

ಶಿವಮೊಗ್ಗ : ಮಂಡ್ಲಿ ಗ್ರಾಮದ ಸರ್ವೇ ನಂಬರ್ “42” ರಲ್ಲಿದ್ದ ಸುಮಾರು12 ಎಕರೆ ಕೆರೆ ಜಾಗ ಗುಳುಂ.!? ಕೆರೆ ಕಳ್ಳ ಕಾಂಗ್ರೆಸ್ ನಾಯಕನಿಗೆ ಸಚಿವರ ಕೃಪ ಕಟಾಕ್ಷ .! ಇಲ್ಲಿ ಅಧಿಕಾರಿಗಳು ತಿಂದುಂಡು ತೆಗಿದ್ದು ಎಷ್ಟು.?
news.ashwasurya.in
ಕಣ್ಮರೆ..! ಕೆರೆ ಕಣ್ಮರೆ 12 ಎಕರೆ ಕೆರೆ ಕಣ್ಮರೆ…. ಎನಿದು ಕಾಂಗ್ರೆಸ್ ನಾಯಕನ ಕೆರೆ ನುಂಗಿದ ಕಥೆ…..ಇದು ಲೇಔಟ್ ಹಂಗಾಮ ಕೆರೆ ಮಂಗ ಮಾಯ.!


ಅಶ್ವಸೂರ್ಯ/ಶಿವಮೊಗ್ಗ ; ಮಲೆನಾಡ ನಗರಿ
ಶಿವಮೊಗ್ಗ ನಗರದಲ್ಲಿ ವಾಹನಕಳ್ಳರು,ಮನೆ ಕಳ್ಳರು, ದರೋಡೆಕೋರರು.ಸರಕಳ್ಳತನವಾಗುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ಅಂದಾಜು ಹನ್ನೆರಡು (12 ಎಕರೆ) ಎಕರೆ ವಿಸ್ತಿರ್ಣದ ಕೆರೆಯೊಂದು ಇದ್ದಕ್ಕಿದ್ದಂತೆ ಕಣ್ಮರೆಯಾಗಿದೆ ಅಥವಾ ಕಳ್ಳತನವಾಗಿದೆ ಎಂದರೆ ಅದನ್ನು ಪವಾಡ ಅನ್ನಬೇಕೋ..? ದೈವಿಕ ಮಹಿಮೆ ಅನ್ನಬೇಕೋ..? ನೀವೆ ಊಹಿಸಿ. ತಮಾಷೆ ಎಂದರೆ ಕೆರೆ ಕಣ್ಮರೆಯಾದ
ವಿಸ್ಮಯವನ್ನು ಸ್ವತಃ ಶಿವಮೊಗ್ಗ ತಾಲ್ಲೂಕಿನ ತಾಲ್ಲೂಕು ಕಛೇರಿಯ ಪರಿಸರ ಕೋಶವೆ ತನ್ನ ಖಾಸಾ ವರದಿಯಲ್ಲಿ ಸ್ಪಷ್ಟಪಡಿಸಿದೆಯಂತೆ.!ಹೌದ.?
ಇನ್ನೂ ದೊಡ್ಡ ವಿಸ್ಮಯವೇನೆಂದರೆ ಕಣ್ಮರೆಯಾದ ಕೆರೆಯ ಸ್ವತು ಕೆಚ್ಚೆದೆಯ ಶಿವಪ್ಪನಾಯಕನ ಕಾಲದ್ದು ಸರ್ಕಾರಿ ಸ್ವತ್ತು. ನಾನು ಸಚಿವನಾಗಿ ಜಿಲ್ಲೆಯ ಸಮಸ್ತ ಅಭಿವೃದ್ಧಿಗೆ ಪಣ ತೊಟ್ಟಿರುವೆ ಎಂದೇ ಡಂಗೂರ ಸಾರುವ ಹಾಲಿ ಸಚಿವರೊಬ್ಬರು ಶಿವಮೊಗ್ಗ ನಗರದಿಂದ ಕೂಗಳತೆ ದೂರದಲ್ಲಿರುವ ಕಸಬ ಒಂದನೇ ಹೋಬಳಿ ಮಂಡ್ಲಿ ಗ್ರಾಮದ ಸರ್ವೆ ನಂಬರ್ – 42 ರಲ್ಲಿ ಇರುವ ಸುಮಾರು 12 ಎಕರೆ ಕೆರೆಯೆ ಕಣ್ಮರೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಸಚಿವರು, ಶಾಸಕರು, ಜನ ನಾಯಕರು ಕೆಚ್ಚೆದೆಯ ಶಿವಪ್ಪನಾಯಕನ ಕಾಲದ ಸರ್ಕಾರಿ ಸ್ವತ್ತುಗಳಾದ ಕೆರೆ-ಕಟ್ಟೆಗಳನ್ನು ಉಳಿಸಿ ಶಿವಪ್ಪನಾಯಕನ ಹೆಸರು ಅಜರಾಮರ ಮಾಡಬೇಕೆಂದು ಅನೇಕ ಸಲ ಬಹಿರಂಗ ಹೇಳಿಕೆ ನೀಡುತ್ತ ತಮ್ಮನ್ನು ತಾವು ಹೋಗಳಿಸಿಕೊಂಡು ಬಿಂಬಿಸಿಕೊಂಡರೆ ಹೊರತು ಜನನಾಯಕರ ಕೇಲವು ಹಿಂಬಾಲಕರೆ ಕೆರೆ ಕಟ್ಟೆ, ಗೊಮಾಳ,ಸರ್ಕಾರಿ ಜಾಗವನ್ನೆ ನುಂಗಿ ಜಬಡಿ ಹಾಕುತ್ತಿದ್ದಾರೆ ಎಂದರೆ ನೀವು ನಂಬಲೆ ಬೇಕು.!
