ಬೆಂಗಳೂರು : ಅಜ್ಜಿ ಚೆನ್ನಮ್ಮರನ್ನು ನೋಡಲು ಪೆರೋಲ್ ಮೇಲೆ ಬರ್ತಾರಾ ಪ್ರಜ್ವಲ್ ರೇವಣ್ಣ.? ಅರ್ಜಿ ಸಲ್ಲಿಕೆ ಸಾಧ್ಯತೆ.
news.ashwasurya.in
ಅಜ್ಜಿ ಚೆನ್ನಮ್ಮ ಅವರು ವಿಧಿವಶರಾದ ಹಿನ್ನೆಲೆಯಲ್ಲಿ ಅಜ್ಜಿಯ ಅಂತಿಮ ದರ್ಶನ ಪಡೆಯಲು ಪ್ರಜ್ವಲ್ ರೇವಣ್ಣ ಅವರು ಪೆರೋಲ್ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಕೋರ್ಟ್ಗೆ ಅರ್ಜಿ ಸಲ್ಲಿಸಿದ ನಂತರ ನ್ಯಾಯಾಧೀಶರು ಪರಿಶೀಲಿಸಿ ನಿರ್ಧಾರ ಕೈಗೊಳ್ಳುತ್ತಾರೆ. ಕೊನೆಯದಾಗಿ
ಅಜ್ಜಿಯ ಮುಖ ನೋಡಲು ಜೈಲಿನಿಂದ ಹೊರಗೆ ಬರ್ತಾರಾ ಪ್ರಜ್ವಲ್ ರೇವಣ್ಣ.?

ಅಶ್ವಸೂರ್ಯ/ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಕೊನೆಯಾದಾಗ ಶನಿವಾರ ಸಂಜೆ ವೈದ್ಯರು ಚನ್ನಮ್ಮರನ್ನು ತಪಾಸಣೆಗೆ ಮಾಡಿದಾಗ ಅವರು ಬದುವುದು ಕಷ್ಟ ಎಂದಿದ್ದರು ಆರೋಗ್ಯ ವಿಚಾರಿಸಲು ಪತಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬಸ್ಥರು ಸೇರಿ ಗಣ್ಯರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ಇದೆ ಸಂಧರ್ಭದಲ್ಲಿ ಚನ್ನಮ್ಮ ಇಹಲೋಕ ತ್ಯಜಿಸಿದ್ದರು. ಹೀಗಾಗಿ ಅಜ್ಜಿಯನ್ನು ನೋಡಲು ಜೈಲಿನಲ್ಲಿರುವ ಮಾಜಿ ಸಂಸದ ಮೊಮ್ಮಗ ಪ್ರಜ್ವಲ್ ರೇವಣ್ಣ (Prajwal Revanna) ಬರುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಜ್ಜಿ ಚೆನ್ನಮ್ಮರನ್ನು ನೋಡಲು ಪೆರೋಲ್ ಅರ್ಜಿ ಸಲ್ಲಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

ಪೆರೋಲ್ ಎಂದರೆ ಜೈಲಿನಲ್ಲಿರುವ ಆರೋಪಿ ಅಥವಾ ಶಿಕ್ಷೆ ಅನುಭವಿಸುತ್ತಿರುವವರು ಕೆಲವು ತುರ್ತು ಕಾರಣಗಳಿಂದ ತಾತ್ಕಾಲಿಕವಾಗಿ ಹೊರಗೆ ಬರುವ ಅವಕಾಶ. ಇದು ಸಾಮಾನ್ಯವಾಗಿ ಕುಟುಂಬದವರಿಗೆ ತೀವ್ರ ಆರೋಗ್ಯ ಸಮಸ್ಯೆ, ಮದುವೆ, ಅಂತ್ಯಕ್ರಿಯೆ ಮುಂತಾದ ಸಂದರ್ಭಗಳಲ್ಲಿ ನೀಡಲಾಗುತ್ತದೆ. ಪೆರೋಲ್ನಲ್ಲಿ ಬರುವವರು ನಿಗದಿಪಡಿಸಿದ ಸಮಯದ ನಂತರ ಮತ್ತೆ ಜೈಲಿಗೆ ಹಿಂದಿರುಗಬೇಕಾಗುತ್ತದೆಪೆರೋಲ್ ಮೂಲಕ ಹದಿನೈದು ದಿನಗಳ ಕಾಲ ಹೊರಗೆ ಬರುವ ಅವಕಾಶವಿದೆ. ಆದರೆ ಇದಕ್ಕೆ ಕೋರ್ಟ್ ಅನುಮತಿ ಅಗತ್ಯ. ಅರ್ಜಿಯಲ್ಲಿ ಅಜ್ಜಿಯ ಸಾವಿನ ವಿವರ ತುರ್ತು ಅಗತ್ಯತೆಯನ್ನು ವಿವರಿಸಬೇಕಾಗುತ್ತದೆ. ಪೊಲೀಸ್ ವರದಿ ಮತ್ತು ಜೈಲು ಅಧಿಕಾರಿಗಳ ಅಭಿಪ್ರಾಯವನ್ನೂ ಕೋರ್ಟ್ ಪರಿಗಣಿಸಿ ನಂತರದಲ್ಲಿ ಪೆರೋಲ್ ಮೇಲೆ ಬಿಡುಗಡೆ ಮಾಡುವ ಸಾಧ್ಯತೆ ಇರುತ್ತದೆ.

