ಶಿವಮೊಗ್ಗ ರಂಗಾಯಣದ ಆತ್ಮೀಯ ಆಹ್ವಾನ: ನ.29ರಂದು ‘ಸೈಲೆನ್ಸ್… ಇಂಟರೆಪ್ಟೆಡ್’ ನಾಟಕ ಪ್ರದರ್ಶನ,ಸುವರ್ಣ ಸಂಸ್ಕೃತಿ ಭವನದಲ್ಲಿರುವ ಪಿ. ಲಂಕೇಶ್ ಬಯಲು ರಂಗಮಂದಿರದಲ್ಲಿ.
news.ashwasurya.in
ಅಶ್ವಸೂರ್ಯ | ಶಿವಮೊಗ್ಗ: ಶಿವಮೊಗ್ಗ ರಂಗಾಯಣದ ವತಿಯಿಂದ ನಾಟಕಾಸಕ್ತರಿಗೆ ಆತ್ಮೀಯ ಆಹ್ವಾನ ನೀಡಲಾಗಿದ್ದು, ಇದೇ ಭಾನುವಾರ (ನವೆಂಬರ್ 29) ಸಂಜೆ 6.30ಕ್ಕೆ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿರುವ ಪಿ. ಲಂಕೇಶ್ ಬಯಲು ರಂಗಮಂದಿರದಲ್ಲಿ ‘ಸೈಲೆನ್ಸ್… ಇಂಟರೆಪ್ಟೆಡ್’ ನಾಟಕ ಪ್ರದರ್ಶನಗೊಳ್ಳಲಿದೆ.
ಸಿರಿಗೇರಿಯ ಧಾತ್ರಿ ರಂಗ ಸಂಸ್ಥೆ ಪ್ರಸ್ತುತಪಡಿಸುವ ಈ ನಾಟಕವನ್ನು ಶೃತಿ ವಿ. ತಿಪಟೂರು ನಿರ್ದೇಶನ ಮಾಡಿದ್ದಾರೆ.

ನಾಟಕ ಪ್ರದರ್ಶನಕ್ಕೆ ಯಾವುದೇ ಸಭಾ ಕಾರ್ಯಕ್ರಮ ಇರುವುದಿಲ್ಲ. ಸಂಜೆ 6.30ಕ್ಕೆ ಸರಿಯಾಗಿ ನಾಟಕ ಆರಂಭವಾಗಲಿದ್ದು, ಪ್ರೇಕ್ಷಕರು ಸಮಯಕ್ಕೆ ಸರಿಯಾಗಿ ಆಗಮಿಸುವಂತೆ ಕೋರಲಾಗಿದೆ. ಪ್ರವೇಶ ಟಿಕೆಟ್ ದರ ಕೇವಲ 30 ರೂ. ನಿಗದಿಪಡಿಸಲಾಗಿದೆ.
ನಾಟಕಾಸಕ್ತರು, ಕಲಾಪ್ರೇಮಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಜೊತೆಗೆ ತಮ್ಮ ಗೆಳೆಯರು ಮತ್ತು ಸ್ನೇಹಿತರನ್ನೂ ಕರೆತರುವ ಮೂಲಕ ರಂಗಭೂಮಿ ಕಲೆಯನ್ನು ಪ್ರೋತ್ಸಾಹಿಸಬೇಕೆಂದು ಶಿವಮೊಗ್ಗ ರಂಗಾಯಣ ಆತ್ಮೀಯವಾಗಿ ಆಹ್ವಾನಿಸಿದೆ.

