
ಮಂಗಳೂರು : ಖಡಕ್ ಪೊಲೀಸ್ ಕಮಿಷನರ್ ಹಾಗೂ ರಕ್ಷಣಾಧಿಕಾರಿ ವರ್ಗಾವಣೆಗೆ ನಡೆದಿದೆ ಮರಳು ಮಾಫಿಯಾ ಮತ್ತು ಅಕ್ರಮ ದಂಧೆಕೋರರಿಂದ ಹುನ್ನಾರ.!

news.ashwasurya.in
ಅಶ್ವಸೂರ್ಯ/ಮಂಗಳೂರು : ಪೊಲೀಸ್ ಕಮಿಷನರ್ ಮತ್ತು ರಕ್ಷಣಾಧಿಕಾರಿಗಳ ವರ್ಗಾವಣೆಗೆ ದಕ್ಷಿಣ ಕನ್ನಡ ಜಿಲ್ಲೆಯ ಅಕ್ರಮ ಮರಳು ದಂಧೆಕೋರರು ಮತ್ತು ಬೆಟ್ಟಿಂಗ್ ದಂಧೆಕೋರರಿಂದ ದೊಡ್ಡ ಮಟ್ಟದ ಹುನ್ನಾರ ನೆಡೆದಿದೆಯಂತೆ.!
ದಕ್ಷಿಣ ಕನ್ನಡ ಜಿಲ್ಲೆ ಕಳೆದ ಆರೇಳು ತಿಂಗಳಿನಿಂದ ಶಾಂತಿಯುತವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡುಬರುವಲ್ಲಿ ಪೋಲಿಸ್ ಇಲಾಖೆ ಸಮರ್ಥವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕರಾವಳಿ ಮಂಗಳೂರಿನ ಬೆಟ್ಟಿಂಗ್ ದೊರೆಗಳು,ಮರಳು ಮಾಫಿಯಾ ಮತ್ತು ಅಕ್ರಮ ದಂಧೆಕೋರರು ಇವರುಗಳ ಬೆನ್ನಿಗೆ ನಿಂತಿರುವ ಕೇಲವು ರಾಜಕೀಯ ನಾಯಕರು ದಕ್ಷ ಅಧಿಕಾರಿಗಳಾದ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಡಾ. ಅರುಣ್ ಅವರನ್ನು ವರ್ಗಾವಣೆ ಮಾಡಲು ದೊಡ್ಡಮಟ್ಟದಲ್ಲಿ ಕಾಣದ ಕೈಗಳು ಹುನ್ನಾರ ನಡೆಸುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.!

ಕಳೆದ ಆರು ತಿಂಗಳಿನಿಂದ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಯಾವುದೇ ಗಲಭೆ ಅಥವಾ ಕೋಮು ಗಲಭೆಗಳು ನಡೆದಿಲ್ಲ ಮರಳು ಗಣಿಗಾರಿಕೆ, ಕೆಂಪು ಕಲ್ಲು ಸಾಗಣೆ, ಮತ್ತು ಜೂಜಾಟದ ಅಡ್ಡೆಗಳಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ಮಟ್ಟಹಾಕುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ ಮತ್ತು ಅಕ್ರಮ ದಂಧೆಕೋರರು ಮತ್ತು ಮಾಫಿಯಾ ದೊರೆಗಳು ಹಾಗೂ ರೌಡಿಶೀಟರ್ಗಳು ಪೊಲೀಸ್ ಅಧಿಕಾರಿಗಳ ಹೆಸರು ಕೇಳಿದರೆ ನಡುಗುವ ಮಟ್ಟಕ್ಕೆ ಸಂಪೂರ್ಣ ಪೊಲೀಸ್ ಇಲಾಖೆ ಖಡಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕೋಮು ಹಣೆಪಟ್ಟಿ ಕಟ್ಟಿ ಒಂದಿಲ್ಲೊಂದು ಅಕ್ರಮದಲ್ಲೇ ಮಿಂದು ಹೋಗಿದ್ದ ಸಂಪೂರ್ಣ ಜಿಲ್ಲೆಯನ್ನು ಕೇವಲ 6 ತಿಂಗಳಲ್ಲಿ ಬಹುತೇಕ ಸ್ವಚ್ಛ ಮಾಡಿದ್ದಾರೆ ಅಧಿಕಾರಿಗಳಾದ ಸುಧೀರ್ ಕುಮಾರ್ ರೆಡ್ಡಿ ಮತ್ತು ಡಾ.ಅರುಣ್. ಆದರೆ ಅಕ್ರಮವನ್ನೇ ತಮ್ಮ ಬದುಕನ್ನಾಗಿ ಮಾಡಿಕೊಂಡಿರುವ ದಂಧೆಕೋರರು ಮಾಫಿಯಾ ದೊರೆಗಳು ರೌಡಿಶೀಟರ್ಗಳು ಕೆಲವೊಂದು ಅಕ್ರಮ ವ್ಯವಹಾರದ ನಟೋರಿಯಸ್ ಉದ್ಯಮಿಗಳು ಈಗ ಕೈಕಟ್ಟಿ ಕೂರುವಂತಾಗಿದೆ ಈ ಇಬ್ಬರು ಅಧಿಕಾರಿಗಳನ್ನು ಹೇಗಾದರೂ ಮಾಡಿ ವರ್ಗಾವಣೆಗೊಳಿಸಲು ದೊಡ್ಡ ಮಟ್ಟದಲ್ಲಿ ಲಾಭಿಗೆ ಮುಂದಾಗಿದ್ದಾರೆ.

