
ಮಂಡ್ಯ : ಹೆಂಡತಿಯ ಕಾಮದಾಟಕ್ಕೆ ಅರ್ಚಕ ಗಂಡನನ್ನೆ ಬಲಿ ಪಡೆದಳು.! ಗಂಡನ ಹತ್ಯೆಗೆ ಹೆಂಡಿತಿಯದೆ ಸ್ಕೆಚ್.! ಪ್ರಿಯಕರನಿಂದ ಕೊಲೆ.? ಅಂದರ್ ಅದ್ರು ಪ್ರೇಮಿಗಳು..

news.ashwasurya.in
ಅಶ್ವಸೂರ್ಯ/ಮಂಡ್ಯ: ಅರ್ಚಕ ಅನುಮಾನಾಸ್ಪದವಾಗಿ ಸಾವನ್ನಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ತಿರುವು ಪಡೆದುಕೊಂಡಿದೆ.! ಅರ್ಚಕನ ಹೆಂಡತಿ ತನ್ನ ಕಾಮದಾಟಕ್ಕೆ ಅಡ್ಡಿಯಾಗಬಾರದೆಂದು ಪ್ರಿಯಕರನಿಂದಲೇ ಅರ್ಚಕ ಪತಿಯನ್ನು ಕೊಲೆ ಮಾಡಿಸಿರುವ ಘಟನೆ ಮಂಡ್ಯದ ಮರಳಗಾಲ ಬಳಿ ನಡೆದಿದೆ.
ಮೃತ ವ್ಯಕ್ತಿಯನ್ನು ಸಿದ್ದಲಿಂಗಪ್ಪ ಎಂದು ಗುರುತಿಸಲಾಗಿದ್ದು, ಅರ್ಚಕನಾಗಿ ಕೆಲಸ ಮಾಡುತ್ತಿದ್ದನಂತೆ. ಆರೋಪಿ ಪತ್ನಿ ಶಾಲಿನಿ ಹಾಗೂ ಪ್ರಿಯಕರನನ್ನು ಹರೀಶ್ ಎಂದು ಗುರುತಿಸಲಾಗಿದೆ. ಸಿದ್ದಲಿಂಗಪ್ಪ ಹಾಗೂ ಶಾಲಿನಿಗೆ ಎರಡು ಮಕ್ಕಳಿದ್ದವು ಎಂದು ತಿಳಿದುಬಂದಿದೆ.
ಮಾ.6ರಂದು ಈ ಹತ್ಯೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶಾಲಿನಿ ಹಾಗೂ ಅದೇ ಗ್ರಾಮದ ಹರೀಶ್ ಅಕ್ರಮ ಸಂಬಂಧ ಹೊಂದಿದ್ದರು. ಒಂದೂವರೆ ವರ್ಷದ ಹಿಂದೆ ಸಿದ್ದಲಿಂಗಪ್ಪನ ಕೈಗೆ ಇಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರಂತೆ. ಇದರಿಂದ ಶಾಲಿನಿಗೆ ಹಲವು ಬಾರಿ ಬುದ್ಧಿವಾದ ಹೇಳಿ, ಸರಿದಾರಿಗೆ ತರಲು ಗಂಡ ಪ್ರಯತ್ನಿಸಿದ್ದ.
ಇದರ ನಡುವೆ ತನ್ನ ಕಾಮದಾಟಕ್ಕೆ ಅಡ್ಡವಿರುವ ತನ್ನ ಗಂಡನನ್ನೇ ಮುಗಿಸಲು ಶಾಲಿನಿ ಸ್ಕೆಚ್ ಹಾಕಿದ್ದಳೆ.! ಪೂಜೆಗೆಂದು ಪತಿ ಮರಳಗಾಲಕ್ಕೆ ತೆರಳಿದ್ದರು. ಈ ವೇಳೆ ಶಾಲಿನಿ ತನ್ನ ಪ್ರಿಯಕರನಿಗೆ ಗಂಡ ಇಂತಲ್ಲಿಗೆ ಹೋಗಿದ್ದಾರೆ ಎಂದು ಮೆಸೇಜ್ ಮಾಡಿ ತಿಳಿಸಿದ್ದಾಳೆ. ಆಗ ನಾಲೆ ಏರಿ ಬೈಕ್ನಲ್ಲಿ ಬರ್ತಿದ್ದ ಅರ್ಚಕ ಸಿದ್ದಲಿಂಗಪ್ಪನನ್ನು ಪ್ರಿಯಕರ ಹರೀಶ್ ಮತ್ತು ಆತನ ಇಬ್ಬರು ಸ್ನೇಹಿತರು ಅಡ್ಡಗಟ್ಟಿದ್ದರು. ತಲೆಗೆ ದೊಣ್ಣೆಯಿಂದ ಹಲ್ಲೆ ಮಾಡಿ, ಹತ್ಯೆಗೈದು ಬಳಿಕ ನಾಲೆಗೆ ಮೃತದೇಹವನ್ನು ಬೀಸಾಡಿ ಅಪಘಾತದಂತೆ ಬಿಂಬಿಸಿದ್ದರಂತೆ.!

ಸಿದ್ದಲಿಂಗಪ್ಪ ಮನೆಗೆ ವಾಪಸ್ ಬಾರದ್ದಕ್ಕೆ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಈ ವೇಳೆ ಸಿಡಿಎಸ್ ನಾಲೆ ದಡದಲ್ಲಿ ಚಪ್ಪಲಿ ಹಾಗೂ ಬಟ್ಟೆ ಪತ್ತೆಯಾಗಿತ್ತು. ಬಳಿಕ ನಾಲೆಯಲ್ಲಿ ಮೃತದೇಹ ಹಾಗೂ ಬೈಕ್ ಸಿಕ್ಕಿತ್ತು. ಪೊಲೀಸರು ಪರಿಶೀಲನೆ ನಡೆಸಿದಾಗ, ಚಪ್ಪಲಿ ಸಿಕ್ಕ ಸ್ಥಳದಲ್ಲಿ ರಕ್ತದ ಕಲೆ ಪತ್ತೆಯಾಗಿತ್ತು. ಅನುಮಾನಗೊಂಡ ಪೊಲೀಸರು ಅರ್ಚಕನ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಸಾವಿನ ಅಸಲಿ ಸತ್ಯ ಹೊರಬಿದ್ದಿದೆ. ಆರೋಪಿಗಳನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಎಲ್ಲರೂ ಬಾಯಿ ಬಿಟ್ಟಿದ್ದಾರೆ.

ತನ್ನ ಕಾಮದಾಹ ತೀರಿಸಿಕೊಳ್ಳುಲು ತಾಳಿ ಕಟ್ಟಿದ ಕಂಡನನ್ನೆ ಕೊಂದು ಮುಗಿಸಿದ್ದಾಳೆ ನೀಚ ಮಡದಿ ಹತ್ಯೆಯಾದ ಗಂಡ ಮಸಣ ಸೇರಿದರೆ ಕಾಮಾಂದ ಹೆಂಡತಿ ಜೈಲು ಸೇರಿದ್ದಾಳೆ. ಮುದ್ದಾದ ಇಬ್ಬರು ಮಕ್ಕಳು ಮಾತ್ರ ಅನಾಥರಾಗಿದ್ದಾರೆ.


