
ತೀರ್ಥಹಳ್ಳಿ : ರಂಜದ ಕಟ್ಟೆ, ರಾವೆ, ಕುಶಾವತಿ, ಪಿರನಗುಡ್ಡೆಯಲ್ಲಿ ಅಕ್ರಮ ಮರಳು ಲೂಟಿ.!ಅಕ್ರಮ ಮರಳು ದಂಧೆಯಲ್ಲಿ ಸ್ಯಾಂಡ್ ಸ್ಟಾರ್ ಉಪ್ಪಿ ಮತ್ತು ಇರ್ಫಾನ್ ಗ್ಯಾಂಗ್.!
ಹೈಲೆಟ್ :
ಆರಗದ ಪಿರನಗುಡ್ಡೆಯಲ್ಲಿ ಮರಳು ದಂಧೆಯ ಸ್ಯಾಂಡ್ ಸ್ಟಾರ್ ಉಪ್ಪಿ ದಿನನಿತ್ಯ ಪಿಕಪ್ ವಾಹನದಲ್ಲಿ ಒಂದು ಸ್ಥಳದಲ್ಲಿ ಅಕ್ರಮವಾಗಿ ಮರಳು ಶೇಖರಣೆಮಾಡಿ ತನ್ನದೇ ನಾಲ್ಕೈದು ಟಿಪ್ಪರ್ಗಳ ಮುಖಾಂತರ ರಾತ್ರಿ ಹಗಲೆನ್ನದೆ ಮರಳು ಲೂಟಿ ಮಾಡುತ್ತಿದ್ದಾನೆ.ಅದರಲ್ಲೂ ತನ್ನದೆ ಬ್ರಿಕ್ಸ್ ತಯಾರಿಸುವ ಘಟಕಕ್ಕೆ ಮರಳು ಸಾಗಾಟ ಮಾಡಿಕೊಳ್ಳುತ್ತಾನೆ ಎಂದರೆ ಇವನ ಬೆನ್ನಿಗೆ ಯಾರಿದ್ದಾರೆ ಎನ್ನುವುದನ್ನು ಬರೆದು ಹೇಳ ಬೇಕಿಲ್ಲ.? ಕಳೆದ ಶುಕ್ರವಾರ ತಾಲ್ಲೂಕು ಅಧಿಕಾರಿಯೊಬ್ಬ ಪಿರನಗುಡ್ಡೆಯಲ್ಲಿ ಮರಳು ತುಂಬಿದ ಲಾರಿ ಹಿಡಿದಿದ್ದಾರೆ.ಆದರೆ ಅಕ್ರಮ ಮರಳು ತುಂಬಿದ ಲಾರಿ ಸೀಜ್ ಆಗದೆ ಬಿಡುಗಡೆಯಾಗಿದೆ ಕಾರಣವಿಷ್ಟೇ ರಿಯಲ್ ಸ್ಟಾರ್ ಉಪ್ಪಿಯ ಜೇಬಿನಿಂದ ಹೊರಬಂದ 50,000 ಸಾವಿರ ರೂಪಾಯಿಯ ಪಿಂಡಿ ಅಧಿಕಾರಿಯ ಜೇಬಿಗೆ ನೀಟಾಗಿ ಜಾರಿದೆ ಎಂದು ಆರಗ ಗ್ರಾಮದ ಮರಳು ದಂಧೆಕೋರ ಸ್ಯಾಂಡ್ ಸ್ಟಾರ್ ಬಾಯಿಯಿಂದಲೆ ಹೊರಬಿದ್ದಿದ್ದು ಇದು ಗ್ರಾಮದ ಜನರ ಬಾಯಲ್ಲಿ ಅಧಿಕಾರಿಯ ವಿರುದ್ಧ ಚರ್ಚೆಗೆ ಗ್ರಾಸವಾಗಿದೆ…
