
ಅಹಮದಾಬಾದ್ : ನಿಮ್ಮಿ ಅದ್ಭುತವಾದ ಆಟ ಖುಷಿ ತಂದಿದೆ “ಚೆಟಾ” ಸಂಜುಗೆ ಕಿಂಗ್ ಕೊಹ್ಲಿಯ ವಿಶೇಷ ಸಂದೇಶ.!

news.ashwasurya. in
ಅಶ್ವಸೂರ್ಯ/ ಅಹಮದಾಬಾದ್ : 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತ ತಂಡವನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ ಕ್ರಿಕೆಟ್ ದಿಗ್ಗಜ ಕಿಂಗ್ ಕೊಹ್ಲಿ, ವಿಶ್ವಕಪ್ ಪಂದ್ಯಾವಳಿಯ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೆರಿಸಿಕೊಂಡ ಸಂಜು ಸ್ಯಾಮ್ಸನ್ಗೆ ವಿಶೇಷ ಸಂದೇಶವನ್ನು ರವಾನಿಸಿದ್ದಾರೆ. ನಿಮ್ಮಿ ಅದ್ಭುತ ಆಟದಿಂದ ತುಂಬಾ ಖುಷಿಯಾಗಿದೆ ಚೆಟಾ ಎಂದು ಕಿಂಗ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದು ಕೊಂಡಿದ್ದಾರೆ.
ಭಾರತ ತಂಡದ 2026ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಫೈನಲ್ನಲ್ಲಿ ಸಾಧಿಸಿದ ಐತಿಹಾಸಿಕ ಜಯವು ವಿಶ್ವದಾದ್ಯಂತ ಸಂಭ್ರಮಕ್ಕೆ ಕಾರಣವಾಯಿತು. ಈ ಜಯಕ್ಕೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದವರಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಒಬ್ಬರು. ಸಾಮಾಜಿಕ ಮಾಧ್ಯಮದ ಮೂಲಕ ಭಾರತೀಯ ತಂಡವನ್ನು ಅಭಿನಂದಿಸಿದ ಅವರು, ವಿಶೇಷವಾಗಿ ವಿಕೆಟ್ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ (Sanju Samson) ಅವರನ್ನು ಗುಣಗಾನ ಮಾಡಿದರು.

ಸೂಪರ್-8 ರಿಂದ ನಾಕ್ಔಟ್ ಅವಧಿಯಲ್ಲಿ ಪ್ರತಿಯೊಂದು ಪಂದ್ಯದಲ್ಲಿ ಸ್ಯಾಮ್ಸನ್ ತೋರಿದ ಅದ್ಭುತ ಆಟ ಭಾರತ ತಂಡ ಮೂರನೇ ಬಾರಿಗೆ ಚುಟುಕು ವಿಶ್ವಕಪ್ ಗೆಲ್ಲವಲ್ಲಿ ಪ್ರಮುಖ ಪಾತ್ರ ವಹಿಸಿದವು.
ಭಾನುವಾರ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಭಾರತ ತಂಡ, ನ್ಯೂಜಿಲೆಂಡ್ ತಂಡವನ್ನು 96 ರನ್ಗಳ ಅಂತರದಿಂದ ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಆರಂಭದಿಂದಲೇ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ 20 ಓವರ್ ಗಳಲ್ಲಿ 255 ರನ್ಗಳ ದೊಡ್ಡ ಮೊತ್ತವನ್ನು ಕಲೆಹಾಕಿದರು. ಇದು ಟಿ20 ವಿಶ್ವಕಪ್ ಫೈನಲ್ನಲ್ಲಿ ದಾಖಲಾದ ಒಂದು ತಂಡದ ಅತಿ ಹೆಚ್ಚು ರನ್ಗಳಾಗಿವೆ.! ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಗಳಿಸಿದ ಅರ್ಧಶತಕಗಳು ಭಾರತದ ದೊಡ್ಡ ಮೊತ್ತಕ್ಕೆ ಕಾರಣವಾಗಿದ್ದು, ನಂತರ ಬೌಲರ್ಗಳು ಉತ್ತಮ ಪ್ರದರ್ಶನ ನೀಡಿ ಪಂದ್ಯವನ್ನು ಸಂಪೂರ್ಣವಾಗಿ ಭಾರತದ ಪರ ಪಂದ್ಯವನ್ನು ವಾಲುವಂತೆ ಮಾಡಿದರು.
