ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಬಿಜೆಪಿ ಮುಖಂಡನೊಬ್ಬನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ಪತ್ನಿ ನೇಣಿಗೆ ಶರಣಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ…
ಶಿವಮೊಗ್ಗ : ಕುಣಿಕೆಗೆ ಕೊರಳೊಡ್ಡಿದ ಸೊರಬ ಬಿಜೆಪಿ ಮುಖಂಡನ ಪತ್ನಿ ಸಾವು.! ಪತಿ ಬಂಧನ.
news.ashwasurya.in
ಅಶ್ವಸೂರ್ಯ/ಶಿವಮೊಗ್ಗ: ಸೊರಬದಲ್ಲಿ ಬಿಜೆಪಿ ಮುಖಂಡನ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರಕರಣ ಸಂಬಂಧ ಬಿಜೆಪಿ ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ.
ಹಾವೇರಿಯ ಹಿರೇಕೆರೂರ ತಾಲೂಕಿನ ಹೊಸವೀರಾಪುರ ಗ್ರಾಮದ ಮಂಜುಳಾ (38) ನೇಣಿಗೆ ಶರಣಾದ ಮಹಿಳೆ. ಸೊರಬ ಪಟ್ಟಣದ ಕಾನುಕೇರಿ ಬಡಾವಣೆಯಲ್ಲಿ ಕಳೆದ ಭಾನುವಾರ ನಡೆದ ಈ ಘಟನೆ ನೆಡೆದಿದೆ.
ಮಂಜುಳಾ ಸಾವಿಗೆ ಪತಿಯ ಕಿರುಕುಳ ಕಾರಣ ಎಂದು ಆಕೆಯ ಕುಟುಂಬಸ್ಥರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ಹಾಗೂ ಸೊರಬ ಪುರಸಭೆ ಮಾಜಿ ಅಧ್ಯಕ್ಷ ಪ್ರಭು ಮೇಸ್ತ್ರಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಾರ್ಡ್ವೇರ್ ಅಂಗಡಿ ಜೊತೆ ರಾಜಕೀಯದಲ್ಲಿ ಪ್ರಭು ಮೇಸ್ತ್ರಿ ಗುರುತಿಸಿಕೊಂಡಿದ್ದ.

2024ರಲ್ಲಿ ಮಂಜುಳಾರನ್ನ 2ನೇ ಮದ್ವೆಯಾಗಿದ್ದ. 2ನೇ ಮದುವೆ ನಂತರವೂ ಮತ್ತೊಂದು ಮಹಿಳೆ ಜೊತೆ ಒಡನಾಟ ಹೊಂದಿದ್ದನಂತೆ.ಈ ಕಾರಣಕ್ಕೆ ರಾಜೀ ಪಂಚಾಯತಿ ನೆಡೆದಿದ್ದು ಅ ನಂತರವೂ ಒಡನಾಟ ಮುಂದುವರೆಸಿದ್ದನಂತೆ.! ಇದೆ ಕಾರಣಕ್ಕೆ ಪತ್ನಿ ಮಂಜುಳಾಗೆ ಕಿರುಕುಳ ನೀಡುತ್ತಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಪತಿ ಪ್ರಭು ಮೇಸ್ತ್ರಿಯ ಕಿರುಕುಳ ತಾಳಲಾರದೇ ಮಂಜುಳಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಸಂಬಂಧ ಪ್ರಭು ಮೇಸ್ತ್ರಿ ವಿರುದ್ಧ ಮಂಜುಳಾ ತಾಯಿ ದೂರು ನೀಡಿದ್ದರು. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಬಂಧಿಸಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಸ್ತುತ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.