ಸಾಂದರ್ಭಿಕ ಫೋಟೊಗಳು

news.ashwasurya.in
ಅಶ್ವಸೂರ್ಯ/ತೀರ್ಥಹಳ್ಳಿ : ತೀರ್ಥಹಳ್ಳಿ ತಾಲ್ಲೂಕಿನಲ್ಲಿ ತುಂಗೆಯ ಒಡಲು ದಿನನಿತ್ಯ ಬರಿದಾಗುತ್ತಿದೆ.! ಅಕ್ರಮ ಮರಳು ಲೂಟಿ ಕೋರರ ದಂಧೆಗೆ ತುಂಗೆ ನಲುಗಿ ಹೋಗಿದ್ದಾಳೆ.!ಸರ್ಕಾರದ ಅಧೀನದ ತುಂಗಾ ನದಿ ತೀರದ ಮರಳು ಸಂಪತ್ತು ಹಗಲು ರಾತ್ರಿ ಎನ್ನದೆ ಅಕ್ರಮ ಗಣಿಗಾರಿಕೆಗೆ ತುತ್ತಾಗಿದ್ದು, ತೀರ್ಥಹಳ್ಳಿ ತಾಲೂಕಿನ ಜೀವ ನದಿಗಳಾದ ತುಂಗೆ, ಮಾಲತಿ, ಕುಶಾವತಿ ನದಿಗಳ ಒಡಲು ದಿನನಿತ್ಯ ಬಗೆ ಬಗೆದು ಬರಿದಾಗುತ್ತಿದೆ.! ಮರಳು ಲೂಟಿಗೆ ತಾಲೂಕು ಆಡಳಿತದ ಸಹಕಾರವಿದೆ ಎನ್ನುವುದಕ್ಕೆ ಹಗಲು ರಾತ್ರಿ ಎನ್ನದೆ ನದಿಪಾತ್ರದಲ್ಲಿ ಅಕ್ರಮವಾಗಿ ಮರಳು ಲೂಟಿಯಾಗುತ್ತಿರುವುದೇ ಸಾಕ್ಷಿಯಾಗಿದೆ.
ಅದರಲ್ಲೂ ಪ್ರಮುಖವಾಗಿ ತೀರ್ಥಹಳ್ಳಿ ಪಟ್ಟಣದ ಕೂಗಳತೆ ದೂರದಲ್ಲಿರುವ ರಂಜದ ಕಟ್ಟೆ, ಕುಶಾವತಿ, ರಾವೆ ಮತ್ತು ಸ್ಥಳೀಯ ಶಾಸಕರ ನಿವಾಸದ ಸಮೀಪ ಇರುವ ಆರಗದ ಪಿರನಗುಡ್ಡೆಯಲ್ಲಿ ನಿರಂತರವಾಗಿ ಅಕ್ರಮವಾಗಿ ಮರಳು ಲೂಟಿಯಾಗುತ್ತಿದೆ.

ದಿನನಿತ್ಯ ರಂಜದಕಟ್ಟೆಯಿಂದ ಸರಿ ಸುಮಾರು 50 ಲೋಡ್ ಮತ್ತು ಕುಶಾವತಿಯಿಂದ 40 ಲೋಡ್ ಹಾಗೂ ರಾವೆ ಯಿಂದ 50 ಲೋಡ್ ಅಕ್ರಮ ಮರಳು ಸರಾಗವಾಗಿ ತೀರ್ಥಹಳ್ಳಿ ಶಿವಮೊಗ್ಗ ನಗರಕ್ಕೆ ಸಾಗಾಟವಾಗುತ್ತಿದೆ.!