ಆದರೆ ಕೇವಲ 46 ಎಸೆತಗಳಲ್ಲಿ 89 ರನ್ ಗಳಿಸಿದ ಸಂಜು ಸ್ಯಾಮ್ಸನ್ ಅವರ ಅದ್ಭುತ ಆಟ ಹೆಚ್ಚಿನ ಗಮನ ಸೆಳೆಯಿತು. ಕೇರಳದ ಈ ಬ್ಯಾಟರ್ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ದಾಖಲಿಸಿ ಇತಿಹಾಸ ನಿರ್ಮಿಸಿದರು. ಆ ಮೂಲಕ ಮಾರ್ಲನ್ ಸ್ಯಾಮುಯೆಲ್ಸ್ ಮತ್ತು ಕೇನ್ ವಿಲಿಯಮ್ಸನ್ ಅವರ ಹಿಂದಿನ ದಾಖಲೆಗಳನ್ನು ಅವರು ಮುರಿದರು.
ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್ ಒಟ್ಟು 321 ರನ್ ಗಳಿಸಿದ್ದಾರೆ. ಟಿ20 ವಿಶ್ವಕಪ್ನ ಒಂದೇ ಆವೃತ್ತಿಯಲ್ಲಿ ಭಾರತೀಯ ಆಟಗಾರನೊಬ್ಬ ಗಳಿಸಿದ ಅತ್ಯಧಿಕ ರನ್ಗಳ ದಾಖಲೆಯನ್ನು ಕೂಡ ಸಂಜು ಮುರಿದರು. ಈ ದಾಖಲೆಯನ್ನು ವಿರಾಟ್ ಕೊಹ್ಲಿ 2014ರ ಐಸಿಸಿ ಪುರುಷರ ಟಿ20 ವಿಶ್ವಕಪ್ನಲ್ಲಿ 319 ರನ್ ಗಳಿಸುವ ಮೂಲಕ ಸ್ಥಾಪಿಸಿದ್ದರು.

ಇದರ ಜೊತೆಗೆ, ಟಿ20 ವಿಶ್ವಕಪ್ ಸೆಮಿಫೈನಲ್ ಹಾಗೂ ಫೈನಲ್ ಎರಡೂ ಪಂದ್ಯಗಳಲ್ಲಿ ಅರ್ಧಶತಕ ಗಳಿಸಿದ ಮೂರನೇ ಬ್ಯಾಟರ್ ಎಂಬ ಸಾಧನೆಯನ್ನು ಸ್ಯಾಮ್ಸನ್ ಮಾಡಿದರು. ಈ ಪಟ್ಟಿಯಲ್ಲಿ ಈಗಾಗಲೇ ವಿರಾಟ್ ಕೊಹ್ಲಿ ಮತ್ತು ಶಾಹಿದ್ ಅಫ್ರಿದಿ ಇದ್ದಾರೆ.
ತನ್ನದೇ ದಾಖಲೆಯನ್ನು ಸ್ಯಾಮ್ಸನ್ ಮುರಿದಿದ್ದರೂ, ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾವನಾತ್ಮಕ ಸಂದೇಶವನ್ನು ಸಂಜುಗೆ ತಮ್ಮ ಇನ್ಸ್ಟಾಗ್ರಾಮ್
ಖಾತೆಯಲ್ಲಿ ಬರೆದು ಕೊಂಡಿದ್ದಾರೆ.
