
ಶಿವಮೊಗ್ಗ : ಏಕಕಾಲಕ್ಕೆ ಶಿವಮೊಗ್ಗ ಜಿಲ್ಲೆಯ ಅಕ್ರಮ ಮರಳು ಅಡ್ಡೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ.! ಇತಿಹಾಸದಲ್ಲೇ ಅಕ್ರಮ ಮರಳು ಅಡ್ಡೆಯ ಮೇಲೆ ಬಹು ದಡ್ಡ ದಾಳಿ .!
news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಇತಿಹಾಸದಲ್ಲೇ ಅಕ್ರಮ ಮರಳು ಅಡ್ಡೆಗಳ ಮೇಲೆ ಲೋಕಾಯುಕ್ತರಿಂದ ದೊಡ್ಡ ಕಾರ್ಯಾಚರಣೆ ನಡೆದಿದೆ. ಜಿಲ್ಲೆಯ ಶಿವಮೊಗ್ಗ, ಭದ್ರಾವತಿ ಮತ್ತು ತೀರ್ಥಹಳ್ಳಿ ಹೊಸನಗರ ಹಾಗೂ ಸಾಗರ ತಾಲೂಕುಗಳ ವ್ಯಾಪ್ತಿಯ 25ಕ್ಕೂ ಹೆಚ್ಚು ಅಕ್ರಮ ಮರಳು ಅಡ್ಡಗಳ ಮೇಲೆ ಶಿವಮೊಗ್ಗ ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ 12ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳ ನೆತ್ರುತ್ವದ ತಂಡ ಅಕ್ರಮ ಮರಳು ಗಣಿಗಾರಿಕೆ ನೆಡೆಯುತ್ತಿದ್ದ ಸ್ಥಳಗಳನ್ನು ಪತ್ತೆಹಚ್ಚಿ ದಾಳಿ ನೆಡೆಸಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಶಿವಮೊಗ್ಗ ಗ್ರಾಮಾಂತರ ವ್ಯಾಪ್ತಿಯ ಹೊಳಲೂರು ಮತ್ತು ಒಂದೆರಡು ಸ್ಥಳಗಳಲ್ಲಿ ಶಿವಮೊಗ್ಗ ಉಪವಿಭಾಗಾಧಿಕಾರಿ ಸತ್ಯನಾರಾಯಣ್ ನೇತೃತ್ವದಲ್ಲಿ ಗ್ರಾಮದಲ್ಲಿ ವಿವಿದೆಡೆ ಅಕ್ರಮವಾಗಿ ಸಂಗ್ರಹಿಸಿದ್ದ ಎಂಬತ್ತಕ್ಕೂ ಹೆಚ್ಚು ಲೋಡ್ ಮರಳನ್ನು ವಶಪಡಿಸಿಕೊಳ್ಳಲಾಗಿತ್ತು. ಜಿಲ್ಲೆಯಲ್ಲಿ ಅಕ್ರಮ ಮರಳು ಮತ್ತು ಕಲ್ಲು ಗಣಿಗಾರಿಕೆ ಮಾಫಿಯಾದ ದಂಧೆಕೋರರು ರಾತ್ರಿ ಹಗಲೆನ್ನದೆ ಅಕ್ರಮವಾಗಿ ಮರಳು ಲೂಟಿ ಮಾಡುತ್ತಿದ್ದು ಈ ಬಗ್ಗೆ ಜಿಲ್ಲಾಡಳಿತ ಮತ್ತು ಭೂವಿಜ್ಞಾನ ಇಲಾಖೆಗೆ ಹಲವು ಭಾರಿ ಸಾಕ್ಷಿಸಮೇತ ದೂರು ನೀಡಿದರೂ ಯಾವುದೇ ಕಟ್ಟುನಿಟ್ಟಿನ ಕ್ರಮವಾಗಿರಲಿಲ್ಲ.

