

ಬೆಳಗಾವಿ : ಅಪ್ರಾಪ್ತೆ ಹುಡುಗಿ ಜೋತೆ ಪೂಜಾರಪ್ಪನ ಪ್ರೀತಿ.! ದೇಗುಲದ ಆವರಣದಲ್ಲೇ ನೆತ್ತರು ಹರಿಯಿತು.! ಇದು ಬೇಕಿತ್ತಾ ಪೂಜಾರಪ್ಪ.?

news.ashwasurya.in
ಅಶ್ವಸೂರ್ಯ/ಬೆಳಗಾವಿ : ಅವರಿಬ್ಬರೂ ಒಂದೇ ಊರಿನವರು ಒಂದೇ ಕಾಲನಿಯ ನಿವಾಸಿಗಳು.ದೇವಸ್ಥಾನದಲ್ಲಿ ಪೂಜಾರಿ ಕೆಲಸ ಮಾಡ್ಕೊಂಡಿದ್ದವನಿಗೆ ಅದೇನೊ ಗೊತ್ತಿಲ್ಲ ಗಂಟೆ ಬಾರಿಸುತ್ತಲೆ ಅಪ್ರಾಪ್ತೆಯ ಮೇಲೆ ಕಣ್ಣು ಹಾಕಿದ್ದಾನೆ.!ಎನು ಅರಿಯದ ಬಾಲಕಿ ಕೂಡ ಪೂಜಾರಿಯ ಪ್ರೀತಿಗೆ ಮನಸೋತವಳಂತಾಗಿದ್ದಾಳೆ.!ಇದು ಅಪ್ರಾಪ್ತೆ ಹುಡುಗಿಯ ಅಪ್ರಾಪ್ತ ತಮ್ಮನಿಗೆ ಗೋತ್ತಾಗಿದೆ.ಆತನ ಪಿತ್ತ ನೆತ್ತಿಗೇರಿದೆ.ಪೂಜಾರಿಗೆ ವಾರ್ನಿಂಗ್ ಕೊಟ್ರೂ ಆತ ಆಕೆಯಿಂದ ದೂರವಾಗಲಿಲ್ಲ. ಹುಡುಗಿಯ ತಮ್ಮನ ತಲೆಕಟ್ಟು ದೇವಸ್ಥಾನದ ಆವರಣದಲ್ಲೆ ಪೂಜಾರಪ್ಪನ ಹೆಣ ಉರುಳಿಸಿದ್ದಾನೆ.ಪವಿತ್ರ ದೇಗುಲದಲ್ಲಿ ನೆತ್ತರ ಓಕುಳಿ ಚಿಮ್ಮಿದೆ.!
ಈಗಿನ ಮಕ್ಕಳ ಮನಸ್ಥಿತಿ ಯಾವ ಮಟ್ಟದಲ್ಲಿದೆ ಎಂದು ನೀವೆ ನೋಡಿ. ಇನ್ನೂ ಮೂಗಿನಡಿ ಮೀಸೆ ಮೊಳೆತಿಲ್ಲ . ತಲೆಯಲ್ಲಿ ನಾಲ್ಕು ಅಕ್ಷರವೂ ಸರಿಯಾಗಿ ಬೇರು ಬಿಟ್ಟಿಲ್ಲ.ಇನ್ನೂ ಹೈಸ್ಕೂಲ್ ಮೆಟ್ಟಲಿರಿದ ಬಾಲಕನೊಬ್ಬ ಹೆಣ ಉರುಳಿಸೋ ಹಂತಕ್ಕೆ ಹೋಗಿದ್ದಾನೆ.! ತನ್ನ ಅಕ್ಕನ ಸುದ್ದಿಗೆ ಬರಬೇಡ ಅಂತಾ ಹಲವು ಬಾರಿ ವಾರ್ನಿಂಗ್ ಕೊಟ್ಟ ಅಪ್ರಾಪ್ತನೊಬ್ಬ ತನ್ನೂರಿನ ಪೂಜಾರಿಗೆ ಚಟ್ಟಕಟ್ಟಿದ್ದಾನೆ. ಅಪ್ರಾಪ್ತ ಅಕ್ಕನ ಹಿಂದೆ ಬಿದ್ದವನನ್ನು ಅಪ್ರಾಪ್ತ ತಮ್ಮನೆ ಸೂರ್ಯ ಉದಯಿಸುವ ಮುನ್ನವೇ ಕೊಂದು ಮುಗಿಸಿದ್ದಾನೆ.!

