ಬೆಂಗಳೂರು : ಹೊಸ ಅಹಿಂದ ಪ್ರಾದೇಶಿಕ ಪಕ್ಷ ಕಟ್ಟಲು ಜಮೀರ್ ಅಹಮದ್ ಮೇಲೆ ಒತ್ತಡ.
news.ashwasurya.in
ಅಶ್ವಸೂರ್ಯ/ಬೆಂಗಳೂರು : ಕರ್ನಾಟಕದ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಹಿರಿಯ ಕಾಂಗ್ರೆಸ್ ಮುಖಂಡ ಜನಪ್ರಿಯ ನಾಯಕ ಬಿ ಝಡ್ ಜಮೀರ್ ಅಹಮದ್ ಖಾನ್ ರವರು ನೇತೃತ್ವದಲ್ಲಿ ಕರ್ನಾಟಕ ಪ್ರಾದೇಶಿಕ ಹಕ್ಕುಗಳ ಎತ್ತಿ ಹಿಡಿಯಲು ಮತ್ತು ಅಹಿಂದ ವರ್ಗಗಳ ಪರವಾಗಿ ಕಾರ್ಯಕ್ರಮಗಳನ್ನು ತರಲು ಹೊಸ ರಾಜಕೀಯ ಪಕ್ಷ ಕಟ್ಟಲು ವಿವಿಧ ಮುಖಂಡರುಗಳಿಂದ ಒತ್ತಡ ಹೇರುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.!
ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಬೇಸತ್ತಿರುವ ಲಕ್ಷಾಂತರ ರಾಜಕೀಯ ಕಾರ್ಯಕರ್ತರು ಜಮೀರ್ ಅಹಮದ್ ರವರ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ – ಕಾಂಗ್ರೆಸ್ ಎರಡು ಪಕ್ಷದಿಂದ ಅವರು ಬೇಸತ್ತಿದ್ದಾರೆ. ಕರ್ನಾಟಕದ ನೆಲ,ಜಲ, ಕಾಡು, ಸಂಪನ್ಮೂಲ,ರಕ್ಷಿಸಲು ಪ್ರಾದೇಶಿಕ ಪಕ್ಷದ ಅಗತ್ಯತೆ ಇದೆ. ಈ ಕೆಲಸ ಮಾಡುವುದರಲ್ಲಿ ಜೆಡಿಎಸ್ ಪಕ್ಷ ಎರಡವಿಕೊಂಡಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡು ರಾಷ್ಟ್ರೀಯ ಪಕ್ಷಗಳು ರಾಜ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿಲ್ಲ. ಅವರು ರಾಷ್ಟ್ರಮಟ್ಟದ ವೋಟಿನ ಲೆಕ್ಕಾಚಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ತಮ್ಮದೇ ಆದ ಸೀಮಿತ ರೀತಿಯಲ್ಲಿ ಮಾತ್ರ ತೀರ್ಮಾನಗಳು ಕೈಗೊಳ್ಳಲುವುದು ಅನಿವಾರ್ಯವಾಗಿದೆ. ಬಲಿಷ್ಠ ಪ್ರಾದೇಶಿಕ ಪಕ್ಷವಿದ್ದರೆ ರಾಜ್ಯದ ಪರವಾಗಿ ಮುಲಾಜಿ ಇಲ್ಲದೆ ಹೋರಾಟ ನಡೆಸಬಹುದು. ಎರಡು ಪಕ್ಷಗಳಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಯಾವಲ್ಲ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷ ಗಟ್ಟಿಯಾಗಿದ್ದೆವು ಅಲ್ಲೆಲ್ಲ ಬಿಜೆಪಿ ಮತ್ತು ಕಾಂಗ್ರೆಸ್ ಸೋತು ಸುನ್ನವಾಗಿದೆ. ಕರ್ನಾಟಕದಲ್ಲಿ ಇದಕ್ಕೆ ಅವಕಾಶವಿದೆ. ಈ ಬಗ್ಗೆ ಎರಡು ದಶಕಗಳಿಂದ ಚಿಂತನ ನಡೆಸಲಾಗುತ್ತಿದೆ. ಈಗ ಅದಕ್ಕೆ ಒಳ್ಳೆಯ ಕಾಲ ಬಂದಿದೆ. ಜಮೀರ್ ಅಹಮದ್ ರಂತಹ ಉತ್ತಮ ನಾಯಕರು ಇದ್ದಾರೆ ರಾಜ್ಯದ ಇನ್ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಮೀರ್ ಅಹಮದ್ ರವರ ಮಿಲಿಯಗಟ್ಟಲೆ ಬೆಂಬಲಗಿದ್ದಾರೆ.ಹಿಂದೂ, ಮುಸ್ಲಿಂ, ಕ್ರೈಸ್ತ,ಎಲ್ಲಾ ಧರ್ಮ ಬಾಂಧವರು ಜಮೀರ್ ರವರನ್ನು ಮೆಚ್ಚುತ್ತಾರೆ. ಅವರ ಮಾನವೀಯ ಗುಣ ಸ್ವಭಾವ, ತಲಮಟ್ಟದ ಕಾರ್ಯಕರ್ತರಿಗೆ ನೇರ ಸಂಪರ್ಕ. ಬಡವರ ಕಷ್ಟಗಳಿಗೆ ಸ್ಪಂದಿಸುವುದು. ಕೋಮು ಸೌಹಾರ್ದತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಬದ್ಧತೆ. ಹಿಂದೂ ಮುಸಲ್ಮಾನರು ಅಣ್ಣತಮ್ಮಂದಿರಂತೆ ಬಾಲಬೇಕು ಎಂಬ ದೀರ್ಘ ಯೋಜನೆ ಇದೆ. ಹುಟ್ಟು ಕನ್ನಡಿಗರ ಹಕ್ಕುಗಳಿಗಾಗಿರುವ ದೀರ್ಘ ಯೋಜನೆ. ಅಹಿಂದಾ ವರ್ಗಗಳ ಪರವಾಗಿ ಇರುವ ಕಾಳಜಿ. ಎಲ್ಲವೂ ಲೆಕ್ಕಾಚಾರ ಪಡೆದರೆ ಜಮೀನ್ ಹೊಸಪಕ್ಷ ಕಟ್ಟಿದರೆ ಯಶಸ್ವಿ ಸಾಧಿಸುವುದು ಸುಲಭವೇ.