ಅಕ್ರಮ ಮರಳು ಗಣಿಗಾರಿಕೆ ಮತ್ತು ಅಕ್ರಮ ಮರಳು ಗಣಿಗಾರಿಕೆಗೆ ಕೆಲವು ರಾಜಕೀಯ ನಾಯಕರ ಸಹಕಾರ ಕೂಡ ಇದೆ ಎನ್ನಲಾಗಿದ್ದು, ಗಣಿವಿಜ್ಞಾನ ಇಲಾಖೆಯ ಅಧಿಕಾರಿಗಳು ಕೂಡ ರಾಜಕೀಯ ಪುಡಾರಿಗಳೊಂದಿಗೆ ಕೈಜೋಡಿಸಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿತ್ತು. ಈ ಹಿನ್ನಲೆಯಲ್ಲಿ ಇಂದು ಜಿಲ್ಲೆಯ ವಿವಿದೆಡೆ ಲೋಕಾಯುಕ್ತರ ದೊಡ್ಡ ತಂಡ ತಙಡಗಳಾಗಿ ದಾಳಿ ನೆಡೆಸಿದ್ದು ಅಕ್ರಮ ಮರಳು ಲೂಟಿ ಕೋರರನ್ನು ಮತ್ತು ದಂಧೆಕೋರರಿಂದ ಸಾಕಷ್ಟು ಹಣ ಗೆಬರಿದ ಹಲವು ಖದೀಮ ಅಧಿಕಾರಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಪೊಲೀಸ್ ಇಲಾಖೆ ಸಾಕ್ಷಿ ಸಮೇತ ದೂರು ನೀಡಿದಾಗ ಮಾತ್ರ ಕಾಟಾಚಾರಕ್ಕೆ ದಾಳಿಯಲ್ಲಿ ಪಾಲ್ಗೊಳ್ಳುತ್ತಾರೆ ಎಂಬುದು ಕೂಡ ಸಾರ್ವಜನಿಕರ ಆರೋಪವಾಗಿದೆ. ಇಂದು ಅಕ್ರಮ ಮರಳುಗಾರಿಕೆ ಸಂಬಂಧ ಶಿವಮೊಗ್ಗ ಭದ್ರಾವತಿ ತೀರ್ಥಹಳ್ಳಿ ಸಾಗರ ತುಂಗಾ, ಭದ್ರಾ, ಶರಾವತಿ, ನದಿ ತೀರ ಹಲವಾರು ಕಡೆ ಲೋಕಾಯುಕ್ತ ಅಧಿಕಾರಿಗಳು ಬೇರೆ ಬೇರೆ ಹಾವೇರಿ ಇನ್ನಿತರೆ ಜಿಲ್ಲೆಯ ಅಧಿಕಾರಿಗಳು ಲೋಕಾಯುಕ್ತ ದಾಳಿ ನಡೆಸಿದ್ದಾರೆ. ಹಾಗೂ ಗಣಿ ಮತ್ತು ಭೂ ವಿಜ್ಞಾನಿ ಅಧಿಕಾರಿ ಪಿ ಕೆ ನಾಯ್ ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ . ಲೋಕಾಯುಕ್ತ ನ್ಯಾಯಮೂರ್ತಿ ಪಾಟೀಲ್ ಅವರು ಅಕ್ರಮ ಮರಳು ಮಾಫಿಯಾದ ವಿರುದ್ಧ ಸರ್ಚ್ ವಾರೆಂಟ್ ಜಾರಿ ಮಾಡಿದ್ದಾರೆ.