ಈಗ ನೋಡಿದರೆ ಕಸಬ ಒಂದನೇ ಹೋಬಳಿ ಮಂಡ್ಲಿ ಗ್ರಾಮದ ಸರ್ವೆ ನಂಬರ್ – 42 ರಲ್ಲಿ ಇರುವ ಸುಮಾರು 12 ಎಕರೆ ವಿಸ್ತೀರ್ಣದ ಬೃಹತ್ ಕೆರೆಯೊಂದು ಸದ್ದಿಲ್ಲದೆ ಕಾಂಗ್ರೆಸ್ ನಾಯಕನೊಬ್ಬನ ಪಾಲಗುತಿದೆ.! ಕೆರೆ ಕಣ್ಮರೆಯಾಗಿದೆ..!!
18/10/2025 ರಂದು ಒತ್ತುವರಿಯಾಗಿದ್ದ ಸದರಿ ಕೆರೆಯ ಹನ್ನೆರಡು ಎಕರೆ ಕೆರೆ ಜಾಗವನ್ನು ಕಂದಾಯ ಇಲಾಖೆ ಮತ್ತು ಸರ್ವೇ ಇಲಾಖೆ ಪೋಲಿಸ್ ಫೋರ್ಸ್ ನೊಂದಿಗೆ ತೆರಳಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಒತ್ತುವರಿಯಾಗಿದ್ದ ಸುರೇಶ್ 12 ಎಕರೆ ಕೆರೆಯ ಜಾಗವನ್ನು ತೆರವು ಗೋಳಿಸಿದ್ದರು.ಸ್ಥಳೀಯರು ಕೂಡ ಅಧಿಕಾರಿಗಳ ಕರ್ತವ್ಯವನ್ನು ಮೆಚ್ಚ ಖುಷಿಪಟ್ಟಿದ್ದರು ಆದರೆ ಆದೇನು ಡೀಲ್ ಕುದರಿತೊ ಅಧಿಕಾರಿಗಳು ತೆರವು ಮಾಡಿದ ಹನ್ನೆರಡು ಎಕರೆ ಕೆರೆ ಜಾಗ ಕೇವಲ ಎಂಟತ್ತು ದಿನಗಳಲ್ಲಿ ಕಾಂಗ್ರೆಸ್ ನಾಯಕನ ಲೇಔಟ್ ಪಾಲಾಗಿದ್ದು ಕಬಳಿಸಿದ ಕೆರೆ ಜಾಗಕ್ಕೆ ತಂತಿ ಬೇಲಿ ಸುತ್ತಿ ಬಿಟ್ಟಿದ್ದಾನೆ.!
ಕೇವಲ ಹದಿನೈದಿಪ್ಪತ್ತು ವರ್ಷಗಳ ಹಿಂದೆ ನೀರಿನಿಂದ ತುಂಬಿ ತುಳುಕುತ್ತಿದ್ದ ಶಿವಪ್ಪನಾಯಕನ ಕಾಲದ ಕೆರೆ ಈಗ ಹನಿ ನೀರು ಕಾಣದೆ ಕೆರೆ ಕಣ್ಮರೆಯಾಗಿದ್ದು ಸರ್ಕಾರಿ ಸ್ವತ್ತು ಪುಡಿ ರಾಜಕಾರಣಿಯ ಪಾಲಾಗಿದೆ.!
ಸಚಿವರು ಸ್ಥಳೀಯ ಶಾಸಕರ ಮೌನವೇಕೆ.?