“ಅತ್ಯಂತ ಅರ್ಹರಾದ ಟೂರ್ನಿ ಶ್ರೇಷ್ಠ ಆಟಗಾರ ಸಂಜು ಸ್ಯಾಮ್ಸನ್ ಅವರಿಂದ ಅದ್ಭುತ ಟೂರ್ನಿಯನ್ನು ಕಂಡೆವು. ಅತ್ಯಂತ ಅಗತ್ಯವಾದ ಸಮಯದಲ್ಲಿ ನೀವು ಅತ್ಯುತ್ತಮವಾಗಿ ಪ್ರದರ್ಶನ ನೀಡಿದ್ದೀರಿ. ನಿನ್ನ ಅದ್ಭುತ ಆಟದಿಂದ ನನಗೆ ತುಂಬಾ ಸಂತೋಷವಾಗಿದೆ ಚೆಟಾ,” ಎಂದು ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದಿದ್ದಾರೆ.

ಜೋತೆಗೆ ಭಾರತ ತಂಡವನ್ನು ಶ್ಲಾಘಿಸಿದ ಕಿಂಗ್ ಕೊಹ್ಲಿ
ಭಾರತ ತಂಡದ ಭಯಮುಕ್ತ ಕ್ರಿಕೆಟ್ ಶೈಲಿ ಮತ್ತು ಟೂರ್ನಿಯ ಪ್ರಮುಖ ಕ್ಷಣಗಳಲ್ಲಿ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯವನ್ನು ಶ್ಲಾಘಿಸಿದರು. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದ ಕೊಹ್ಲಿ, ಭಾರತ ತಂಡದ 2024ರ ಐಸಿಸಿ ಟಿ20 ವಿಶ್ವಕಪ್ ಜಯದ ನಂತರ, ಹೊಸ ತಲೆಮಾರಿನ ಆಟಗಾರರು ಕೂಡ ಅದೆ ಅದ್ಭುತವಾದ ಪ್ರದರ್ಶನ ತೋರುವುದರ ಮೂಲಕ ಭಾರತದ ತಂಡವನ್ನು t20 ವಿಶ್ವಕಪ್ ಗೆಲುವನ್ನು ಸಾಧಿಸುವುದನ್ನು ಕಿಂಗ್ ಕೊಯ್ಲಿ ಖುದ್ದು ಮೈದಾನದಲ್ಲಿ ಇದ್ದು ವೀಕ್ಷಿಸಿದ್ದರು.
ಅಹಮದಾಬಾದ್ನಲ್ಲಿ ಭಾರತ ತಂಡದ ಅದ್ಭುತ ಜಯ. ಟೂರ್ನಿಯ ಅವಧಿಯಲ್ಲಿ ನಮ್ಮ ತಂಡದ ಸ್ಫೋಟಕ ಕ್ರಿಕೆಟ್ ಎದುರು, ಯಾವುದೇ ತಂಡ ಬಲಿಷ್ಠ ಎದುರಾಳಿಯಾಗಲಿಲ್ಲ. ಕಠಿಣ ಪರಿಸ್ಥಿತಿಗಳಲ್ಲಿ ಹೋರಾಡಿ ಮತ್ತೆ ವಿಶ್ವ ಚಾಂಪಿಯನ್ಸ್ ಆಗಲು ಹುಡುಗರು ಅತ್ಯುತ್ತಮ ನಾಯಕತ್ವ ಮತ್ತು ಧೈರ್ಯ ತೋರಿಸಿದ್ದಾರೆ. ಈ ಸಾಧನೆಗೆ ಎಲ್ಲಾ ಆಟಗಾರರು ಮತ್ತು ಟೀಮ್ ಮ್ಯಾನೇಜ್ಮೆಂಟ್ ಸದಸ್ಯರಿಗೆ ಅಭಿನಂದನೆಗಳು. ಜಯ ಹಿಂದ್,” ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.