ರಾಜ್ಯದ ಒಂದು ಕೋಟಿ 20 ಲಕ್ಷ ಮುಸಲ್ಮಾನರು ಕಾಂಗ್ರೆಸ್ ನೊಂದಿಗೆ ನೊಂದಿದ್ದಾರೆ. ಅವರಿಗೆ ನೀಡಿದ ವಾಗ್ದಾನಗಳನ್ನು ಪೂರೈಸಿಲ್ಲ. ದಲಿತ ಸಮುದಾಯದ ಹಲವಾರು ಸನ್ನಪುಟ್ಟ ಜಾತಿಗಳಿಗೆ ಮೀಸಲಾತಿ ಸಿಗಲಿಲ್ಲ. ಈ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಒಂದೇ ನೀತಿಯನ್ನು ಅಳವಡಿಸಿಕೊಂಡಿದೆ. ಹಿಂದುಳಿದ ವರ್ಗದಲ್ಲಿ ಕುರುಬ ಮತ್ತು ಈಡಿಗ ಸಮುದಾಯ ಬಿಟ್ಟು ಉಳಿದ ಹತ್ತು ಬಲಿಷ್ಠ ಜನ ಸಮುದಾಯಗಳಿಗೆ ರಾಜಕೀಯ ಅವಕಾಶ ಸಿಗಲಿಲ್ಲ. ರೈತರ ಹಕ್ಕುಗಳ ಪರವಾಗಿ ಮಾತನಾಡುವ ಪಕ್ಷ ರಾಜ್ಯದಲ್ಲಿಲ್ಲ. ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವವರು ಇಲ್ಲ. ಭಾರತದಲ್ಲಿ ಈತನಕ ಒಬ್ಬನೇ ಒಬ್ಬ ದಲಿತ ಮತ್ತು ಮುಸಲ್ಮಾನರನ್ನು ಪ್ರಧಾನಿ ಪಟ್ಟಕ್ಕೆ ಯಾವುದೇ ಪಕ್ಷಗಳು ಬೆಂಬಲಿಸಿಲ್ಲ. ರಾಜ್ಯದಲ್ಲಿ ಒಮ್ಮೆಯು ದಲಿತ ಮತ್ತು ಮುಸಲ್ಮಾನನನ್ನು ಮುಖ್ಯಮಂತ್ರಿ ಮಾಡಲೇ ಇಲ್ಲ. ಈ ಎರಡು ಸಮುದಾಯಗಳ ಜನಸಂಖ್ಯೆ ರಾಜ್ಯದಲ್ಲಿ 55 ಶೇಕಡಕ್ಕೂ ಹೆಚ್ಚು ಮೀರಿದೆ. ಹೊಸ ತಲೆಮಾರಿನ ಯುವಕರು ಹೊಸ ಪಕ್ಷದ ನಿರೀಕ್ಷೆಯಲ್ಲಿದ್ದಾರೆ. ಅದಕ್ಕೆ ತಕ್ಕಂತೆ ಯುವ ನಾಯಕ ಜಮೀರ್ ಅವರಿಗೆ ಬೆನ್ನಲುಬಾಗಿ ಹಲವಾರು ಶಾಸಕರುಗಳು, ಮಾಜಿ ಶಾಸಕರುಗಳು, ಸಂಸದರು, ಮಾಜಿ ಸಂಸದರು, ಮಾಜಿ ಸಚಿವರು ನಿಂತಿದ್ದಾರೆ. ಸರ್ವಸಮತವಾದರೆ ಖಂಡಿತವಾಗಿ ಒಂದು ಪಕ್ಷ ಉದಯವಾಗುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಜಮೀರ್ ಅಹ್ಮದ್ ಅನಿವಾರ್ಯವಾಗಿದ್ದಾರೆ,ಅವರು ರಾಜ್ಯದ ಕನಿಷ್ಠ 50 ಕ್ಷೇತ್ರಗಳಲ್ಲಿ ಎಲ್ಲಿ ನಿಂತರೂ ಭರ್ಜರಿ ಬಹುಮತದಲ್ಲಿ ಗೆಲ್ಲುತ್ತಾರೆ. ಕಾಂಗ್ರೆಸ್ ಪಕ್ಷದ ಹಂಗಿಲ್ಲದೆ ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದರು ಗೆಲ್ಲುತ್ತಾರೆ. ಹಿಂದಿನ ಚುನಾವಣೆಯಲ್ಲಿ ಕನಿಷ್ಠ 90 