Headlines

ತೀರ್ಥಹಳ್ಳಿ : ರಾವೆಯಲ್ಲಿ ಅಕ್ರಮ ಮರಳು ದಂಧೆಯ ಅಬ್ಬರ; ರಾತ್ರಿ-ಹಗಲೆನ್ನದೆ ರಾಜಾರೋಷವಾಗಿ ನಡೆಯುತ್ತಿರುವ ಅಕ್ರಮ ಮರಳು ದಂಧೆ! ಅಧಿಕಾರಿಗಳು, ಪೊಲೀಸರ ಮೌನಕ್ಕೆ ಕಾರಣವೇನು?

ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಈ ವಿಚಾರದಲ್ಲಿ ಮೌನ ವಹಿಸಿರುವುದೇಕೆ? ಅಕ್ರಮ ಮರಳು ದಂಧೆಕೋರರಿಗೆ ಯಾರ ಭಯವೂ ಇಲ್ಲವೇ? ಕಾನೂನಿನ ಕಣ್ಣಿಗೆ ಮಣ್ಣೆರಚಿ ರಾಜಾರೋಷವಾಗಿ ದಂಧೆ ನಡೆಸಲು ಇವರಿಗೆ ಬೆನ್ನೆಲುಬಾಗಿ ನಿಂತಿರುವವರು ಯಾರು?

ದಿನನಿತ್ಯ 30 ರಿಂದ 50 ಲೋಡ್ ಅಕ್ರಮ ಮರಳು ಸಾಗಾಟವಾಗುತ್ತಿದೆ.!! ಟೆಂಡರ್ ಕರೆದು ಸರ್ಕಾರದ ಅಧಿಕೃತ ಮರಳು ಕ್ವಾರೆಗಳನ್ನು ಹಂಚಿಕೆ ಮಾಡಬೇಕಾದ ಜಿಲ್ಲಾಡಳಿತ ಕೈಕಟ್ಟಿ ಕುಳಿತುಕೊಂಡ ಕಾರಣಕ್ಕೆ ಅಕ್ರಮ ಮರಳು ದಂಗೆಕೋರರ ಆರ್ಭಟ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮಿತಿಮೀರಿದೆ.

ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ನಡೆಯುತ್ತಿರುವ ಈ ಅಕ್ರಮ ದಂಧೆಗೆ ಕಡಿವಾಣ ಹಾಕುವವರು ಯಾರು? ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವರೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ರಾವೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಯ ಹಿಂದಿನ ಅಸಲಿ ಕಥೆ ಏನು? ಯಾರ ಪ್ರಭಾವ, ಯಾರ ರಕ್ಷಣೆ? ಅಧಿಕಾರಿಗಳ ಮೌನದ ಹಿಂದಿನ ಮರ್ಮವೇನು?

ತಮ್ಮ ಜವಾಬ್ದಾರಿಯನ್ನು ಮರೆತು ಹೊದ್ದು ಮಲಗಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಎಚ್ವರಿಸುವವರು ಯಾರು.?

Leave a Reply

Your email address will not be published. Required fields are marked *

Optimized by Optimole
error: Content is protected !!