ರಂಗಾಯಣ ಶಿವಮೊಗ್ಗ
ಶಿವಮೊಗ್ಗ : ಸುವರ್ಣ ಸಂಸ್ಕೃತಿ ಭವನದಲ್ಲಿ ಜನವರಿ 14 ರಿಂದ 19 ರವರೆಗೆ ‘ರಂಗ ಸಂಕ್ರಾಂತಿ’ ನಾಟಕೋತ್ಸವ -2026.ಆರು ದಿನಗಳ ಕಾಲ ಆರು ಸುಂದರ ನಾಟಕಗಳ ಪ್ರದರ್ಶನ.

news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ರಂಗಾಯಣ, ಶಿವಮೊಗ್ಗವು ರಂಗಬೆಳಕು (ರಿ), ಶಿವಮೊಗ್ಗ ಹಾಗೂ ಕಡೆಕೊಪ್ಪಲ ಪ್ರತಿಷ್ಠಾನ (ರಿ), ಶಿವಮೊಗ್ಗ ಇವರ ಸಹಯೋಗದಲ್ಲಿ ದಿನಾಂಕ:14-01-2026 ರಿಂದ 19-01-2026 ರವರೆಗೆ ‘ರಂಗ ಸಂಕ್ರಾಂತಿ’ ನಾಟಕೋತ್ಸವ -2026 ಎಂಬ ಹೆಸರಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದೆ. ಆರು ದಿನಗಳು ನಡೆಯಲಿರುವ ಈ ನಾಟಕೋತ್ಸವದಲ್ಲಿ ವಿವಿಧ ನಾಟಕಗಳು ಪ್ರತಿ ದಿನ ಸಂಜೆ 6.30ಕ್ಕೆ ಸುವರ್ಣ ಸಂಸ್ಕೃತಿ ಭವನ, ಅಶೋಕ ನಗರ, ಶಿವಮೊಗ್ಗ ನಗರದಲ್ಲಿ ಪ್ರದರ್ಶನಗೊಳ್ಳಲಿವೆ. ಟಿಕೆಟ್ ದರ ಒಂದು ನಾಟಕಕ್ಕೆ ರೂ.30/-. ಎಲ್ಲರಿಗೂ ಆತ್ಮೀಯ ಸ್ವಾಗತ…
ಜನವರಿ 14 ರಂದು ಸಂಜೆ 6 ಗಂಟೆಗೆ “ರಂಗ ಸಂಕ್ರಾಂತಿ” ನಾಟಕೋತ್ಸವದಲ್ಲಿ ಮೊದಲ ನಾಟಕ :
ಕಾಲಚಕ್ರ


