ತಮಿಳುನಾಡು : ತಮಿಳುನಾಡು ಚುನಾವಣೆ : ನಟ ವಿಜಯ್ ಸಾರಥ್ಯದ ಟಿವಿಕೆ 100 ಕ್ಷೇತ್ರದಲ್ಲಿ ಭರ್ಜರಿ ಮುನ್ನಡೆ.
news.ashwasurya.in
ಅಶ್ವಸೂರ್ಯ/ತಮಿಳುನಾಡು : ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ, ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಆರಂಭಿಕ ಮುನ್ನಡೆ ಸಾಧಿಸಿದೆ. ತಮಿಳುನಾಡಿನ 100 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ. ಫಲಿತಾಂಶದ ನಂತರ ಶಾಸಕರನ್ನು ರಕ್ಷಿಸಿಕೊಳ್ಳಲು ಪಕ್ಷವು ‘ರೆಸಾರ್ಟ್ ರಾಜಕೀಯ’ದ ಕ್ರಮ ಕೈಗೊಂಡಿದೆ. ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಆರಂಭವಾಗಿದ್ದು, ಇಡೀ ರಾಜ್ಯದ ಕಣ್ಣು ನೆಟ್ಟಿರುವ ‘ದಳಪತಿ’ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಆರಂಭಿಕ ಹಂತದಲ್ಲಿ ಭರವಸೆ ಮೂಡಿಸಿದೆ. ಬೆಳಿಗ್ಗೆ 8:04ರ ಆರಂಭಿಕ ಟ್ರೆಂಡ್ಗಳ ಪ್ರಕಾರ, ಪೆರಂಬೂರ್ ಕ್ಷೇತ್ರದಲ್ಲಿ ನಟ ವಿಜಯ್ ಮುನ್ನಡೆ ಸಾಧಿಸಿದ್ದಾರು. 10 ಗಂಟೆಯ ಸುಮಾರಿಗೆ ಟಿವಿಕೆ ಪಕ್ಷದ 95 ಕ್ಷೇತ್ರದಲ್ಲಿ ಮತಗಳ ಮುನ್ನಡೆ ಕಂಡಿದ್ದಾರೆ.

ವಿಜಯ್ ಪಕ್ಷವನ್ನು ಲಘುವಾಗಿ ಪರಿಗಣಿಸಿದ ತಿರುಮಾವಳವನ್ಡಿ ಎಂಕೆ ಮಿತ್ರಪಕ್ಷವಾದ ವಿಡುತಲೈ ಚಿರುತೈಗಳ್ ಕಚ್ಚಿ (VCK) ಮುಖ್ಯಸ್ಥ ತೋಲ್ ತಿರುಮಾವಳವನ್ ಅವರು ವಿಜಯ್ ಅವರ ಪಕ್ಷವನ್ನು ಲಘುವಾಗಿ ಪರಿಗಣಿಸಿದ್ದಾರೆ. “ಟಿವಿಕೆ ಕೇವಲ ಮತಗಳನ್ನು ಸೀಳಬಹುದಷ್ಟೇ ಹೊರತು, ಗೆಲ್ಲುವ ಶಕ್ತಿ ಅದಕ್ಕಿಲ್ಲ. ಆಡಳಿತ ಪಕ್ಷ ಅಥವಾ ಪ್ರಮುಖ ವಿರೋಧ ಪಕ್ಷಗಳನ್ನು ಮೀರಿಸಲು ವಿಜಯ್ ಅವರಿಂದ ಸಾಧ್ಯವಿಲ್ಲ. ಡಿಎಂಕೆ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದರು. ಅಲ್ಲದೆ, ತಾವು ಸ್ಪರ್ಧಿಸಿರುವ 8 ಕ್ಷೇತ್ರಗಳಲ್ಲೂ ಗೆಲ್ಲುವ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ಫಲಿತಾಂಶಕ್ಕೂ ಮುನ್ನವೇ ‘ರೆಸಾರ್ಟ್ ರಾಜಕೀಯ’ದ ಆತಂಕ?
ಎಕ್ಸಿಟ್ ಪೋಲ್ಗಳು ವಿಜಯ್ ಪಕ್ಷಕ್ಕೆ ಉತ್ತಮ ಸ್ಥಾನಗಳನ್ನು ಭವಿಷ್ಯ ನುಡಿದಿರುವ ಬೆನ್ನಲ್ಲೇ, ಟಿವಿಕೆ ನಾಯಕತ್ವವು ತನ್ನ ಅಭ್ಯರ್ಥಿಗಳನ್ನು ರಕ್ಷಿಸಿಕೊಳ್ಳಲು ಮುಂದಾಗಿದೆ. ಗೆದ್ದ ಅಭ್ಯರ್ಥಿಗಳು ಫಲಿತಾಂಶ ಹೊರಬಂದ ತಕ್ಷಣ ಚೆನ್ನೈನ ಪಣೈಯೂರ್ನಲ್ಲಿರುವ ಪಕ್ಷದ ಪ್ರಧಾನ ಕಚೇರಿಗೆ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಶಾಸಕರು ಬೇರೆ ಪಕ್ಷಗಳಿಗೆ ಜಿಗಿಯದಂತೆ ತಡೆಯಲು ಈ “ರೆಸಾರ್ಟ್ ರಾಜಕೀಯ”ದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ. ನಿಕಟ ಸ್ಪರ್ಧೆ ಏರ್ಪಟ್ಟರೆ ಪ್ರತಿಯೊಬ್ಬ ಶಾಸಕನ ಸಂಖ್ಯೆಯೂ ಸರ್ಕಾರ ರಚನೆಯಲ್ಲಿ ನಿರ್ಣಾಯಕವಾಗಲಿದೆ. ತಮಿಳುನಾಡಿನಾದ್ಯಂತ 234 ಕ್ಷೇತ್ರಗಳಲ್ಲಿ ಎಣಿಕೆ ಪ್ರಕ್ರಿಯೆ ಬಿರುಸಿನಿಂದ ಸಾಗಿದ್ದು, ಡಿಎಂಕೆ, ಎಐಎಡಿಎಂಕೆ ನೇತೃತ್ವದ ಎನ್ಡಿಎ ಮತ್ತು ಮೊದಲ ಬಾರಿಗೆ ಕಣಕ್ಕಿಳಿದಿರುವ ವಿಜಯ್ ಅವರ ಟಿವಿಕೆ ನಡುವೆ ತ್ರಿಕೋನ ಸ್ಪರ್ಧೆ ಕಂಡುಬರುತ್ತಿದ್ದರು ಸದ್ಯದ ಪರಿಸ್ಥಿತಿಯಲ್ಲಿ ವಿಜಯ್ ಸಾರಥ್ಯದ ಟಿವಿಕೆ ಪಕ್ಷ 100 ಕ್ಷೇತ್ರದಲ್ಲಿ ಭರ್ಜರಿ ಮುನ್ನಡೆ ಸಾಧಿಸಿದೆ ಬಹುಮತಕ್ಕೆ 118 ಸ್ಥಾನಗಳಲ್ಲಿ ಟಿವಿಕೆ ಗೆಲುವು ಸಾಧಿಸಬೇಕಿದೆ.ಎಲ್ಲವನ್ನೂ ಕಾದು ನೋಡಬೇಕಿದೆ.