ಹತ್ಯೆಯಾದವನ ಹೆಸರು ಮಂಜುನಾಥ ಸುಭಾಷ್ ಎಣ್ಣಿ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ರಾಜಾಪುರ ನಿವಾಸಿ. ಅರ್ಧದಲ್ಲಿಯೆ ಓದಿಗೆ ಎಳ್ಳು ನೀರು ಬಿಟ್ಟು ತನ್ನೂರಿನ ಚೂನ್ನಮ್ಮ ದೇವಿಯ ಪೂಜೆ ಮಾಡ್ಕೊಂಡಿದ್ದ. ಪೂಜಾರಪ್ಪ ದೇವಸ್ಥಾನದಲ್ಲಿ ಗಂಟೆ ಬಾರಿಸಿಕೊಂಡು ಇದ್ದಿದ್ರೆ ಇವತ್ತು ಈ ಸ್ಥಿತಿ ಬರ್ತಿರಲಿಲ್ಲ ಆತನಿಗೆ.ಅದು ಬಿಟ್ಟು ತನ್ನೂರಿನ ಹೈಸ್ಕೂಲ್ ಅಪ್ರಾಪ್ತ ಹುಡುಗಿ ಮೇಲೆ ಕಣ್ಣು ಹಾಕಿದ್ದಾನೆ.! ಅಪ್ರಾಪ್ತೆಯ ಸ್ನೇಹ ಬೆಳೆಸಿಕೊಂಡು ಗಂಟೆಗಟ್ಟಲೆ ಫೋನ್ನಲ್ಲಿ ಮಾತನಾಡೋದು, ಆಗಾಗ ಕದ್ದು ಮುಚ್ಚಿ ಭೇಟಿ ಮಾಡೋದು ಮಾಡುತ್ತಿದ್ದನಂತೆ.! ಈ ವಿಷ್ಯ ಅಪ್ರಾಪ್ತೆಯ ತಮ್ಮನಿಗೆ ಗೊತ್ತಾಗಿದೆ ನಿಗಿ ನಿಗಿ ಕೆಂಡವಾಗಿದ್ದಾನೆ.ಪೂಜಾರಿ ಮಂಜುನಾಥನನ್ನು ಕರೆದು ನನ್ನ ಅಕ್ಕನ ವಿಷಯಕ್ಕೆ ಬರಬೇಡ ಎಂದು ಒಂದೆರಡು ಬಾರಿ ಎಚ್ಚರಿಕೆ ಕೂಟ್ಟಿದ್ದಾನೆ. ಆದರೆ ಅಪ್ರಾಪ್ತ ಹುಡುಗಿಯ ಪ್ರೀತಿಯಲ್ಲಿ ಬಿದ್ದಿದ್ದ ಪೂಜಾರಿ ಮಂಜುನಾಥ ಮಾತ್ರ ಆತನ ಎಚ್ಚರಿಕೆಗೆ ತಲೆ ಕೆಡಿಸಿಕೊಂಡಿರಲಿಲ್ಲ. ಗಂಟೆಗಟ್ಟಲೆ ಆಕೆಯ ಜೋತೆ ಫೋನ್ನಲ್ಲಿ ಬ್ಯುಸಿಯಾಗಿರುತ್ತಿದ್ದನಂತೆ. ಇದು ಅಪ್ರಾಪ್ತ ಹುಡುಗಿಯ ತಮ್ಮನ ತಲೆ ಕೆಡಿಸಿದೆ. ಭಟ್ಟನಿಗೆ ಮೊಹರ್ತ ಫಿಕ್ಸ್ ಮಾಡಿದ್ದಾನೆ. ಒಂದು ಗತಿ ಕಾಣಿಸಬೇಕು ಅಂತಾ ಸ್ಕೆಚ್ ಹಾಕೀದ್ದಾನೆ.

ಬೆಳಗ್ಗೆ 5.30 ದೇವಸ್ಥಾನದ ಪೂಜೆಗೆ ಹೋಗಿದ್ದ ಪೂಜಾರಿ ಖಲ್ಲಾಸ್.!
ಆರೋಪಿಯ ತಂಗಿ ಪೂಜಾರಿ ಮಂಜುನಾಥನನ್ನು ಲವ್ ಮಾಡ್ತಿದ್ದಾಳೆ ಎಂದು ಸಂಶಯ ಹುಟ್ಟಿದೆ. ಇದಕ್ಕೆ ಹಲವರು ಸಾಥ್ ಕೊಟ್ಟಿದ್ದಾರೆ ಎಂದು ಸ್ಥಳೀಯ ನಿವಾಸಿ ಗುರಪ್ಪ ಹಿಟ್ಟಣಗಿ ತಿಳಿಸಿದ್ದಾರೆ.
