ಹೈದರಾಬಾದ್ : ಗಂಡನಿದ್ದು ಅನ್ಯನೊಂದಿಗೆ ಹೆಂಡತಿಯ ಅನೈತಿಕ ಸಂಭಂದ.! ಅ ಖಾಸಗಿ ವಿಡಿಯೋ ನೋಡಿ ಜೀವಬಿಟ್ಟ ಸಾಫ್ಟ್ವೇರ್ ಗಂಡ.! ವರ್ಷದಲ್ಲಿ ಮೂವರು ಗಂಡಸರೊಂದಿಗೆ ಸರಸ.!
news.ashwasurya.in
ಅಶ್ವಸೂರ್ಯ/ಹೈದರಾಬಾದ್ : ಹೈದರಾಬಾದ್ನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಸೀತಾರಾಂ ತಾನು ತಾಳಿಕಟ್ಟಿದ ಮಡದಿ ರೇಣುಕಾಳ ಅನೈತಿಕ ಸಂಬಂಧಗಳಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ.! ಸಾವಿಗೂ ಮುನ್ನ ಅವರು ಬರೆದ 19 ಪುಟಗಳ ಡೆತ್ ನೋಟ್ ಆಧರಿಸಿ, ಪೊಲೀಸರು ಪತ್ನಿ ಹಾಗೂ ಆಕೆಯ ಪ್ರಿಯಕರರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಇಲ್ಲಿ ಗಮನಿಸ ಬೇಕಾಗಿರುವುದು ಗುರು ಹಿರಿಯರ ಇಚ್ಛೆಯಂತೆ ಪ್ರೀತಿಯಿಂದ ಕಟ್ಟಿಕೊಂಡ ಸಂಸಾರದಲ್ಲಿ ಅನ್ಯ ಗಂಡಸರೊಂದಿಗೆ ಮಡದಿಯ ತೆವಲಿನ ಕಾಮದಿಂದ ಕುಟುಂಬದ ಅಡಿಪಾಯ ಕುಸಿದು ಬಿದ್ದಿದೆ.! ಸುಂದರವಾದ ಸಂಸಾರವಿದ್ದು ಹೆಂಡತಿ ಗಂಡನಿಗೆ ಗೊತ್ತಾಗುವಂತೆ ಅನ್ಯ ಗಂಡಸರೊಂದಿಗೆ ಅನೈತಿಕ ಸಂಭಂದ ಹೊಂದಿದ್ದರಿಂದ ಆ ಗಂಡ ಅನುಭವಿಸಿದ ನೋವು ಎಂತಹುದು ಎನ್ನುವುದು ಹೈದರಾಬಾದ್ನಲ್ಲಿ ನೆಡೆದ ಈ ಘಟನೆಯಿಂದ ಬಯಲಾಗಿದೆ. ಸಾಫ್ಟ್ವೇರ್ ಇಂಜಿನಿಯರ್ ಸೀತಾರಾಂ ಎಂಬುವವರು ತಮ್ಮ ಪತ್ನಿ ರೇಣುಕಾ ಅವರ ಅನೈತಿಕ ಸಂಬಂಧಗಳಿಂದ ಬೇಸತ್ತು ಹೈದರಾಬಾದ್ನಲ್ಲಿ ಕೆರೆಯೊಂದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ,ಗಂಡನ ಸಾವಿನ ನಂತರ ಹೆಂಡತಿಯ ಅನ್ಯಗಂಡಸರೊಂದಿಗಿನ ರಾಸಲಿಲೇಗಳು ಬಯಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಪತ್ನಿಯ ಖಾಸಗಿ ವಿಡಿಯೋ!
ಸೀತಾರಾಂ ಅವರು ಸಾವಿಗೂ ಮುನ್ನ ಬರೆದಿಟ್ಟಿರುವ 19 ಪುಟಗಳ ಸುದೀರ್ಘ ಡೆತ್ ನೋಟ್ ಈಗ ಎಲ್ಲರ ಕಣ್ಣಂಚಿನಲ್ಲಿ ನೀರು ತರಿಸುತ್ತಿದೆ. ಪತ್ನಿ ರೇಣುಕಾ ಕಳೆದ ಒಂದೂವರೆ ವರ್ಷದಲ್ಲಿ ಮನೆಯಲ್ಲಿ ಮುದ್ದಾದ ಗಂಡನಿದ್ದು ಮೂವರು ಅನ್ಯ ಪುರುಷರ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಸೀತಾರಾಂ ನೋವಿನಿಂದ ಬರೆದಿದ್ದಾರೆ. ಅಷ್ಟೇ ಅಲ್ಲದೆ, ತನ್ನ ಪ್ರಿಯಕರನ ಜೊತೆಗಿನ ಖಾಸಗಿ ವಿಡಿಯೋಗಳನ್ನು ಅವಳು ರೆಕಾರ್ಡ್ ಮಾಡಿಕೊಂಡಿದ್ದಳು. ಅದರಲ್ಲಿ ರಮಣ ಎಂಬ ವ್ಯಕ್ತಿ ಆ ವಿಡಿಯೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದ. ಇದನ್ನು ನೋಡಿದ ಸೀತಾರಾಂ ಅವರ ಮನಸ್ಸು ಸಂಪೂರ್ಣವಾಗಿ ನಲುಗಿ ಹೋಗಿದೆ.! ಮಡದಿಯೊಂದಿಗಿನ ಜೀವನ ಸಾಕೇನಿಸಿದೆ..