ಇನ್ನೂ ಆರಗದ ಪಿರನಗುಡ್ಡೆಯಲ್ಲಿ ಮರಳು ದಂಧೆಯ ಸ್ಯಾಂಡ್ ಸ್ಟಾರ್ ಉಪ್ಪಿ ದಿನನಿತ್ಯ ಪಿಕಪ್ ವಾಹನದಲ್ಲಿ ಒಂದು ಸ್ಥಳದಲ್ಲಿ ಅಕ್ರಮವಾಗಿ ಮರಳು ಶೇಖರಣೆಮಾಡಿ ತನ್ನದೇ ನಾಲ್ಕೈದು ಟಿಪ್ಪರ್ಗಳ ಮುಖಾಂತರ ರಾತ್ರಿ ಹಗಲೆನ್ನದೆ ಮರಳು ಲೂಟಿ ಮಾಡುತ್ತಿದ್ದಾನೆ.ಅದರಲ್ಲೂ ತನ್ನದೆ ಬ್ರಿಕ್ಸ್ ತಯಾರಿಸುವ ಘಟಕಕ್ಕೆ ಮರಳು ಸಾಗಾಟ ಮಾಡಿಕೊಳ್ಳುತ್ತಾನೆ ಎಂದರೆ ಇವನ ಬೆನ್ನಿಗೆ ಯಾರಿದ್ದಾರೆ ಎನ್ನುವುದನ್ನು ಬರೆದು ಹೇಳ ಬೇಕಿಲ್ಲ.? ಕಳೆದ ಶುಕ್ರವಾರ ತಾಲ್ಲೂಕು ಅಧಿಕಾರಿಯೊಬ್ಬ ಪಿರನಗುಡ್ಡೆಯಲ್ಲಿ ಮರಳು ತುಂಬಿದ ಲಾರಿ ಹಿಡಿದಿದ್ದಾರೆ.ಆದರೆ ಅಕ್ರಮ ಮರಳು ತುಂಬಿದ ಲಾರಿ ಸೀಜ್ ಆಗದೆ ಬಿಡುಗಡೆಯಾಗಿದೆ ಕಾರಣವಿಷ್ಟೇ ಸ್ಯಾಂಡ್ ಸ್ಟಾರ್ ಉಪ್ಪಿಯ ಜೇಬಿನಿಂದ ಹೊರಬಂದ 50,000 ಸಾವಿರ ರೂಪಾಯಿಯ ಪಿಂಡಿ ಅಧಿಕಾರಿಯ ಜೇಬಿಗೆ ನೀಟಾಗಿ ಜಾರಿದೆ ಎಂದು ಆರಗ ಗ್ರಾಮದ ಮರಳು ದಂಧೆಕೋರ ಸ್ಯಾಂಡ್ ಸ್ಟಾರ್ ಬಾಯಿಯಿಂದಲೆ ಹೊರಬಿದ್ದಿದ್ದು ಇದು ಗ್ರಾಮದ ಜನರ ಬಾಯಲ್ಲಿ ಅಧಿಕಾರಿಯ ವಿರುದ್ಧ ಚರ್ಚೆಗೆ ಗ್ರಾಸವಾಗಿದೆ ಇದು ನಿಜವಾ ಎನ್ನುವುದು ಮಾತ್ರ ತೀರ್ಥಹಳ್ಳಿ ನಗರದ ತಾಲ್ಲೂಕು ದಂಡ ಅಧಿಕಾರಿಗಳ ಕಛೇರಿಯ ಸಮೀಪವಿರುವ ತಾಯಿ ಮಾರಿಕಾಂಬೆಗೆ ಗೊತ್ತು.?

