
No hand shake again …👍

✨ T20 world cup, IND vs PAK: ಇಶಾನ್ ಕಿಶನ್ ಅಬ್ಬರದ ಬ್ಯಾಟಿಂಗ್ ಪಾಕಿಸ್ತಾನಕ್ಕೆ ಹೀನಾಯ ಸೋಲು ಭಾರತ ಸೂಪರ್-8 ಘಟ್ಟಕ್ಕೆ.!

ಶ್ರೀಲಂಕಾದ ಕೊಲೊಂಬೊದ ಪ್ರೇಮದಾಸ್ ಕ್ರಿಕೆಟ್ ಅಂಗಳದಲ್ಲಿ ಪಾಕಿಸ್ತಾನ ತಂಡದ ನಾಯಕ ಟಾಸ್ ಗೆದ್ದು ಭಾರತ ತಂಡಕ್ಕೆ ಬ್ಯಾಟಿಂಗ್ ಗೆ ಆಹ್ವಾನಿಸಿದರು ಭಾರತ ತಂಡ ಶಿಸ್ತು ಬದ್ಧ ಬ್ಯಾಟಿಂಗ್ ಮತ್ತು ಬೌಲಿಂಗ್ ದಾಳಿಮಾಡಿ ತನ್ನ ಬದ್ಧ ಎದುರಾಳಿ ಪಾಕಿಸ್ತಾನದ ವಿರುದ್ಧ ನಿರೀಕ್ಷೆಗಿಂತಲು ಸುಲಭವಾಗಿ ಪಾಕಿಸ್ತಾನ ತಂಡವನ್ನು ಸೋಲಿಸಿ ಪಂದ್ಯಾವಳಿಯಲ್ಲಿ ಎಂಟರ ಘಟ್ಟವನ್ನು ತಲುಪಿದೆ....
🚨 INDIA DEFEATED PAKISTAN & QUALIFIED INTO THE SUPER 8 IN T20 WORLD CUP 2026 🇮🇳

news.ashwasurya.in
ಅಶ್ವಸೂರ್ಯ/ಕೊಲೊಂಬೊ : ಇಶಾನ್ ಕಿಶನ್ ಸ್ಪೋಟಕ ಬ್ಯಾಟಿಂಗ್ ಮತ್ತು ಭಾರತೀಯ ಬೌಲರ್ಗಳ ಪರಿಣಾಮಕಾರಿ ದಾಳಿಗೆ ಪಾಕಿಸ್ತಾನ ಸೋಲಿಗೆ ಶರಣಾಗಿದೆ. ಭಾರತ ತಂಡ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 61 ರನ್ಗಳ ಭರ್ಜರಿ ಗೆಲುವನ್ನು ಸಾಧಿಸಿತು. ಈ ಗೆಲುವಿನ ಮೂಲಕ ಭಾರತ ತಂಡ 2026ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಸೂಪರ್-8 ಘಟ್ಟಕ್ಕೆ ಲಗ್ಗೆ ಹಾಕಿತು.