ಇದಕ್ಕೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಕೆಲವೊಂದು ನಾಯಕರೂ ಕೂಡ ಸಾಥ್ ನೀಡಿ ಹಿರಿಯ ನಾಯಕರ ಬೆನ್ನು ಬಿದ್ದಿರುವ ಅಂಶ ಬೆಳಕಿಗೆ ಬಂದಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಕದಡಲು ಕಾರಣವೇ ಇಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆ.ಕೆಂಪಕಲ್ಲು ಗಣಿಗಾರಿಕೆ, ಸ್ಕಿಲ್ಗೇಮ್, ಇಸ್ಪೀಟ್ ಅಡ್ಡೆಗಳು.ಗಾಂಜಾ ಮತ್ತು ಮಾದಕವಸ್ತು ದಂಧೆಗಳು ಈ ಅಕ್ರಮ ದಂಧೆಗಳನ್ನು ಮೊದಲು ಮಟ್ಟ ಹಾಕುವಲ್ಲಿ ಪೊಲೀಸ್ ಅಧಿಕಾರಿಗಳು ತಮ್ಮದೇ ಶೈಲಿಯಲ್ಲಿ ಕಾರ್ಯಾಚರಣೆ ಆರಂಭಿಸಿ, ಅಕ್ರಮ ದಂಧೆಕೋರರನ್ನು ಹೆಡೆಮುರಿ ಕಟ್ಟಿದ್ದರು. ಇದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಕೇಲವು ರಾಜಕಾರಣಿಗಳಿಗೆ ದೊಡ್ಡಮಟ್ಟದ ಹೊಡೆತ ಬಿದ್ದಿದೆ.
ಸುಧೀರ್ ಕುಮಾರ್ ರೆಡ್ಡಿ ಮತ್ತು ಡಾ.ಅರುಣ್ ಜಿಲ್ಲೆಗೆ ಅಧಿಕಾರಿಗಳಾಗಿ ಬಂದ ಬಳಿಕ ಅಕ್ರಮ ದಂಧೆಕೋರರಿಗೆ ಉಸಿರಾಡಲು ಕಷ್ಟವಾಗಿದೆ. ಅಧಿಕಾರಿಗಳ ಖಡಕ್ ಕರ್ತವ್ಯಕ್ಕೆ ಬೆದರಿ ಅಕ್ರಮ ದಂಧೆಕೋರರು ಬಿಲ ಸೇರಿದ್ದಾರೆ ಇನ್ನೂ ಕೇಲವರು ಊರು ಬಿಟ್ಟಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಕ್ರಮ ದಂಧೆಗೆ ಬೀಗ ಬಿದ್ದಿದೆ ಈ ಹಿನ್ನೆಲೆಯಲ್ಲಿ ದಕ್ಷ ಅಧಿಕಾರಿಗಳ ವರ್ಗಾವಣೆಗೆ ದೊಡ್ಡಮಟ್ಟದಲ್ಲಿ ಹುನ್ನಾರ ನಡೆಯುತ್ತಿದೆ. ಮೊನ್ನೆ ಬಿಡುಗಡೆಯಾದ ವರ್ಗಾವಣೆ ಪಟ್ಟಿಯಲ್ಲಿ ಈ ಇಬ್ಬರು ಅಧಿಕಾರಿಗಳ ಹೆಸರು ಬರಹಹುದು ಎಂದು ಬಾರಿ ನಿರೀಕ್ಷೆಯಲ್ಲಿದ್ದ ದಂಧೆಕೋರರಿಗೆ ನಿರಾಸೆಯಾಗಿದೆ.! ಐಪಿಎಸ್, ಐಎಎಸ್ ದರ್ಜೆ ಅಧಿ ಕಾರಿಗಳನ್ನು ಡಿಸೆಂಬರ್ ನಲ್ಲಿ ಸಾಮೂಹಿಕ ವರ್ಗಾವಣೆ ಮಾಡಲಾಗುತ್ತದೆ.