ಶಿವಮೊಗ್ಗ ನಗರದಲ್ಲಿ ದೊಡ್ಡಮಟ್ಟದಲ್ಲಿ ಸುಮಾರು 12 ಎಕರೆ ಕೆರೆ ಕಬಳಿಕೆಯಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಮತ್ತು ಶಿವಮೊಗ್ಗ ನಗರ ಕ್ಷೇತ್ರದ ಶಾಸಕರಾದ ಚನ್ನಬಸಪ್ಪ ನವರು ಮೌನವಾಗಿರಲು ಕಾರಣವೇನು ಅವರಿಗೂ ತಲುಪಿದಿಯಾ ಕಾಂಗ್ರೆಸ್ ನಾಯಕನ ಬಕ್ಷಿಸ್ಸು.!? ಅಥವಾ ಇವರುಗಳ ಗಮನಕ್ಕೆ ಬಾರದೆ ಈ ಕೆರೆ ಕಬಳಿಗೆಯ ಹಂಹಾಮ ನೆಡೆದಿದಿಯಾ.!?….
ಶಿವಮೊಗ್ಗ | ಕೆರೆ ಅತಿಕ್ರಮಣ ತೆರವಿಗೆ ಅಭಿಯಾನ ಆರಂಭವಾಗಲಿ

ಶಿವಮೊಗ್ಗ ನಗರ ಬೆಳೆಯುವುದರ ಜೋತೆ ಜೋತೆಗೆ ಕೆರೆಗಳು ಮತ್ತು ಸರ್ಕಾರಿ ಗೋಮಾಳ ಸರ್ಕಾರಿ ಸ್ವತ್ತುಗಳು ಕಂಡ ಕಂಡವರಿಂದ ಒತ್ತುವರಿ ಒಂದು ಗಂಭೀರ ಸಮಸ್ಯೆಯಾಗಿದ್ದು, ಸಾವಿರಾರು ಎಕರೆಗಳಷ್ಟು ಕೆರೆ, ಸರ್ಕಾರಿ ಭೂಮಿ ಮತ್ತು ಗೋಮಾಳ ಒತ್ತುವರಿಯಾಗಿವೆ.ಕೇಲವು ರಾಜಕಾರಣಿಗಳ ಮತ್ತು ಅವರ ಹಿಂಬಾಲಕರ ಲೇಔಟ್ ಗಳಿಗೆ ಹೊಂದಿಕೊಂಡಿರುವ ಕೆರೆಗಳು ರಾತ್ರೊ ರಾತ್ರಿ ಮಾಯಾವಾಗಿದ್ದು ಖದಿಮರ ಲೇಔಟ್ ಗಳಿಗೆ ಸೇರಿಸಿಕೊಂಡು ಬೇಲಿ ಹಾಕಲಾಗಿದೆ.!ಈ ಕೂಡಲೇ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಕೇಳಿಬರುತ್ತಿದೆ. ಪ್ರಮುಖವಾಗಿ, ನ್ಯಾಯಮೂರ್ತಿ ಎ.ಟಿ. ರಾಮಸ್ವಾಮಿ ಸಮಿತಿಯ ವರದಿಯಂತೆ ದೊಡ್ಡ ಪ್ರಮಾಣದ ಒತ್ತುವರಿಗಳಿದ್ದರೂ, ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ.
ನ್ಯಾ. ಎ.ಟಿ. ರಾಮಸ್ವಾಮಿ ಸಮಿತಿ ವರದಿಯ ಪ್ರಕಾರ ಮಹಾನಗರ ಬೆಂಗಳೂರಿನಂತೆ ಶಿವಮೊಗ್ಗ ನಗರದಲ್ಲಿಯು ದೊಡ್ಡ ಪ್ರಮಾಣದ ಒತ್ತುವರಿಗಳಿದ್ದರೂ,ಕಠಿಣ ಕ್ರಮ ಜರುಗಿಸ ಬೇಕಾದ ಅಧಿಕಾರಿಗಳೆ ಹಣದ ಪಿಂಡಿಗೆ ಕೈಯೊಡ್ಡಿ ಸೈಲೆಂಟಾಗಿ ಕುಳಿತು ಬಿಟ್ಟಿದ್ದಾರೆ.! ಅನುಷ್ಠಾನ ಕಾಗದದಲ್ಲೇ ಉಳಿದಿದೆ.
ಕೆರೆಗಳ ನೀರು ಸಂಗ್ರಹಣೆ ಸಾಮರ್ಥ್ಯ ಕುಗ್ಗುತ್ತಿದೆ.
ಪರಿಸರ ಸಮತೋಲನಕ್ಕೆ ಭಂಗ ಉಂಟಾಗುತ್ತಿದೆ.
