ಬೆಂಗಳೂರು : ನಾಳೆ (ಮಾರ್ಚ್,15) 10 ಬೆಳಿಗ್ಗೆ ಗಂಟೆಗೆ ಒಂದು ಪೋಸ್ಟ್ ಮಾಡ್ತೀನಿ, ಮರು ಕ್ಷಣವೇ ಡಿಲೀಟ್ ಮಾಡ್ತೀನಿ..’ ಅಭಿಮಾನಿಗಳ ತಲೆಗೆ ಹುಳಬಿಟ್ಟ ರೀಯಲ್ ಸ್ಟಾರ್ ಉಪೇಂದ್ರ.!

news.ashwasurya.in
ಅಶ್ವಸೂರ್ಯ/ಬೆಂಗಳೂರು : ನಟ ಉಪೇಂದ್ರ ಅವರು ಸೋಶಿಯಲ್ ಮೀಡಿಯಾದಲ್ಲಿ ನಿಗೂಢ ಮತ್ತು ಎಚ್ಚರಿಕೆಯ ವಾರ್ನಿಂಗ್ ಪೋಸ್ಟ್ ಹಂಚಿಕೊಂಡಿದ್ದಾರೆ. (ಮಾರ್ಚ್ 15) ಬೆಳಿಗ್ಗೆ 10 ಗಂಟೆಗೆ ಒಂದು ಲಿಂಕ್ ಪೋಸ್ಟ್ ಮಾಡಿ, ಸ್ವಲ್ಪ ಹೊತ್ತಿನಲ್ಲೇ ಡಿಲೀಟ್ ಮಾಡುವುದಾಗಿ ತಿಳಿಸಿದ್ದು, ಇದನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ಸೂಚಿಸಿದ್ದಾರೆ.

ಅದರ ಬೆನ್ನಲ್ಲಿಯೇ ಅವರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದ್ದು ಅ ಕ್ಷಣಕ್ಕಾಗಿ ಎದುರು ನೀಡುತ್ತಿದ್ದಾರೆ.ಅದಕ್ಕೆ ಕಾರಣ, ಪೋಸ್ಟ್ನಲ್ಲಿರುವ ಅಂಶ. 10 ಗಂಟೆಗೆ ನಾನು ಒಂದು ಲಿಂಕ್ ಪೋಸ್ಟ್ ಮಾಡ್ತೀನಿ, ಅದನ್ನು ಕೆಲ ಹೊತ್ತಲ್ಲೇ ಡಿಲೀಟ್ ಕೂಡ ಮಾಡ್ತೀನಿ. ಯಾಕೆಂದ್ರೆ ಹೀಗೆ ಮಾಡಬೇಕು ಎಂದು ನನಗೆ ತಿಳಿಸಲಾಗಿದೆ ಎಂದು ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ಅದರೊಂದಿಗೆ ಅವರು ತಮ್ಮ ಹೊಸ ಸಿನಿಮಾ ಘೋಷಣೆ ಮಾಡಬಹುದಾ? ರಾಜಕೀಯ ವಿಷಯವಾಗಿ ಮಹತ್ವದ ಮಾಹಿತಿ ನೀಡ್ತಾರ.? ಮತ್ತೆ ನೀರ್ದೆಶನಕ್ಕೆ ಮರಳುತ್ತಾರ.? ಇಲ್ಲವೇ ತಾವು ಈಗಾಗಲೇ ಮಾಡಿರುವ ಸಿನಿಮಾದ ಟೀಸರ್, ಫರ್ಸ್ಟ್ ಲುಕ್ ಏನಾದರೂ ರಿಲೀಸ್ ಮಾಡಬಹುದಾ? ತಮ್ಮ ಪಕ್ಷ ಪ್ರಜಾಕೀಯದ ಬಗ್ಗೆ ಅಪ್ಡೇಟ್ ಇರಬಹುದಾ? ಇಲ್ಲವೇ ತಮ್ಮ ಹೊಸ ಸಿನಿಮಾದ ಘೋಷಣೆ ಇರಬಹುದಾ ಅನ್ನೋ ಚರ್ಚೆಗಳು ಅವರ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಕೊಂಡಿದೆ.?

ಕನ್ನಡ ಚಿತ್ರರಂಗದ ‘ಬುದ್ಧಿವಂತ’ ರೀಯಲ್ ಸ್ಟಾರ್ ಎಂದೇ ಕರೆಸಿಕೊಳ್ಳುವ ಉಪೇಂದ್ರ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಒಂದು ‘ವಾರ್ನಿಂಗ್’ ಪೋಸ್ಟ್ ಈಗ ಸ್ಯಾಂಡಲ್ವುಡ್ನಲ್ಲಿ ಭಾರಿ ಸಂಚಲನ ಮೂಡಿಸಿದೆ. ಯಾವಾಗಲೂ ವಿಭಿನ್ನವಾಗಿ ಆಲೋಚಿಸುವ ಉಪ್ಪಿ, ಈ ಬಾರಿ ತಮ್ಮ ಅಭಿಮಾನಿಗಳಿಗೆ ಒಂದು ನಿಗೂಢ ಸಂದೇಶ ರವಾನಿಸಿದ್ದು ಮಾತ್ರ ವಿಷೇಶವಾಗಿದೆ.
ಉಪೇಂದ್ರ ಅವರು ತಮ್ಮ ಇನ್ಸ್ಟಾಗ್ರಾಮ್ ಮತ್ತು ಎಕ್ಸ್ ಖಾತೆಯಲ್ಲಿ,

” ಬೆಳಗ್ಗೆ 10 ಗಂಟೆಗೆ ಒಂದು ಲಿಂಕ್ ಪೋಸ್ಟ್ ಮಾಡ್ತೀನಿ. ಇದನ್ನ ಸಾರ್ವಜನಿಕವಾಗಿ ಹಂಚಿಕೊಳ್ಳಬೇಡಿ ಅಂತ ನನಗೆ ಸೂಚನೆ ಇದೆ. ಹಾಗಾಗಿ ಪೋಸ್ಟ್ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಡಿಲೀಟ್ ಮಾಡಿದ್ರೂ ಮಾಡಬಹುದು. ನೀವು ಇದನ್ನು ನೋಡಿದ್ರೆ ಬೇರೆ ಯಾರ ಹತ್ತಿರವೂ ಹೇಳ್ಬೇಡಿ. ಸದ್ಯಕ್ಕೆ ಇದು ನಮ್ಮ ನಡುವೆ ಮಾತ್ರ ಇರಲಿ. ಲಿಂಕ್ ನೋಡಿ ಸುಮ್ಮನಿದ್ದುಬಿಡು”
ಎಂದು ಬರೆದುಕೊಂಡಿದ್ದಾರೆ.

ಉಪೇಂದ್ರ ಅವರು ದೀರ್ಘಕಾಲದ ನಂತರ ಮತ್ತೆ ನಿರ್ದೇಶನದ ಕ್ಯಾಪ್ ತೊಟ್ಟು ‘UI’ ಸಿನಿಮಾ ಮಾಡಿದ್ದರು. ಆದರೆ, ಅದು ಜನರಿಗೆ ರುಚಿಸಲಿಲ್ಲ. 2024ರಲ್ಲಿ ಈ ಸಿನಿಮಾ ಬಂದು ಹೆಚ್ಚಿನ ಯಶಸ್ಸು ಕಾಣದ ಹಿನ್ನೆಲೆಯಲ್ಲಿ ಉಪೇಂದ್ರ ನಿರ್ದೇಶನಕ್ಕೆ ಮತ್ತೆ ಬ್ರೇಕ್ ನೀಡಿ, ತಮಿಳಿನಲ್ಲಿ ಕೂಲಿ, ತೆಲುಗುವಿನಲ್ಲಿ ಆಂಧ್ರ ಕಿಂಗ್ ತಾಲೂಕಾ ಹಾಗೂ ಕನ್ನಡದಲ್ಲಿ 45 ಸಿನಿಮಾದಲ್ಲಿ ನಟಿಸಿದ್ದರು. ಬಹಳ ವರ್ಷಗಳ ಹಿಂದೆ ಅವರು ನಟಿಸಿದ್ದ ರಕ್ತಕಾಶ್ಮೀರ ಸಿನಿಮಾ ಕೂಡ ಈ ನಡುವೆ ಬಂದು ಹೋಗಿತ್ತು.
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಉಪ್ಪಿ ಸೃಷ್ಟಿಸಿರುವ ಈ ‘ಲಿಂಕ್’ ಹವಾ ನಾಳೆ ಬೆಳಗ್ಗೆ 10 ಗಂಟೆಗೆ ಯಾವ ಸ್ಫೋಟ ಮಾಡಲಿದೆ ಎಂದು ಕಾದು ನೋಡಬೇಕಿದೆ. ರಿಯಲ್ ಸ್ಟಾರ್ ಅಂದ ಮೇಲೆ ಅಲ್ಲಿ ಏನೋ ಒಂದು ವಿಶೇಷ ಇದ್ದೇ ಇರುತ್ತದೆ ಎಂಬುದು ಅಭಿಮಾನಿಗಳ ಅಚಲ ನಂಬಿಕೆ ಎನ್ನುವುದಂತು ಸತ್ಯ. ಎಲ್ಲದಕ್ಕೂ ಮಾರ್ಚ್ 15 ಬೆಳಿಗ್ಗೆ 10 ಗಂಟೆಯ ಅ ಕ್ಷಣ ಕೂತಹಲವಾಗಿದೆ…