ಕ್ಷೇತ್ರಗಳಲ್ಲಿ ಜಮೀರ್ ಅಹಮದ್ ರವರು ಕಷ್ಟಪಟ್ಟು ಕಾಂಗ್ರೆಸ್ ಪರ ಮತ ಚಲಾಯಿಸುವಂತೆ ಮಾಡಿ ಗೆಲ್ಲಿಸಿ ಕೊಟ್ಟಿದ್ದಾರೆ. ಈ ಪೈಕಿ ಕೆಲವು ಶಾಸಕರುಗಳು ಈಗಲೂ ಜಮೀರ್ ಅವರ ಸಂಪರ್ಕದಲ್ಲಿದ್ದಾರೆ. ಇನ್ನೊಂದು ಕಡೆ ಕುಮಾರಸ್ವಾಮಿಯವರ ಜೆಡಿಎಸ್ ಪಕ್ಷವು ಜಮೀರ್ ಅಹ್ಮದ್ ರವರು ಜೆಡಿಎಸ್ ಬಂದ್ರೆ ಉತ್ತಮ ಎಂದು ಚರ್ಚಿಸುತ್ತಿದ್ದಾರೆ. ಜಮೀರ್ ನೇತೃತ್ವದಲ್ಲಿ ಹೊಸ ಪಕ್ಷ ಕಟ್ಟಿದರೆ ಕಮ್ಯುನಿಸ್ಟ್ ಪಕ್ಷಗಳು, ಆಮಾ ಆದ್ಮಿ ಪಕ್ಷಗಳು, ಬಿಎಸ್ಪಿ, ಎಸ್ ಡಿಪಿಐ, ವೆಲ್ಫೇರ್ ಪಾರ್ಟಿ, ಎಂ ಐ ಎಂ, ಮೊದಲಾದ ಏಳೆಂಟು ಪಕ್ಷದವರು ಒಂದು ವೇದಿಕೆ ಸೃಷ್ಟಿಸಿ ಒಂದಾಗಿ ಸ್ಪರ್ಧಿಸುವ ಅವಕಾಶವಿದೆ. ಎಲ್ಲಾ ಪಕ್ಷಗಳು ಸಮಾನ ತಳಹದಿಯ ಆಧಾರದಲ್ಲಿ ಸೈದ್ಧಾಂತಿಕವಾಗಿ ಒಂದಾಗುತ್ತದೆ. ಈ ಪ್ರಯೋಗ ತಮಿಳ್ ನಾಡಿನಲ್ಲಿ ಯಶಸ್ವಿಯಾಗಿದೆ. ಕೇರಳದಲ್ಲಿ ಹಲವಾರು ಪಕ್ಷಗಳು ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯವಾಗಿ ತಲೆ ಎತ್ತಿದೆ. ಈಗಾಗಲೇ ಕೆಲವು ಪಕ್ಷಗಳ ನಾಯಕರುಗಳ ಮಧ್ಯೆ ಜಮೀರ್ ನೇತೃತ್ವದಲ್ಲಿ ಹೊಸ ಪಕ್ಷ ಆಗಬೇಕೆಂದು ಅದಕ್ಕೆ ನಾವು ಬೆಂಬಲಿಸಬೇಕೆಂದು ಚರ್ಚೆ ಆರಂಭವಾಗಿದೆ. ರಾಜ್ಯದಲ್ಲಿ ಅಹಿಂದ ವರ್ಗಗಳು ಮತ್ತು ಕನ್ನಡಿಗರು 10 ಹಲವು ಸಮಸ್ಯೆಗಳಲ್ಲಿ ಸಿಲುಕಿದ್ದಾರೆ. ರಾಜ್ಯದ ಹುದ್ದೆಗಳು ಉತ್ತರ ಭಾರತೀಯರ ಕೈವಶವಾಗುತ್ತಿದೆ. ಸಣ್ಣಪುಟ್ಟ ಅಂಗಡಿಗಳಿಂದ ಹಿಡಿದು ದೊಡ್ಡ ದೊಡ್ಡ ಕಂಪನಿಗಳು ಹೊರ ರಾಜ್ಯದವರ ಅಧೀನದಲ್ಲಿದೆ. ಕನ್ನಡಿಗರ ಉದ್ಯಮ ಮತ್ತು ಉದ್ಯೋಗವನ್ನು ಸಂರಕ್ಷಿಸುವ ಯಾವುದೇ ಯೋಜನೆ ಬಿಜೆಪಿ ಕಾಂಗ್ರೆಸ್ ಹಮ್ಮಿಕೊಂಡಿಲ್ಲ. ಮುಸಲ್ಮಾನರು, ಕ್ರೈಸ್ತರು, ದಲಿತರ ಕೆಲವು ಜಾತಿಗಳು ಹಿಂದುಳಿದ ವರ್ಗಗಳ ಕೆಲವು ಜಾತಿಗಳಿಗೆ ಈಗಲೂ ರಾಜಕೀಯವಾಗಿ ಸೂಕ್ತ ಸ್ಥಾನಮಾನ ಸಿಗಲಿಲ್ಲ. ಅವರೆಲ್ಲರೂ ಹೊಸ ಪಕ್ಷಕ್ಕಾಗಿ ಕಾಯುತ್ತಿದ್ದಾರೆ ಅವರು ಖಂಡಿತವಾಗಿಯೂ ಜಮೀರ್ ಅಹ್ಮದ್ ಪಕ್ಷಕ್ಕೆ ಬೆಂಬಲಿಸುತ್ತಾರೆ ಎನ್ನುವ ಬಲವಾದ ನಂಬಿಕೆ ಕೆಲವು ರಾಜಕೀಯ ನಾಯಕರುಗಳಲ್ಲಿ ಇದೆ. ಈ ಬಗ್ಗೆ ರಾಜ್ಯದ ಪ್ರಗತಿಪರರು, ಚಿಂತಕರು,ದಲಿತರು,ರೈತರು, ಮುಸಲ್ಮಾನರು, ಕ್ರೈಸ್ತರು, ಅಲೆಮಾರಿಗಳು, ಗ್ರಾಮೀಣ ವಾಸಿಗಳು, ಮಹಿಳೆಯರು, ಯುವಕರು,ಚಿಂತನ ಮಂಥನ ನಡೆಸಿ ಒಂದು ಬಲಿಷ್ಠ ಪ್ರಾದೇಶಿಕ ಪಕ್ಷವನ್ನು ಕಟ್ಟಲು ಜಮೀರ್ ಅಹ್ಮದ್ ರನ್ನು ಮನ ಒಳಿಸಬೇಕಾಗಿದೆ. ಈ ಬಗ್ಗೆ ಕೆಲವು ಜಿಲ್ಲೆಗಳಲ್ಲಿ ಚರ್ಚೆ ಆರಂಭವಾಗಿದೆ. ಯಾವುದಕ್ಕೂ ಅಂತಿಮ ತೀರ್ಮಾನ ಜಮೀರ್ ಅಹ್ಮದ್ ರವರೇ ತೆಗೆದುಕೊಳ್ಳಬೇಕಾಗಿದೆ. ಈ ರಾಜಕೀಯ ಪಕ್ಷ ಗಟ್ಟಿ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪನ ಕೆಲವು ಬೆಂಬಲಿಗರು ಜಮೀರ್ ಅಹ್ಮದ್ ರವರೊಂದಿಗೆ ಕೈಜೋಡಿಸುವ ಸಾಧ್ಯತೆಗಳಿವೆ. ಜೆಡಿಎಸ್ ಪಕ್ಷದ ಜಮೀರ್ ಅಹ್ಮದ್ ರವರ ಹಳೆ ಸ್ನೇಹಿತರು ಬರಬಹುದು. ಸೈದ್ಧಾಂತಿಕವಾಗಿ ಅಪ್ಪಟ ಜಾತ್ಯತೀತವಾದಿಗಳ ದೊಡ್ಡ ಮೊತ್ತದ ಮತದಾರರ ರಾಜ್ಯದಲ್ಲಿದ್ದಾರೆ. ಇವರೆಲ್ಲರೂ ಹೊಸ ಬದಲಾವಣೆ ನಿರೀಕ್ಷೆಯಲ್ಲಿದ್ದಾರೆ. ಇಂತಹ ಅವಕಾಶವನ್ನು ಜಮೀರ್ ಅಹ್ಮದ್ ಎಂದಿಗೂ ಕೈ. ವಿವಿಧ ಪಕ್ಷಗಳ ಹಲವಾರು ನಾಯಕರುಗಳು ಗುಪ್ತವಾಗಿ ಜಮೀರನ್ನು ಸಂಪರ್ಕಿಸಿ ಭೇಟಿ ನೀಡಿ ಮಾತನಾಡಿದ್ದಾರೆ. ಶೀಘ್ರದಲ್ಲೇ ಕನ್ನಡಿಗರಿಗೆ ಹೊಸ ಸುದ್ದಿ ನೀಡಲಿದ್ದಾರ.? ಜಮೀರ್ ಅಹ್ಮದ್ ಎಂದು ಕಾದು ನೋಡಬೇಕಿದೆ…