ಶ್ರೀಲಂಕಾದ ಕೊಲಂಬೊದ ಪ್ರೇಮದಾಸ್ ಕ್ರೀಡಾಂಗಣದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್ಮನ್ ಇಶಾನ್ ಕಿಶನ್ (Ishan Kishan)ರ ಸ್ಪೋಟಕ ಬ್ಯಾಟಿಂಗ್ ಹಾಗೂ ಬೌಲರ್ಗಳ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಭಾರತ ತಂಡ, 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ 61 ರನ್ಗಳ ಭರ್ಜರಿ ಗೆಲುವು ಪಡೆಯಿತು. ಇದರ ಫಲವಾಗಿ ಚುಟುಕು ವಿಶ್ವಕಪ್ ಟೂರ್ನಿಯ ಸೂಪರ್-8ರ ಘಟ್ಟಕ್ಕೆ ಅರ್ಹತೆ ಪಡೆಯಿತು. ಇನ್ನು ಬ್ಯಾಟಿಂಗ್ ವೈಫಲ್ಯದಿಂದ ಹೀನಾಯ ಸೋಲು ಅನುಭವಿಸಿದ ಪಾಕಿಸ್ತಾನ ತಂಡ, ಸೂಪರ್-8ಕ್ಕೆ ಅರ್ಹತೆ ಪಡೆಯಲು ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯ ಸುಳಿಗೆ ಸಿಲುಕಿದೆ.
ಭಾನುವಾರ (ಫೆ,15)ಕೊಲಂಬೊದ ಆರ್ ಪ್ರೇಮದಾಸ್ ಕ್ರೀಡಾಂಗಣದಲ್ಲಿ ಭಾರತ ತಂಡ ನೀಡಿದ್ದ 176 ರನ್ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ಭಾರತದ ಬೌಲರ್ಗಳ ಎದುರು ಒತ್ತಡಕ್ಕೆ ಒಳಗಾಗಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಪಾಕ್ ಪರ ಉಸ್ಮಾನ್ ಖಾನ್ 34 ಎಸೆತಗಳಲ್ಲಿ 44 ರನ್ ಗಳಿಸಿ, ಭಾರತದ ಬೌಲರ್ಗಳಿಗೆ ಸ್ವಲ್ಪಮಟ್ಟಿಗೆ ಪ್ರತಿರೋಧ ಒಡ್ಡಿದ್ದು ಬಿಟ್ಟರೆ ಇನ್ನುಳಿದಂತೆ ಪಾಕಿಸ್ತಾನದ ಯಾವ ಬ್ಯಾಟ್ಸ್ಮನ್ಗಳು ಪ್ರತಿರೋಧ ತೋರಲು ವಿಫಲರಾದರು. ಅಂತಿಮವಾಗಿ ಪಾಕಿಸ್ತಾನ ತಂಡ 18 ಓವರ್ಗಳಿಗೆ 114 ರನ್ಗಳಿಗೆ ಆಲ್ಔಟ್ ಆಯಿತು. ಆ ಮೂಲಕ ಭಾರತದ ಎದುರು ಪಾಕಿಸ್ತಾನ ಮತ್ತೊಮ್ಮೆ ಮಂಡಿಯೂರಿತು.

ಪಾಕಿಸ್ತಾನ ತಂಡ ತನ್ನ ಬ್ಯಾಟಿಂಗ್ ಸರದಿಯಲ್ಲಿ ಆರಂಭಿಕ ಓವರ್ ನಲ್ಲಿ ಬ್ಯಾಟರ್ ಸಹಿಬ್ದಾಝಾ ಫರ್ಹಾನ್ ಅವರನ್ನು ಹಾರ್ದಿಕ್ ಪಾಂಡ್ಯ ಔಟ್ ಮಾಡಿದ್ದರು. ನಂತರ ಎರಡನೇ ಓವರ್ನಲ್ಲಿ ಜಸ್ಪ್ರೀತ್ ಬುಮ್ರಾ, ಸೈಯಮ್ ಆಯುಬ್ ಮತ್ತು ನಾಯಕ ಸಲ್ಮಾನ್ ಅಲಿ ಆಘಾ ಅವರನ್ನು ಔಟ್ ಮಾಡಿದರು. ಐದನೇ ಓವರ್ನಲ್ಲಿ ಬಾಬರ್ ಆಝಮ್ ಅವರನ್ನು ಅಕ್ಷರ್ ಪಟೇಲ್ ಪೆವಿಲಿಯನ್ಗೆ ಕಳುಹಿಸಿದರು. ಭಾರತದ ಬೌಲರ್ಗಳನ್ನು ಎದುರಿಸುವಲ್ಲಿ ಪಾಕ್ ಬ್ಯಾಟರ್ಗಳು ಆರಂಭದಲ್ಲೆ ವಿಫಲರಾದರು,

ಭಾರತದ ಬೌಲಿಂಗ್ ದಾಳಿಗೆ ಸಂಪೂರ್ಣವಾಗಿ ನೆಲಕಚ್ಚಿದರು,ಉಳಿದಂತೆ ಉಸ್ಮಾನ್ ಖಾನ್ 44 ರನ್ ಗಳಿಸಿ ಸ್ವಲ್ಪ ಪ್ರತಿರೋಧ ತೋರಿದರು. ಕೊನೆಯಲ್ಲಿ ಶಾಹೀನ್ ಶಾ ಅಫ್ರಿದಿ ಅಜೇಯ 23 ರನ್ ಗಳಿಸಿದರು. ಇನ್ನುಳಿದಂತೆ ಪಾಕಿಸ್ತಾನದ ಯಾವುದೇ ಬ್ಯಾಟ್ಸ್ಮನ್ 20ರ ಗಡಿ ದಾಟಲಿಲ್ಲ.