ಡೆತ್ ನೋಟ್ನಲ್ಲಿರುವ ನೋವಿನ ಸಂಗತಿ :
‘ನಾನು ನನ್ನ ಪತ್ನಿ ರೇಣುಕಾಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದೆ ಅವಳಿಗೆ ಏನು ಬೇಕಿತ್ತು? ಪ್ರೀತಿಯೋ ಅಥವಾ ಕಾಮವೋ? ಒಂದೂವರೆ ವರ್ಷದಲ್ಲಿ ಮೂವರನ್ನು ಬದಲಾಯಿಸಿದಳು. ಪ್ರಿಯಕರನ ಜೊತೆಗಿನ ಖಾಸಗಿ ವಿಡಿಯೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ನೋಡಿದ ಮೇಲೆ ನಾನು ಹೇಗೆ ಬದುಕಿರಲಿ? ನನ್ನ ಪತ್ನಿಯ ನಿಜಸ್ವರೂಪ ತಿಳಿದ ಮೇಲೆ ನನಗೆ ಬದುಕುವ ಆಸೆಯೇ ಹೋಯಿತು’ ಎಂದು ಸೀತಾರಾಂ ಡೆತ್ ನೋಟ್ ನಲ್ಲಿ ಬರೆದಿದ್ದಾರೆ. ಅಲ್ಲದೆ, ‘ಯಾವ ಹೆಣ್ಣೂ ಕೂಡ ಇಂತಹ ದ್ರೋಹವನ್ನು ಮಾಡಬೇಡಿ’ ಎಂದು ಇತರರಿಗೆ ಮನವಿಯನ್ನೂ ಮಾಡಿದ್ದಾರೆ.
ಪ್ರಕರಣ ಹಿನ್ನೆಲೆ ?
ಆಂಧ್ರಪ್ರದೇಶದ ಮಾರ್ಕಾಪುರದ ಸೀತಾರಾಂ ಮತ್ತು ನಂದ್ಯಾಲದ ರೇಣುಕಾ ಅವರಿಗೆ 2018ರಲ್ಲಿ ವಿವಾಹವಾಗಿತ್ತು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಹೈದರಾಬಾದ್ನ ಬಾಚುಪಲ್ಲಿಯಲ್ಲಿ ವಾಸವಿದ್ದ ಈ ದಂಪತಿಗಳ ಜೀವನದಲ್ಲಿ ರೇಣುಕಾಳ ಅಕ್ರಮ ಸಂಬಂಧವೆ ಸುಂದರವಾಗಿದ್ದ ಕುಟುಂಬವನ್ನು ಛಿದ್ರವಾಗಿಸುದೆ. ತಾನು ಮನೆಯಲ್ಲಿ ಇಲ್ಲದ ಸಮಯದಲ್ಲಿ ಪ್ರಿಯಕರ ರಮಣ ಮನೆಗೆ ಬರುತ್ತಿದ್ದ ವಿಷಯ ಸೀತಾರಾಂಗೆ ತಿಳಿದಿತ್ತು. ಇದರಿಂದ ಮನನೊಂದ ಸೀತಾರಾಂ ಕಳೆದ ಫೆಬ್ರವರಿಯಲ್ಲಿ ಹುಸೇನ್ ಸಾಗರ್ (ಟ್ಯಾಂಕ್ ಬಂಡ್) ಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಪತ್ನಿ ಮತ್ತು ಪ್ರಿಯಕರರ ಬಂಧನ:
ಸೀತಾರಾಂ ಪೋಷಕರ ದೂರಿನ ಮೇರೆಗೆ ಹೈದರಾಬಾದ್ ಪೊಲೀಸರು ತನಿಖೆ ಆರಂಭಿಸಿದ್ದರು. ಸೀತಾರಾಂ ಬರೆದಿದ್ದ 19 ಪುಟಗಳ ಡೆತ್ ನೋಟ್ ಪ್ರಕರಣಕ್ಕೆ ಹೊಸ ತಿರುವು ನೀಡಿತು. ಇದರ ಆಧಾರದ ಮೇಲೆ ಪೊಲೀಸರು ಇದೀಗ ಪತ್ನಿ ರೇಣುಕಾ ಹಾಗೂ ಅವಳ ಇಬ್ಬರು ಪ್ರಿಯಕರರಾದ ರಮಣಾ ರೆಡ್ಡಿ ಮತ್ತು ಶ್ರವಣ್ ಎಂಬುವವರನ್ನು ಬಂಧಿಸಿದ್ದಾರೆ. ಸೀತಾರಾಂ ಅವರ ಸಾವು ಕೇವಲ ಒಂದು ಆತ್ಮಹತ್ಯೆಯಲ್ಲ, ಅದು ನಂಬಿಕೆಯ ಕಗ್ಗೊಲೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಬ್ಬ ಸಾಫ್ಟ್ವೇರ್ ಇಂಜಿನಿಯರ್ ತನ್ನ ಬದುಕನ್ನು ಈ ರೀತಿ ಕೊನೆಗೊಳಿಸಿಕೊಂಡಿರುವುದು ಮೃತರ ಕುಟುಂಬವನ್ನು ಅನಾಥವಾಗಿಸಿದೆ.