ಇನ್ನೂ ರಂಜದ ಕಟ್ಟೆ ನದಿತೀರದಲ್ಲಿ ಅಕ್ರಮ ಮರಳು ಲೂಟಿ ಕೋರರಾದ ರಂಜು,ಅವಿನಾಶ್ ಮತ್ತು ಇರ್ಫಾನ್ ಹಾಗೂ ಶರತ್ ಹಗಲು ರಾತ್ರಿ ಎನ್ನದೆ ಮರಳು ಲೂಟಿ ಮಾಡುತ್ತಿದ್ದಾರೆ ಇನ್ನೂ ರಾವೆಯಲ್ಲಿ ಇರ್ಫಾನ್ ಗ್ಯಾಂಗ್ ಅಕ್ರಮವಾಗಿ ಮರಳು ಲೂಟಿ ಮಾಡುತ್ತಿದ್ದಾರೆ. ಇಲ್ಲಿ ಲೂಟಿ ಮಾಡಿದ ಅಕ್ರಮ ಮರಳು ರಾತ್ರಿ ತೀರ್ಥಹಳ್ಳಿ RMC ಹಿಂಬಾಗದ ಕಲ್ಯಾಣ ಮಂದಿರದ ಸಮೀಪದಲ್ಲಿ ಶೇಖರಣೆಯಾಗಿ ಬೆಳಕು ಕಾಣುವ ಮುನ್ನವೆ ನ್ಯಾಷನಲ್ ಅವರ ಪ್ಲಾಂಟ್ಗೆ ರವಾನೆಯಾಗುತ್ತಿದೆ ಎನ್ನುವ ಮಾತು ತೀರ್ಥಹಳ್ಳಿ ನಗರದಿಂದಲೆ ಕೇಳಿಬರುತ್ತಿದೆ.!? ವರ್ಷಕ್ಕೆ 700 ರಿಂದ 800 ಲೋಡ್ ಅಕ್ರಮ ಮರಳು LP ಲಾರಿಗಳಲ್ಲಿ ನ್ಯಾಷನಲ್ ಪ್ಲಾಂಟ್ಗೆ ಸಾಗಾಟವಾಗುತ್ತಿದೆ ಎನ್ನುವ ಮಾತು ತೀರ್ಥಹಳ್ಳಿ ಪಟ್ಟಣದಿಂದ ಕೇಳಿಬರುತ್ತಿದೆ.ಲೋಡ್ ಗಟ್ಟಲೆ ಅಕ್ರಮ ಮರಳು ಸಾಗಾಟ ಮಾಡುತ್ತಿರುವುದು ಇರ್ಫಾನ್ ಎನ್ನುವ ಮರಳು ದಂಧೆಕೋರನ ಅಡ್ಡೆಗೆ.!? ರಂಜದ ಕಟ್ಟೆ, ರಾವೆ ಮತ್ತು ಕುಶಾವತಿಯ ನದಿತೀರದಲ್ಲಿ ದಿನನಿತ್ಯ ಲೂಟಿಯಾಗುವ ನೂರಾರು ಲೋಡ್ ಮರಳು ರಾತ್ರೋ ರಾತ್ರಿ ಇರ್ಫಾನ್ ನಾ ನಿಗೂಢ ಸ್ಥಳಗಳಲ್ಲಿ ಶೇಖರಣೆಯಾಗಿ ಬೆಳಕು ಕಾಣುವ ಮುನ್ನವೇ ಬಿಕರಿಯಾಗುತ್ತವೆ.ಸರ್ಕಾರದ ಬೊಕ್ಕಸವನ್ನು ಬರಿದುಮಾಡಿ ನಿರಂತರವಾಗಿ ಹಗಲು ರಾತ್ರಿ ಎನ್ನದೆ ಸಾವಿರಾರು ಲೋಡ್ ಮರಳು ಅಕ್ರಮವಾಗಿ ಲೂಟಿ ಆಗುತ್ತಿದ್ದರು ತೀರ್ಥಹಳ್ಳಿಯ ತಾಲ್ಲೂಕು ಆಡಳಿತ ಕಣ್ಣೆದುರಿಗೆ ಕಂಡು ಕಾಣದವರಂತೆ ಮೌನಕ್ಕೆ ಜಾರಿದ್ದು ಮಾತ್ರ ದುರಂತವೆ ಹೌದು. ಇವರುಗಳು ಸರ್ಕಾರಿ ಅಧಿಕಾರಿಗಳೆ ಅಥವಾ ಲೂಟಿ ಕೋರರೆ ಎನ್ನುವ ಅನುಮಾನ ಸ್ಥಳೀಯನ್ನ ಕಾಡಿದೆ.