ಈ ನೆಲೆಯಲ್ಲಿ ಭದ್ರಾವತಿ ತಾಲೂಕಿನ ಸನ್ಯಾಸಿ ಕೋಡ ಮಗ್ಗಿ, ನಿಂಬೆಗೊಂದಿ,ಮಂಗೋಟೆ ಮತ್ತು ಮೊದಲಾದ ಕಡೆ ಶಿವಮೊಗ್ಗ ತಾಲೂಕಿನ ಕೂಡಲಿ, ಹಾಡೋನಹಳ್ಳಿ, ತೀರ್ಥಹಳ್ಳಿ ತಾಲೂಕಿನ ಮುಂಡಳ್ಳಿ, ತೂದೂರು ದಬ್ಬಣಗದ್ದೆ ಮೊದಲಾದ ಕಡೆ ಹೊಸನಗರ ತಾಲೂಕಿನ ಸುತ್ತಾ, ಹರಿದ್ರಾವತಿ, ಸಂಪೆಕಟ್ಟೆ ಮೊದಲಾದ ಕಡೆ, ಸಾಗರ ತಾಲೂಕಿನ ಆವಿನ ಹಳ್ಳಿ ಮೊದಲಾದ ಕಡೆ ಅಕ್ರಮ ಮರಳು ಸಂಗ್ರಹ ಮತ್ತು ಅಡ್ಡೆಗಳ ಮೇಲೆ ದಾಳಿ ನಡೆಸಲಾಗಿದೆ. ಈ ಸಂದರ್ಭದಲ್ಲಿ ಜೆಸಿಬಿ ಟ್ಯಾಕ್ಟರ್ ಲಾರಿ ಸೇರಿದಂತೆ 50ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದು ನೂರಾರು ಮೆಟ್ರಿಕ್ ಟನ್ ಮರಳು ಸಂಗ್ರಹ ಜಪ್ತಿ ಮಾಡಲಾಗಿದೆ. ಗಣಿ ವಿಜ್ಞಾನ ಇಲಾಖೆಯ ಅಧಿಕಾರಿ ಪಿಕೆ ನಾಯ್ಕ ಅವರು ಇತ್ತೀಚಿಗೆ ಒಂದುವರೆ ಕೋಟಿ ದಂಡ ವಿಧಿಸಿದ್ದರು ಯಾವುದೇ ರೀತಿ ಹಣ ಕಟ್ಟಿಸಿಕೊಳ್ಳಲಿಲ್ಲ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಅವರ ಕಚೇರಿಯಲ್ಲಿ ಪರಿಶೀಲನೆ ಮುಂದುವರೆದಿದೆ. ಬೆಳಗ್ಗೆಯಿಂದಲೇ ಆರಂಭಿಸಿರುವ ದಾಳಿ ಸಂಜೆವರೆಗೂ ಮುಂದುವರೆಯುವ ಸಾಧ್ಯತೆ ಇದೆ.
ಸಾಂದರ್ಭಿಕ ಚಿತ್ರ

ನದಿ ತೀರದಲ್ಲಿ ನಡೆಯುವ ಅಕ್ರಮ ಮರಳು ಗಣಿಗಾರಿಕೆಯಿಂದ ಪರಿಸರ ಮತ್ತು ಮನುಷ್ಯರ ಮೇಲೆ ಗಂಭೀರ ದುಷ್ಪರಿಣಾಮಗಳು ಉಂಟಾಗುತ್ತವೆ.
ಅವುಗಳ ವಿವರ ಇಲ್ಲಿದೆ: ಪರಿಸರ ಮತ್ತು ನದಿ ವ್ಯವಸ್ಥೆಗೆ ಹಾನಿನದಿ ಪಾತ್ರದ ಕುಸಿತ: ಮರಳನ್ನು ಅತಿಯಾಗಿ ತೆಗೆಯುವುದರಿಂದ ನದಿ ಪಾತ್ರ ಆಳವಾಗಿ, ನದಿಯ ನೈಸರ್ಗಿಕ ಹರಿವಿನ ಹಾದಿ ಬದಲಾಗುತ್ತದೆ.ಭೂಸವೆತ (Soil Erosion): ನದಿ ದಂಡೆಗಳು ದುರ್ಬಲಗೊಂಡು ತೀರ ಪ್ರದೇಶಗಳು ಕುಸಿಯುತ್ತವೆ ಮತ್ತು ಫಲವತ್ತಾದ ಕೃಷಿ ಭೂಮಿ ನಾಶವಾಗುತ್ತದೆ.
ಅಂತರ್ಜಲ ಕುಸಿತ: ಮರಳು ನೀರನ್ನು ಹಿಡಿದಿಟ್ಟುಕೊಳ್ಳುವ ಸ್ಪಂಜಿನಂತೆ ಕೆಲಸ ಮಾಡುತ್ತದೆ. ಅದು ಇಲ್ಲದಿದ್ದರೆ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತದೆ.
ಕುಡಿಯುವ ನೀರಿಗೆ ಕ್ಷಾಮ: ನದಿಗಳಲ್ಲಿ ನೀರು ಇಂಗಿ ಹೋಗುವುದರಿಂದ ಸುತ್ತಮುತ್ತಲಿನ ಹಳ್ಳಿ ಮತ್ತು ನಗರಗಳಲ್ಲಿ ಬಾವಿ, ಬೋರ್ವೆಲ್ಗಳು ಬತ್ತಿಹೋಗುತ್ತವೆ.ಜೀವವೈವಿಧ್ಯಕ್ಕೆ ಧಕ್ಕೆಜಲಚರಗಳ ನಾಶ: ಮೀನುಗಳು ಮತ್ತು ಕಪ್ಪೆಗಳು ಮೊಟ್ಟೆಯಿಡುವ ತಾಣಗಳು ನಾಶವಾಗಿ, ಅವುಗಳ ಸಂತತಿ ಕ್ಷೀಣಿಸುತ್ತಿದೆ.
ಪಕ್ಷಿಗಳ ಆವಾಸಸ್ಥಾನಕ್ಕೆ ಹಾನಿ: ನದಿ ತೀರದಲ್ಲಿ ಗೂಡು ಕಟ್ಟುವ ಅಪರೂಪದ ಹಕ್ಕಿಗಳ ಆಶ್ರಯ ತಾಣಗಳು ಇಲ್ಲದಾಗುತ್ತವೆ.
ಪ್ರಕೃತಿ ವಿಕೋಪಗಳ ಅಪಾಯಪ್ರವಾಹದ ಭೀತಿ: ನದಿ ದಂಡೆಗಳು ಹಾನಿಗೊಳಗಾಗುವುದರಿಂದ ಮಳೆಗಾಲದಲ್ಲಿ ನೀರು ಸುಲಭವಾಗಿ ಹಳ್ಳಿ ಮತ್ತು ನಗರಗಳಿಗೆ ನುಗ್ಗಿ ಪ್ರವಾಹ ಸೃಷ್ಟಿಸುತ್ತದೆ.
ಸೇತುವೆಗಳ ಕುಸಿತ: ಪಿಲ್ಲರ್ಗಳ ಸುತ್ತಲಿನ ಮರಳು ಖಾಲಿಯಾಗುವುದರಿಂದ ರಸ್ತೆ ಮತ್ತು ರೈಲ್ವೆ ಸೇತುವೆಗಳು ದುರ್ಬಲಗೊಂಡು ಕುಸಿಯುವ ಅಪಾಯವಿರುತ್ತದೆ.ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳುಕೃಷಿಗೆ ಹೊಡೆತ: ನೀರಾವರಿ ಸೌಲಭ್ಯ ಕುಂಠಿತಗೊಂಡು ಕೃಷಿ ಉತ್ಪಾದನೆ ಕಡಿಮೆಯಾಗುತ್ತದೆ.
ತೀರ್ಥಹಳ್ಳಿ ತಾಲ್ಲೂಕಿನ ರಂಜದಕಟ್ಟೆ, ಕುಶಾವತಿ, ಆರಗ ಸಮೀಪದ ಪಿರನಗುಡ್ಡೆ, ಊರುಉಡುಗ, ಸರಳ ವ್ಯಾಪ್ತಿಯಲ್ಲಿ ಅಕ್ರಮ ಮರಳು ಲೂಟಿಯಾಗುತ್ತಿದ್ದು ಇದಕ್ಕೂ ಕಡಿವಾಣ ಹಾಕುವ ಆವಶ್ಯಕತೆ ಇದೆ…