ಹೀಗಿರುವಾಗ ದಕ್ಷಿಣ ಕನ್ನಡ ಎಸ್ಪಿ ಮತ್ತು ಮಂಗಳೂರು ಪೊಲೀಸ್ ಕಮಿಷನರ್ ಡಿಸೆಂಬರ್ ತಿಂಗಳಿನಲ್ಲಿ ಪ್ರಮೋಷನ್ ಅಥವಾ ವರ್ಗಾವಣೆ ಆಗಬಹುದು ಎಂಬ ನಿರೀಕ್ಷೆಯಲ್ಲಿ ಮಾಫಿಯಾ ದೊರೆಗಳಿಗೆ ಬುಡಕ್ಕೆ ಬೆಂಕಿಬಿದ್ದ ಹಾಗಾಗಿದೆ.!
ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮತ್ತು ಎಸ್ಪಿ ಡಾ.ಅರುಣ್ ಅವರನ್ನು ವರ್ಗಾವಣೆ ಮಾಡಿಸಲು ಜಿಲ್ಲಾ ಉಸ್ತುವಾರಿ ಸಚಿವರು, ಕೆಪಿಸಿಸಿ ಹಿರಿಯ ಮುಖಂಡರು ಸೇರಿದಂತೆ ಬೆಂಗಳೂರಿನ ಹಿರಿಯ ನಾಯಕರು ಮತ್ತು ಪ್ರಮುಖವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಇವರುಗಳನ್ನು ವರ್ಗಾವಣೆ ಮಾಡಲು ಯಾವುದೇ ಕಾರಣಕ್ಕೂ ಇಷ್ಟವಿಲ್ಲ ಎಂದು ತಿಳಿದು ಬಂದಿದೆ.
ರಾಜ್ಯ ಗೃಹ ಇಲಾಖೆಯಲ್ಲಿ ಪಶ್ಚಿಮ(ಮಂಗಳೂರು ಕಮಿಷನರೇಟ್ ಸೇರಿದಂತೆ) ಐಜಿಪಿ ವಲಯ ಸೂಕ್ಷ್ಮ ವಲಯವಾಗಿದ್ದು, ಈ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ. ಈ ಕಾರಣದಿಂದ ಯಾವುದೇ ಅಧಿಕಾರಿಗಳನ್ನು ಸದ್ಯದ ಮಟ್ಟಿಗೆ ವರ್ಗಾವಣೆ ಮಾಡದಿರಲು ಸಿಎಂ, ಡಿಜಿ ಸೇರಿದಂತೆ ಹಿರಿಯ ನಾಯಕರು, ಅಧಿಕಾರಿಗಳು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.ಕಳೆದ ಆರು ತಿಂಗಳಿಂದ ನೆಮ್ಮದಿಯಾಗಿ ಬದುಕುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಈ ಅಧಿಕಾರಿಗಳ ವರ್ಗಾವಣೆಯಾದರೆ ಬಿದಿಗಿಳಿದು ಹೋರಾಟಮಾಡಿದರು ಆಶ್ಚರ್ಯವಿಲ್ಲ ಅ ಮಟ್ಟಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆ ದಂಧೆಕೋರರನ್ನು ಮಾಫಿಯಾ ದೊರೆಗಳನ್ನು ರೌಡಿಶೀಟರ್ ಗಳನ್ನು ಮಟ್ಟಹಾಕಲು ರಾತ್ರಿ ಹಗಲೇನ್ನದೆ ಕರ್ತವ್ಯಕ್ಕೆ ಮುಂದಾಗಿದ್ದಾರೆ.