ಹಲವು ದಿನಗಳಿಂದ ನಡೆಯುತ್ತಿರುವ ಅಕ್ರಮ ಮರಳು ತಡೆಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಮುಂದಾಗುತ್ತಿಲ್ಲ. ಸ್ಥಳೀಯರು ಮಾಹಿತಿ ನೀಡಿದರೂ ತಮ್ಮ ಜವಬ್ದಾರಿ ಮರೆತು ನಿದ್ರೆಗೆ ಜಾರಿದ್ದಾರೆ.

ಮಧ್ಯರಾತ್ರಿಯಿಂದ ಬೆಳಗಿನ ಜಾವದವರೆಗೆ ನಡೆಯುವ ಅಕ್ರಮ ವಹಿವಾಟಿಗೆ ತಾಲ್ಲೂಕು ಆಡಳಿತದ ಬೆಂಬಲ ದೊರೆತಿರುವ ಸಾಧ್ಯತೆ ಇದೆ. ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಮರಳು ತೀರ್ಥಹಳ್ಳಿ ಪಟ್ಟಣ ಮತ್ತು ಹೊರ ಊರುಗಳಿಗೆ ಅಕ್ರಮವಾಗಿ ಸಾಗಾಟವಾಗುತ್ತಿದ್ದರು ಮರಳು ಲಾರಿಗಳನ್ನು ಗಣಿ ಮತ್ತು ಭೂ–ವಿಜ್ಞಾನ, ಪೊಲೀಸ್, ಅರಣ್ಯ, ಕಂದಾಯ ಇಲಾಖೆ ವಶಕ್ಕೆ ಪಡೆಯುತ್ತಲೇ ಇಲ್ಲ’ ಅಮಾವಾಸೆಗೊ ಹುಣ್ಣುಮೆಗೊ ಎಲ್ಲೊ ಒಂದು ಲಾರಿ, ಪಿಕಪ್ ವಾಹನದಲ್ಲಿ ಅಕ್ರಮವಾಗಿ ಸಾಗಾಟ ಆಗುವ ಮರಳನ್ನು ಹಿಡಿದು ನಾವು ಗ್ರೇಟ್ ಎನ್ನುವಂತೆ ಫೋಸು ಕೊಡುವುದನ್ನು ನೋಡಿದರೆ ನೀವು ಬೆಚ್ಚಿ ಬಿಳುವುದು ಗ್ಯಾರಂಟಿ.!
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಗುರುತಿಸಿದ ಮರಳು ಕ್ವಾರಿಗಳು ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ, ಇಂದಿಗೂ ಕ್ವಾರಿಗಳು ಆರಂಭಗೊಂಡಿಲ್ಲ. ಸರ್ಕಾರದ ವೈಫಲ್ಯ ವರದಾನವಾಗಿದ್ದು,ಅಕ್ರಮ ಮರಳು ಸಾಗಣೆಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ. ನಿತ್ಯ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಮಟ್ಟದ ಆದಾಯ ನಷ್ಟವಾಗುತ್ತಿದೆ.
ಮಂಡಗದ್ದೆ, ಹೊಳೆಕೊಪ್ಪ, ಮೇಳಿಗೆ, ಮಹಿಷಿ, ಕೂಡಿಗೆ, ದಬ್ಬಣಗದ್ದೆ ,ಮುಂಡೊಳ್ಳಿ, ತೂದುರು,ಗಬಡಿ, ಕುಶಾವತಿ, ಹುಣಸವಳ್ಳಿ, ಹೆದ್ದೂರು, ಬುಕ್ಲಾಪುರ, ಬಗ್ಗೊಡಿಗೆ, ಮಳಲೂರು ಸೇರಿದಂತೆ ಜೀವನದಿಗಳಿಗೆ ಜೀವ ತುಂಬುವ ಹಳ್ಳ, ಹೊಳೆ, ತೊರೆಗಳಲ್ಲಿ ಸಿಗುವ ಅಲ್ಪಸ್ವಲ್ಪದ ಮರಳು ಅಕ್ರಮ ದಂಧೆಕೋರರಿಂದ ಬರಿದಾಗುತ್ತಿದೆ. ಲಾರಿ, ಪಿಕಪ್, ಟೆಂಪೋ, ಟಿಪ್ಪರ್ಗಳಲ್ಲಿ ಮರಳು ಅಕ್ರಮ ಸಾಗಣೆ ನಡೆಯುತ್ತಿದ್ದರೂ ತಾಲ್ಲೂಕು ಆಡಳಿತ ಮತ್ತು ಜಿಲ್ಲಾಡಳಿತ ಸೂಕ್ತ ಕಾನೂನು ಕ್ರಮ ಜರುಗಿಸಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಾರೆ.

ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತೀರ್ಥಹಳ್ಳಿ ತಾಲ್ಲೂಕಿನಾದ್ಯಂತ ಈ ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕಿ ದಂಧೆಕೋರರನ್ನು ಮಟ್ಟ ಹಾಕದೆ ಹೋದರೆ ನಿಮ್ಮ ಮತ್ತು ಅಕ್ರಮ ದಂಧೆಕೋರರ ನಡುವಿನ ಅಸಲಿ ಸತ್ಯಯನ್ನು ನಿಮ್ಮ ಮುಂದಿಡಲಿದ್ದೇನೆ….
ಇನ್ನೂ ಕುರುವಳ್ಳಿಯ ಹೆಬ್ಬಂಡೆಯ ಬುಡದಲ್ಲಿರು ಕಿರಾತಕನೊಬ್ಬ ಅಕ್ರಮ ಮರಳು ಲೂಟಿ ಕೋರರ ಬೆನ್ನಿಗೆ ಬಂಡೆ ಯಂತೆ ನಿಂತಿದ್ದಾನೆ.! ರಾಜಕಾರಣಿ ಕಮ್ ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯನಾಗಿರುವ ಇತ ಇವುಗಳನ್ನೆ ಆಸ್ತ್ರ ಮಾಡಿಕೊಂಡು ಅಕ್ರಮ ಮರಳು ದಂಧೆಕೋರರಿಂದ ಒಂದು ಲಾರಿ ಇಷ್ಟು ಮತ್ತು ಒಂದು ಪಿಕಪ್ ಲೋಡ್ ಗೆ ಇಂತಿಷ್ಟು ಹಣ ಅಂತ ಪಿಕ್ಸ್ ಮಾಡಿಕೊಂಡು ಬೇವರು ಸುರಿಸದೆ ಕಡಿಮೆ ಎಂದರು ನಿತ್ಯ 15 ರಿಂದ 20 ಸಾವಿರ ರೂಪಾಯಿ ನೀಟಾಗಿ ಜೇಬಿಗೆ ಇಳಿಸುತ್ತಾನೆ ಈ ಬಂಡೆ.!ಈ ಪಾಪದ ಕೆಲಸಕ್ಕೆ ತನ್ನ ಕಾಂಗ್ರೆಸ್ ಪಕ್ಷವನ್ನೆ ಎತ್ತುವಳಿಯ ಲೇಬಲ್ ಮಾಡಿಕೊಂಡಿರುವ ಈತ ಅಕ್ರಮ ಮರಳು ದಂಧೆಕೋರರಿಂದ ನಿತ್ಯ ಹಣ ವಸೂಲಿಗೆ ಇಳಿದಿದ್ದಾನೆ.ಇವನ ಅಸಲಿ ಕಥೆ ಕೂಡ ನಿಮ್ಮ ಮುಂದಿಡಲಿದ್ದೇನೆ. ಮಾತು ಮಾತಿಗೆ ದೇವರ ಹೆಸರನ್ನು ತನ್ನ ಬಾಯಿಯಿಂದ ಹರಿಬಿಡುವ ಇತನಿಗೆ ತಾನು ಮಾಡುವ ಹಡಬೆ ದಂಧೆಯ ಸಮಯದಲ್ಲಿ ದೇವರು ನೆನಪಿಗೆ ಬರುವುದಿಲ್ಲ….


