿ. ನಿಮ್ಮ ಒಂದು ಸಣ್ಣ ತಪ್ಪು ನಿಮ್ಮನ್ನು ಪ್ರಾಣಾಪಾಯಕ್ಕೆ ತಳ್ಳಬಹುದು ಎಚ್ಚರ..ಎಚ್ಚರವಿರಲಿ..!