ರೈತರ ಆಸ್ತಿಪಾಸ್ತಿ ನಷ್ಟವಾಗುತ್ತಿದೆ.ಸಂಬಂದ ಪಟ್ಟ ಅಧಿಕಾರಿಗಳು
ಒತ್ತುವರಿ ತೆರವುಗೊಳಿಸಿ ಅ ಜಾಗವನ್ನು ಪುನಃ ಕೆರೆಗಳಾಗಿ ಅಭಿವೃದ್ಧಿಪಡಿಸಬೇಕಿದೆ ಎಂದು ಪರಿಸರವಾದಿಗಳ ಕೂಗಾಗಿದೆ… ಈ ಕೆರೆಕಬಳಿಕೆ ಹಿಂದೆ ಕಾಂಗ್ರೆಸ್ ನಾಯಕನಿದ್ದು ಇತನಿಗೆ ಸಚಿವರು ಮತ್ತು ಕೆಲವು ಪುಡಾರಿಗಳ ಬೆಂಬಲವಿದೆ…ಇವನು ಯಾರು.? ಇವನ ಹಿನ್ನೆಲೆ ಎನು.? ಇವರ ರಿಯಲ್ ಎಸ್ಟೇಟ್ ದಂಧೆಗೆ ಕಾಂಗ್ರೆಸ್ ಲೇಬಲ್ ಅಯ್ತಾ.? ಇವನ ಬೆನ್ನಿಗೆ ನಿಂತ ನಾಯಕನಾರು ಇದೇನು ಕೆರೆ ಒತ್ತುವರಿಯ ಹಂಗಾಮ. ಇಲ್ಲಿ ಪುಗಸ್ಸಟ್ಟೆ ಸುಮಾರು12 ಎಕರೆ ಕೆರೆಜಾಗದಲ್ಲಿ ಯಾರ ಯಾರ ಪಾಲೇಷ್ಟು ಮತ್ತು ಕೆರೆ ಜಾಗವನ್ನು ನುಂಗಲು ಅಧಿಕಾರಿಗಳ ವರ್ಗ ಪಡೆದ ಹಣವೇಷ್ಟು.? ಲಕ್ಷ ಲಕ್ಷ ಲಂಚದ ಹಣಕ್ಕೆ ಬಿಕರಿ ಅಯ್ತಾ ಸರ್ಕಾರಿ ಸ್ವತ್ತು ಸುಮಾರು12 ಎಕರೆ ಕೆರೆ.!? ಎಲ್ಲವನ್ನೂ ನಿರೀಕ್ಷಿಸಿ ನಿಮ್ಮ ಅಶ್ವಸೂರ್ಯ ಭಾಗ -2 ರಲ್ಲಿ.

ಶಿವಮೊಗ್ಗ ಜಿಲ್ಲೆಯ ಕೆರೆ ಸಂರಕ್ಷಣಾ ಪಡೆಯ ಮುಖ್ಯಸ್ಥರು ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ, IAS ಅವರು ಈ ಕೂಡಲೇ ಕಸಬಾ ಒಂದನೇ ಹೋಬಳಿ ಮಂಡ್ಲಿ ಗ್ರಾಮದ ಸರ್ವೇ ನಂಬರ್ 42 ರಲ್ಲಿರುವ ಸುಮಾರು 12 ಎಕರೆ ಕೆರೆ ಜಾಗ ಪಕ್ಕದಲ್ಲೇ ಲೇಔಟ್ ಮಾಡುತ್ತಿರುವ ಕಾಂಗ್ರೆಸ್ ನಾಯಕನ ಪಾಲಗಿದ್ದು ಆತ ರಾತ್ರೊ ರಾತ್ರಿ ತನ್ನ ಸುಪರ್ದಿಯ ಜಾಗಕ್ಕೆ ಸೇರಿಸಿಕೊಂಡು ಬೇಲಿ ಸುತ್ತಿದ್ದು ಈ ಕೂಡಲೇ ಅಧಿಕಾರಿಗಳು ಮತ್ತು ಸಂಬಂದ ಪಟ್ಟ ಇಲಾಖೆಯವರು ಕಂಡವರ ಪಾಲಾಗಿರುವ ಸುಮಾರು “12” ಎಕರೆ ಕೆರೆ ಜಾಗವನ್ನು ತೆರವು ಗೋಳಿಸಬೇಕಿದೆ..ಇಲ್ಲವಾದಲ್ಲಿ ಪತ್ರಿಕೆ ನಿರಂತರ ಹೋರಾಟ ಮತ್ತು ಕೆರೆ ಉಳಿಸಿ ಸಮಿತಿಯವರಿಗೂ ಮಾಹಿತಿ ನೀಡಿ ಉಗ್ರ ಹೋರಾಟಕ್ಕೆ ಮುಂದಾಗಲಿದೆ..