ದೇವಸ್ಥಾನದ ಪೂಜಾರಿಯಾಗಿದ್ದ ಸುರೇಶ, ಬೆಳಗ್ಗೆ 5.30ಕ್ಕೇ ಎದ್ದು ದೇವಸ್ಥಾನಕ್ಕೆ ಎಂದಿನಂತೆ ಹೋಗಿದ್ದ ಇದನ್ನ ತಿಳ್ಕೊಂಡಿದ್ದ ಅಪ್ರಾಪ್ತ ಹಂತಕ, ಸುರೇಶನನ್ನು ಹಿಂಬಾಲಿಸಿ ನಂತರ ದೇವಸ್ಥಾನದ ಬಳಿ ಯಾರೂ ಇಲ್ಲ ಅನ್ನೋದು ಅರಿವಿಗೆ ಬರುತ್ತಿದ್ದಂತೆಯೇ ರಾಡ್ನಿಂದ ಪೂಜಾರಿ ಮಂಜುನಾಥನ ತಲೆಗೆ ಹೊಡೆದು ಕೊಂದು ಮುಗಿಸಿದ್ದಾನೆ. ಮಂಜುನಾಥ ಪ್ರಾಣ ಬಿಡುತ್ತಿದ್ದಂತೆ ಏನು ಆಗಿಲ್ಲದವನಂತೆ ಸೈಲೆಂಟಾಗಿ ಸೀದಾ ಮನೆ ಸೇರಿಕೊಂಡಿದ್ದಾನೆ ಹಂತಕ.!
ಸೂರ್ಯನ ಕಿರಣ ಭೂಮಿಯನ್ನು ಸ್ಫರ್ಶಿಸುತ್ತಿದ್ದಂತೆ ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ಬಂದ ಭಕ್ತರಿಗೆ ಶಾಖ್ ಆಗಿದೆ.! ದೇವಸ್ಥಾನದ ಆವರಣದಲ್ಲಿ ನೆತ್ತರ ಘಮಲು.. ದೇವಸ್ಥಾನ ಪಡುಸಾಲೆಯಲ್ಲಿ ರಕ್ತದ ಮಡುವಲ್ಲಿ ಬಿದ್ದಿದ್ದ ಪೂಜಾರಿ ಮಂಜುನಾಥನ ಹೆಣವನ್ನು ನೋಡಿ ಗಾಬರಿಯಾಗಿದ್ದಾರೆ. ತಕ್ಷಣವೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕಾರ್ಯಚರಣೆಗೆ ಇಳಿದ ಪೊಲೀಸರ ತಂಡ ಅಪ್ರಾಪ್ತ ಹಂತಕನನ್ನು ಹಿಡಿದು ಹೆಡೆಮುರಿ ಕಟ್ಟಿದ್ದಾರೆ.
ಘಟನೆ ಬಗ್ಗೆ ವಿವರಣೆ ನೀಡಿರುವ ಬೆಳಗಾವಿ ಎಸ್ಪಿ ಕೆ.ರಾಮರಾಜನ್,ಮಂಜುನಾಥನನ್ನು ಮಾತು ಕೇಳದೆ ಮುಂದುವರಿಯುತ್ತಿದ್ದಾನೆ ಎಂದು ಭಾವಿಸಿ ಮುಂಜಾನೆ ದೇವಸ್ಥಾನದ ಆವರಣದಲ್ಲಿ ಮಾರಕಾಸ್ತ್ರದಿಂದ ದಾಳಿ ಮಾಡಿದ್ದಾರೆ. ಆತ ಕೆಳಕ್ಕೆ ಬಿದ್ದ ಬಳಿಕ ಮತ್ತೆ ಹಲ್ಲೆ ಮಾಡಿದ್ದು, ಈ ವೇಳೆ ತೀವ್ರ ರಕ್ತಸ್ರಾವದಿಂದ ಪೂಜಾರಿ ಮಂಜುನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆರೋಪಿ ಬಾಲಕ ಆಗಿರುವ ಕಾರಣಕ್ಕೆ ಬಾಲಾಪರಾಧಿ ನ್ಯಾಯಾಲಯ ಎದುರು ಹಾಜರುಪಡಿಸಲಾಗಿದೆ. ಪ್ರಕರಣದ ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ಅದೇನೇ ಇರಲಿ ಅಪ್ರಾಪ್ತೆಯ ಹಿಂದೆ ಬಿದ್ದವ ದುರಂತ ಅಂತ್ಯ ಕಂಡಿದ್ದಾನೆ.! ಅಕ್ಕನ ತಂಟೆಗೆ ಬಂದಿದ್ದ ಅಂತಾ ಹೆಣ ಉರುಳಿಸಿದವ ಅಪ್ರಾಪ್ತ ತಮ್ಮ ಜೈಲು ಕಂಬಿಯ ಹಿಂದೆ ಸೇರಿದ್ದಾನೆ. ಕಿರಿ ವಯಸ್ಸಿನಲ್ಲೇ ಕೊಲೆ ಮಾಡೋ ಮಟ್ಟಕ್ಕೆ ಹೋಗ್ತಾರೆ ಅನ್ನೋದೇ ಆಘಾತಕಾರಿಯಾಗಿದೆ.!


