ಭದ್ರಾವತಿ : ಖಡಕ್ ಎಸ್ಪಿ ನಿಖಿಲ್ ಮಾರ್ಗದರ್ಶನದಲ್ಲಿ ಪೊಲೀಸರ ದಾಳಿ, ಅಕ್ರಮ ಜೂಜಾಟದಲ್ಲಿ ತೋಡಗಿದ್ದ 19 ಜನ ಆರೋಪಿತರ ವಿರುದ್ಧ ಪ್ರಕರಣ ದಾಖಲು.
news.ashwasurya.in
ಅಶ್ವಸೂರ್ಯ/ಭದ್ರಾವತಿ : ಅಕ್ರಮ ಜೂಜಾಟದ ತವರೂರಾದ ಭದ್ರಾವತಿ ಹಾಗೂ ಹೊಳೆಹೊನ್ನೂರಿನಲ್ಲಿ ಪೋಲಿಸರು ತಮ್ಮ ಕರ್ತವ್ಯ ಮೆರೆದಿದ್ದರೆ.ಅಕ್ರಮ ಜೂಜೂ ಕೋರರಿಗೆ ಖಡಕ್ ಎಸ್ಪಿ ನಿಖಿಲ್ ಬಿ ಐಪಿಎಸ್ ಅವರು ಬಿಸಿ ಮುಟ್ಟಿಸಿದ್ದಾರೆ.ನಮ್ಮ “ಅಶ್ವಸೂರ್ಯ” ಪತ್ರಿಕೆಯಲ್ಲಿ ವರದಿಗೆ ಸ್ಪಂದನೆ. ಜಿಲ್ಲಾ ರಕ್ಷಣಾಧಿಕಾರಿಗಳಾದ ನಿಖಿಲ್ ಅವರು ತಕ್ಷಣವೇ ಭದ್ರಾವತಿ ತಾಲ್ಲೂಕಿನ ಹಿರಿಯ ಅಧಿಕಾರಿಗಳಿಗೆ ಜೂಜೂಕೋರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದರೆ.

ಎಸ್ಪಿ ಅವರ ಸೂಚನೆ ಮೇರೆಗೆ ಕಾರ್ಯಚರಣೆಗೆ ಇಳಿದ ಪೋಲಿಸರ ತಂಡ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಕಾನೂನು ಬಾಹೀರ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ಡ್ರೋಣ್ ಕ್ಯಾಮೆರಾ ಮುಖಾಂತರ ಕಣ್ಗಾವಲು ಇಟ್ಟಿದ್ದು, ಈ ದಿನ ಭದ್ರಾವತಿಯ ಕೂಡ್ಲಿಗೆರೆ ಗ್ರಾಮದ ಹೊರ ವಲಯದಲ್ಲಿ ಡ್ರೋಣ್ ಹಾರಿಸಿದಾಗ ಕೂಡ್ಲಿಗೆರೆ ಅರಣ್ಯ ಪ್ರದೇಶದ ಚಾನೆಲ್ ಏರಿಯ ಹತ್ತಿರ ಜನರು ಗುಂಪು ಕಟ್ಟಿಕೊಂಡು ಕಾನೂನು ಬಹಿರವಾಗಿ ಜೂಜಾಟದಲ್ಲಿ ತೊಡಗಿರುವುದು ಕಂಡುಬಂದಿದ್ದು,
ಡ್ರೋಣ್ ಕ್ಯಾಮೆರಾದಲ್ಲಿ ಸೆರೆಯಾದ ವಿಡಿಯೋ..👇
ತಕ್ಷಣವೇ ಪೋಲಿಸ್ ನಿರೀಕ್ಷಕರು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂದಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿ, ಒಟ್ಟು 19 ಜನ ಆರೋಪಿತರ ವಿರುದ್ಧ ಅಕ್ರಮ ಜೂಜಾಟ ಪ್ರಕರಣ ದಾಖಲಿಸಿ ಕಾನೂನು ರೀತ್ಯ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನೂ ಹೊಳೆಹೊನ್ನೂರು ವ್ಯಾಪ್ತಿಯಲ್ಲಿ ಅಕ್ರಮವಾಗಿ ನೆಡೆಯುತ್ತಿದ್ದ ಅಕ್ರಮ ಅಂದರ್ ಬಾಹರ್ ಇಸ್ಪೀಟ್ ಅಡ್ಡೆಗಳು ಸದ್ಯಕ್ಕೆ ಬಂದ್ ಆಗಿವೆ.ಪೊಲೀಸರ ಈ ಕಾರ್ಯಚರಣೆಗೆ ಮೆಚ್ಚುಗೆ ವ್ಯಕ್ತವಾಗಿದ್ದು ಇದು ತಾತ್ಕಾಲಿಕ ಕಾರ್ಯಚರಣೆ ಆಗದಿರಲಿ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ. ಈಗಾಗಲೇ ಭದ್ರಾವತಿ ಮತ್ತು ಹೊಳೆಹೊನ್ನೂರು ಸರಹದ್ದಿನಲ್ಲಿ ಅಳವಾಗಿ ಬೇರು ಬಿಟ್ಟಿರುವ ಅಂದರ್ ಬಾಹರ್ ಮತ್ತು ಇನ್ನೀತರೆ ಜೂಜಾಟವನ್ನು ಇನ್ನೇಂದು ತಲೆ ಎತ್ತದಂತೆ ಬೇರು ಸಮೇತ ಕಿತ್ತೋಗೆಯ ಬೇಕಿದೆ.ಇದು ಪೊಲೀಸ್ ಇಲಾಖೆಯ ದೊಡ್ಡ ಜವಾಬ್ದಾರಿಯಾಗಿದೆ.