💪 ಭಾರತದ ಭರ್ಜರಿ ಬೌಲಿಂಗ್ ದಾಳಿ..
ಭಾರತದ ಪರ ಜಸ್ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ ಮತ್ತು ಹಾರ್ದಿಕ್ ಪಾಂಡ್ಯ ಪಾಕಿಸ್ತಾನದ ತಲಾ ಎರಡೆರಡು ವಿಕೆಟ್ ಕಿತ್ತೊಗೆದರು. ಕುಲ್ದೀಪ್ ಯಾದವ್ ಮತ್ತು ತಿಲಕ್ ವರ್ಮಾ ಕೂಡ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
175 ದಾಖಲೆ ರನ್ ಕಲೆ ಹಾಕಿದ ಭಾರತ ತಂಡ.

ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಭಾರತ ತಂಡ, ಇಶಾನ್ ಕಿಶನ್ ಅವರ ಅಬ್ಬರದ 77 ರನ್ಗಳ ನೆರವಿನಿಂದ ತನ್ನ ಪಾಲಿನ 20 ಓವರ್ಗಳಿಗೆ 7 ವಿಕೆಟ್ಗಳ ನಷ್ಟಕ್ಕೆ ದಾಖಲೆಯ 175 ರನ್ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಪಾಕಿಸ್ತಾನಕ್ಕೆ 176 ರನ್ಗಳ ಕಠಿಣ ಗುರಿಯನ್ನು ನೀಡಿತು. ಇಶಾನ್ ಕಿಶನ್ 40 ಎಸೆತಗಳಲ್ಲಿ 77 ರನ್ಗಳನ್ನು ಕಲೆ ಹಾಕಿ, ಭಾರತದ ಪರ ವೈಯಕ್ತಿಕ ಗರಿಷ್ಠ ಮೊತ್ತವನ್ನು ದಾಖಲಿಸಿದರು.
ಇಶಾನ್ -ತಿಲಕ್ ಜುಗಲ್ಬಂದಿ
ಸಂಜು ಸ್ಯಾಮ್ಸನ್ ಬದಲು ಇನಿಂಗ್ಸ್ ಆರಂಭಿಸಿದ ಅಭಿಷೇಕ್ ಶರ್ಮಾ ಆಡಿದ 4 ಎಸೆತಗಳಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ಗೆ ತೆರಳಿದರು. ಆ ಮೂಲಕ ಭಾರತ ತಂಡ ಒಂದು ರನ್ಗೆ ಒಂದು ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ಆದರೆ ಮೊದಲನೇ ಓವರ್ನಲ್ಲಿ ಭಾರತ ಹಿನ್ನಡೆ ಅನುಭವಿಸಿದರೂ ಭಾರತ ತಂಡ ಎರಡನೇ ಓವರ್ನಲ್ಲಿ ಇಶಾನ್ ಕಿಶನ್ ಸ್ಪೋಟಕ ಬ್ಯಾಟಿಂಗ್ ಮೂಲಕ ತಕ್ಷಣವೇ ಕಮ್ಬ್ಯಾಕ್ ಮಾಡಿತು. ಎರಡನೇ ವಿಕೆಟ್ಗೆ ಇಶಾನ್ ಕಿಶನ್ ಹಾಗೂ ತಿಲಕ್ ವರ್ಮಾ 87 ರನ್ಗಳನ್ನು ಕಲೆ ಹಾಕಿ ತಂಡಕ್ಕೆ ಭದ್ರ ಅಡಿಪಾಯವನ್ನು ಹಾಕಿದರು.
ಇಶಾನ್ ಕಿಶನ್ ಅಬ್ಬರದ ಅರ್ಧ ಶತಕ.
THE FIRST INDIAN WICKETKEEPER TO WIN POTM AWARD IN T20 WORLD CUP – ISHAN KISHAN. 🇮🇳

