ಬೆಂಗಳೂರು: ಸಂತ್ರಸ್ತೆಯರನ್ನೇ ಆರೋಪಿಗಳನ್ನಾಗಿ ಮಾಡಬೇಡಿ, ಶಿವಮೊಗ್ಗ ಮೂಲದ ಮಹಿಳೆ ಮೇಲಿನ ವೇಶ್ಯಾವಾಟಿಕೆ ಪ್ರಕರಣ ರದ್ದುಪಡಿಸಿ ಹೈಕೋರ್ಟ್ ಆದೇಶ.
news.ashwasurya.in
ಅಶ್ವಸೂರ್ಯ/ಬೆಂಗಳೂರು: ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಪತ್ತೆಯಾಗುವ ಸಂತ್ರಸ್ತ ಮಹಿಳೆಯರನ್ನೇ ಆರೋಪಿಗಳೆಂದು ಪರಿಗಣಿಸಿ ಪ್ರಕರಣ ದಾಖಲಿಸಬಾರದು. ನೈತಿಕ ಪೊಲೀಸ್ ಗಿರಿ ರೀತಿಯಲ್ಲಿ ಸಂತ್ರಸ್ತೆಯರನ್ನು ಅಪರಾಧಿಗಳಂತೆ ಕಾಣುವುದು ಕಾನೂನು ಬಾಹಿರ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದು ಮಾಡುವಂತೆ ಕೋರಿ ಶಿವಮೊಗ್ಗ ಮೂಲದ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದಿಂದ ಈ ಆದೇಶ ನೀಡಲಾಗಿದೆ.
ಅನೈತಿಕ ಚಟುವಟಿಕೆಗಳ ತಡೆ ಕಾಯ್ದೆ ಅಡಿಯಲ್ಲಿ ವೇಶ್ಯಾವಾಟಿಕೆಗೆ ಪ್ರೇರೇಪಿಸುವವರು ಅಥವಾ ಅಂತಹ ಉದ್ದೇಶಕ್ಕಾಗಿ ವ್ಯಕ್ತಿಗಳನ್ನು ಬಳಸಿಕೊಳ್ಳುವವರು ಶಿಕ್ಷಾರ್ಹರೇ ಹೊರತೂ ಆ ಜಾಲಕ್ಕೆ ಬಲಿಯಾದ ಮಹಿಳೆಯರಲ್ಲ. ಲೈಂಗಿಕ ಶೋಷಣೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೇ ವಿನಃ ಸಂತ್ರಸ್ತೆಯರನ್ನು ಜೈಲಿಗೆ ಕಳುಹಿಸುವುದು ಕಾನೂನಿನ ದುರುಪಯೋಗ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಮಹಿಳೆ ವಿರುದ್ಧದ ವೇಶ್ಯಾವಾಟಿಕೆ ಆರೋಪ ಪ್ರಕರಣ ರದ್ದು ಮಾಡಿದೆ.


