ಅಕ್ರಮ ಮರಳು ಮಾಫಿಯಾ.!ಪಿಎಸ್ಐ ಪರೋಕ್ಷ ಬೆಂಬಲ ಆರೋಪ – ನಂಗಲಿ ಪಿಎಸ್‌ಐ, ಕಾನ್ಸ್‌ಟೇಬಲ್ ಅಮಾನತು.!

ಅಶ್ವಸೂರ್ಯ | ಕೋಲಾರ: ಬರ ಎದುರಾಗಿ ಕೋಲಾರದಲ್ಲಿ ಕೆರೆಗಳು ಖಾಲಿಯಾಗುತ್ತಿದ್ದಂತೆ ಅಕ್ರಮ ಫಿಲ್ಟರ್ ಮರಳು ಮಾಫಿಯಾ ಸದ್ದು ಜೋರಾಗಿದೆ. ಈ ಅಕ್ರಮ ಮರಳು ಮಾಫಿಯಾವನ್ನು ತಡೆಯುವಲ್ಲಿ ವಿಫಲವಾದ ಹಾಗೂ ಪರೋಕ್ಷ ಬೆಂಬಲದ ಆರೋಪದ ಮೇಲೆ ನಂಗಲಿ ಪೊಲೀಸ್ ಠಾಣೆಯ ಪಿಎಸ್‌ಐ (PSI) ಹಾಗೂ ಕಾನ್ಸ್‌ಟೇಬಲ್‌ (Constable)ಅವರನ್ನು ಅಮಾನತು ಮಾಡಲಾಗಿದೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ನಂಗಲಿ ಪೊಲೀಸ್ ಠಾಣೆಯ ಪಿಎಸ್‌ಐ ವಿದ್ಯಾಶ್ರೀ ಹಾಗೂ ನಂಗಲಿ ಠಾಣೆಯ ಎಸ್‌ಬಿ ಕಾನ್ಸ್‌ಟೇಬಲ್ ಪ್ರವೀಣ್ ಅವರನ್ನು ಅಮಾನತು ಮಾಡಲಾಗಿದೆ. ಕೋಲಾರ ಎಸ್ಪಿ ಕನ್ನಿಕಾ ಸಿಕ್ರಿವಾಲ್ ಅವರು ಅಮಾನತು ಆದೇಶ ಮಾಡಿದ್ದಾರೆ.
ಇನ್ನೂ ನಂಗಲಿ ದೊಡ್ಡಕೆರೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಫಿಲ್ಟರ್ ಅಡ್ಡೆ ಮೇಲೆ ಮುಳಬಾಗಿಲು ಎಎಸ್ಪಿ ಮೋನಿಷಾ ಶುಕ್ರವಾರ ರಾತ್ರಿ ದಾಳಿ ಮಾಡಿದ್ದರು. ದಾಳಿ ವೇಳೆ ಒಂದು ಟ್ರ್ಯಾಕ್ಟರ್ ಹಾಗೂ ಒಂದು ಜೆಸಿಬಿ ವಶಕ್ಕೆ ಪಡೆಯಲಾಗಿತ್ತು. ನಂತರ ಎಎಸ್ಪಿ ಮೋನಿಷಾ ನೀಡಿದ ವರದಿ ಹಿನ್ನೆಲೆ, ಕೋಲಾರ ಎಸ್ಪಿ ಕನ್ನಿಕಾ ಸಿಕ್ರಿವಾಲ್ ಅಮಾನತು ಮಾಡಿ ಆದೇಶ ಮಾಡಿದ್ದಾರೆ. ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆಯಿಂದ ಕೋಲಾರ ಪೊಲೀಸ್ ಇಲಾಖೆಯಲ್ಲಿ ಭ್ರಷ್ಟ ಅಧಿಕಾರಿಗಳಿಗೆ ನಡುಕ ಹುಟ್ಟಿದರೆ ಒಟ್ಟಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ.‌

Leave a Reply

Your email address will not be published. Required fields are marked *

Optimized by Optimole
error: Content is protected !!