ಅಂಡರ್-19 ವಿಶ್ವಕಪ್ 2026 : ಶುಭಮನ್ ಗಿಲ್ ದಾಖಲೆ ಉಡೀಸ್ ನಂ.1 ಪಟ್ಟ ಅಲಂಕರಿಸಿದ ವೈಭವ್ ಸೂರ್ಯವಂಶಿ.
news.ashwasurya.in
ಅಶ್ವಸೂರ್ಯ/ ಜಿಂಬಾಬ್ವೆ : ಇತಿಹಾಸ ನಿರ್ಮಿಸಿದ ವೈಭವ್ ಸೂರ್ಯವಂಶಿ
ಐಸಿಸಿ ಅಂಡರ್-19 ವಿಶ್ವಕಪ್ 2026ರಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 67 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ಗಳ ನೆರವಿನಿಂದ 72 ರನ್ಗಳ ಇನಿಂಗ್ಸ್ ಆಡಿ ದೊಡ್ಡ ದಾಖಲೆಯನ್ನು ತಮ್ಮ ಹೆಸರಿಗೆ ಬರೆದು ಕೊಂಡಿದ್ದಾರೆ.
1000 ರನ್ ಪೂರೈಸಿ ದಾಖಲೆ ಮಾಡಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಯುವ ಏಕದಿನ ಕ್ರಿಕೆಟ್ನಲ್ಲಿ 1000 ರನ್ ಪೂರೈಸಿದ್ದಾರೆ. ಈ ಸಾಧನೆ ಮಾಡಿದ ಭಾರತದ ಏಳನೇ ಆಟಗಾರ ಎನಿಸಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ದಾಖಲೆ ಮುರಿದ ವೈಭವ್.!
ವೈಭವ್ ಸೂರ್ಯವಂಶಿ ಅವರು ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮುರಿದು ಹಾಕಿದ್ದಾರೆ. ಕೊಹ್ಲಿ ಅಂಡರ್-19 ಏಕದಿನ ಕ್ರಿಕೆಟ್ನಲ್ಲಿ 978 ರನ್ ಗಳಿಸಿದ್ದರು.ವೈಭವ್ ಇದನ್ನು ಮುರಿದು ಸಾವಿರ ರನ್ ಗಡಿದಾಟಿದ್ದಾರೆ.
ಶುಭಮನ್ ಗಿಲ್ ಅವರನ್ನೂ ಹಿಂದಿಕ್ಕಿದ ವೈಭವ್ ಸೂರ್ಯವಂಶಿ
ಭಾರತ ತಂಡದ ಶ್ರೇಷ್ಠ ಬ್ಯಾಟ್ಸ್ಮನ್ ಶುಭಮನ್ ಗಿಲ್ ಅವರ ದಾಖಲೆಯನ್ನೂ ಹಿಂದಿಕ್ಕಿದ್ದಾರೆ ವೈಭವ್ ಸೂರ್ಯವಂಶಿ
157.68ರ ಸ್ಟ್ರೈಕ್ ರೇಟ್ನಲ್ಲಿ 1000ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಅಂಡರ್-19 ಆಟಗಾರ ಎಂಬ ಹೆಗ್ಗಳಿಕೆಗೆ ವೈಭವ್ ಪಾತ್ರರಾಗಿದ್ದಾರೆ. ಈ ದಾಖಲೆ ಗಿಲ್ ಅವರ ಹೆಸರಿನಲ್ಲಿತ್ತು, ಅವರ ಸ್ಟ್ರೈಕ್ ರೇಟ್ 103.23 ಆಗಿತ್ತು.

ಅತಿ ಕಿರಿಯ ವಯಸ್ಸಿನಲ್ಲಿ 1 ಸಾವಿರ ರನ್ ಪೂರೈಸಿದ ಆಟಗಾರ
ವೈಭವ್ ಸೂರ್ಯವಂಶಿ 14 ವರ್ಷ 196 ದಿನಗಳ ವಯಸ್ಸಿನಲ್ಲಿ 1000 ರನ್ ಪೂರೈಸಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಪಾಕಿಸ್ತಾನದ ಅಹ್ಮದ್ ಶೆಹಜಾದ್ ಹೆಸರಿನಲ್ಲಿತ್ತು, ಅವರು 16ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು.

ಕೇವಲ 20 ಪಂದ್ಯಗಳಲ್ಲಿ 52.35ರ ಸರಾಸರಿಯಲ್ಲಿ ಯುವ ಏಕದಿನ ಪಂದ್ಯಗಳಲ್ಲಿ 1000 ರನ್ ಗಳಿಸಿ ದಾಖಲೆ ಬರೆದಿದ್ದಾರೆ. ಈ ಮೂಲಕ ಅವರು ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಆಟಗಾರರಾಗಿದ್ದಾರೆ.
ಕ್ರಿಕೆಟ್ಗೆ ಸಿಕ್ಕ ಹೊಸ ತಾರೆ
ವೈಭವ್ ಸೂರ್ಯವಂಶಿ ಅವರ ಪ್ರದರ್ಶನವು ಭಾರತೀಯ ಕ್ರಿಕೆಟ್ಗೆ ದೊಡ್ಡ ತಾರೆಯೊಬ್ಬರು ಸಿಕ್ಕಂತಾಗಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇನ್ನೇನು ಕೇಲವೆ ದಿನಗಳಲ್ಲಿ ಟೀಂ ಇಂಡಿಯಾ ಪ್ರತಿನಿಧಿಸುವ ಕಿರಿಯ ಆಟಗಾರ ವೈಭವ ಸೂರ್ಯವಂಶಿ ಎನ್ನುವುದು ಈಗಾಗಲೆ ಸಾಕಷ್ಟು ಕೂತುಹಲ ಮೂಡಿಸಿದೆ.