ಮೊದಲನೇ ವಿಕೆಟ್ ಬೇಗ ಕಳೆದುಕೊಂಡರೂ ಇಶಾನ್ ಕಿಶನ್ ಮಾತ್ರ ವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ. ಅವರು ಆರಂಭದಿಂದಲೂ ಸ್ಪೋಟಕ ಬ್ಯಾಟಿಂಗ್ ಮಾಡಿದರು. ಅವರು ಆಡಿದ 27 ಎಸೆತಗಳಲ್ಲಿ ಅರ್ಧಶತಕವನ್ನು ಬಾರಿಸಿದರು ಹಾಗೂ ಅಂತಿಮವಾಗಿ 40 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 10 ಬೌಂಡರಿಗಳೊಂದಿಗೆ 77 ರನ್ ಗಳಿಸಿ ಭಾರತ ತಂಡಕ್ಕೆ ಭರ್ಜರಿ ಆರಂಭ ಮತ್ತು ದೊಡ್ಡ ಮೊತ್ತವನ್ನು ಕಲೆಹಾಕಲು ಸುಲಭ ದಾರಿಮಾಡಿ ಸೈಯಮ್ ಆಯುಬ್ಗೆ ವಿಕೆಟ್ ಒಪ್ಪಿಸಿದರು.

ಇಶಾನ್ ಬೆನ್ನಲ್ಲೆ ತಿಲಕ್ ವರ್ಮಾ 24 ಎಸೆತಗಳಲ್ಲಿ 25 ರನ್ಗಳಿಸಿ ಔಟ್ ಆದರು. ಹಾರ್ದಿಕ್ ಪಾಂಡ್ಯ ಎದುರಿಸಿದ ಮೊದಲನೇ ಎಸೆತದಲ್ಲಿ ಔಟ್ ಆದರು. ಸೈಯಮ್ ಆಯುಬ್ 15ನೇ ಓವರ್ನಲ್ಲಿ ಸತತ ಎರಡು ಎಸೆತಗಳಲ್ಲಿ ತಿಲಕ್ ಮತ್ತು ಹಾರ್ದಿಕ್ ವಿಕೆಟ್ ಕಿತ್ತರು. ನಂತರ ಸೂರ್ಯಕುಮಾರ್ ಯಾದವ್ ನಾಯಕನ ಜವಾಬ್ದಾರಿಯುತ ಆಟವಾಡಿ 29 ಎಸೆತಗಳಲ್ಲಿ 32 ರನ್ ಗಳಿಸಿದರು ಹಾಗೂ ಶಿವಂ ದುಬೆ 17 ಎಸೆತಗಳಲ್ಲಿ 27 ರನ್ ಸಿಡಿಸಿ ಔಟ್ ಆದರು. ರಿಂಕು ಸಿಂಗ್ 4 ಎಸೆತಗಳಲ್ಲಿ 11 ರನ್ ಗಳಿಸಿದರು.

ಪಾಕಿಸ್ತಾನ ಪರ ಸೈಯಮ್ ಆಯುಬ್ ನಾಲ್ಕು ಓವರ್ಗಳಿಗೆ 25 ರನ್ ನೀಡಿ 3 ವಿಕೆಟ್ ಕಿತ್ತು ಯಶಸ್ವಿ ಬೌಲರ್ ಎನಿಸಿಕೊಂಡರು. ಉಸ್ಮಾನ್ ತಾರಿಖ್ 4 ಓವರ್ಗೆ 24 ರನ್ ನೀಡಿ ಒಂದು ವಿಕೆಟ್ ಪಡೆದರು.
ಮತ್ತೊಮ್ಮೆ ಭಾರತ ತಂಡ ಪಾಕಿಸ್ತಾನ ತಂಡವನ್ನು ಬಗ್ಗೆ ಬಡಿದು ಹಿಸ್ಟರಿ ರಿಪೀಟ್ ಮಾಡಿತು..

✨ History repeat
IND beat PAK in 2007
IND beat PAK in 2007.
IND beat PAK in 2012.
IND beat PAK in 2014.
IND beat PAK in 2016.
PAK beat IND in 2021.
IND beat PAK in 2022.
IND beat PAK in 2024.
IND beat PAK in 2026.
ITS 8-1 FOR INDIA IN T20 WORLD CUP HISTORY 😍🇮🇳














