ಬೆಂಗಳೂರು : ಸೌಜನ್ಯ ಪ್ರಕರಣದ ಮರು ತನಿಖೆಯಲ್ಲಿ ಮತ್ತೊಂದು ಬಿಗ್ ಟ್ವಿಸ್ಟ್: ಎಸ್ಐಟಿ ನೂತನ ಮುಖ್ಯಸ್ಥರಾಗಿ ಚೇತನ್ ಸಿಂಗ್ ರಾಥೋಡ್ ನೇಮಕ!
news.ashwasurya.in
ಸೌಜನ್ಯ ಪ್ರಕರಣದ ಮರು ತನಿಖೆ ಮತ್ತೊಂದು ತಿರುವು ಪಡೆದಿದ್ದು ಎಸ್ಐಟಿ ನೂತನ ಮುಖ್ಯಸ್ಥರಾಗಿ ಚೇತನ್ ಸಿಂಗ್ ರಾಥೋಡ್ ನೇಮಕವಾಗಿದ್ದಾರೆ!…
ಅಶ್ವಸೂರ್ಯ/ಮಂಗಳೂರು / : ದಕ್ಷಿಣ ಕನ್ನಡ ಜಿಲ್ಲೆಯ ಚರ್ಚಿತದ ಜೋತೆಗೆ ನಿಗೂಢವಾಗಿರುವ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ರಚಿಸಲಾಗಿದ್ದ ವಿಶೇಷ ತನಿಖಾ ತಂಡದ (SIT) ಮುಖ್ಯಸ್ಥರನ್ನು ರಾಜ್ಯ ಸರ್ಕಾರ ದಿಢೀರ್ ಬದಲಾವಣೆ ಮಾಡಿದ್ದು ನೂತನ ಅಧಿಕಾರಿಯನ್ನು ನೇಮಕ ಮಾಡಿದೆ.!
ಸಿಐಡಿ ಐಜಿಪಿ ಚೇತನ್ ಸಿಂಗ್ ರಾಥೋಡ್ ಅವರನ್ನು ಹೊಸ ಮುಖ್ಯಸ್ಥರನ್ನಾಗಿ ಮರು ನೇಮಕ ಮಾಡಲಾಗಿದೆ. ಹಾಸನ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (Addl SP) ಶ್ರೀನಿಧಿ ಅವರನ್ನು ತನಿಖಾ ತಂಡದ ಸದಸ್ಯರನ್ನಾಗಿ ನೇಮಿಸಲಾಗಿದೆ.
ಹಿಂದಿನ ಅಧಿಕಾರಿಗಳ ಬದಲಾವಣೆಗೆ ನಿರ್ಗಮನಕ್ಕೆ ಕಾರಣ.?: ಈ ಮೊದಲು ಎಸ್ಐಟಿ ಮುಖ್ಯಸ್ಥರಾಗಿ ಐಜಿಪಿ ಶಶಿಕುಮಾರ್ ಹಾಗೂ ವೆಂಕಟೇಶ್ ಪ್ರಸನ್ನ ಅವರನ್ನು ನೇಮಿಸಲಾಗಿತ್ತು. ಆದರೆ ಶಶಿಕುಮಾರ್ ಅವರ ನೇಮಕದ ಕುರಿತು ಕೆಲ ಹೋರಾಟಗಾರರು ಹಾಗೂ ಸಂಘಟನೆಗಳಿಂದ ಆಕ್ಷೇಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಜವಾಬ್ದಾರಿಯಿಂದ ತಮ್ಮನ್ನು ಕೈಬಿಡುವಂತೆ ಇಬ್ಬರೂ ಅಧಿಕಾರಿಗಳು ಸ್ವಯಂ ಸರ್ಕಾರಕ್ಕೆ ಮನವಿ ಮಾಡಿದ್ದರು. ಅಧಿಕಾರಿಗಳ ಕೋರಿಕೆಯನ್ನು ಪುರಸ್ಕರಿಸಿದ ಸರ್ಕಾರ, ಇಬ್ಬರನ್ನೂ ಎಸ್ಐಟಿಯಿಂದ ತೆರವುಗೊಳಿಸಿದೆ.

ಚುರುಕುಗೊಂಡ ಮರು ತನಿಖೆ & ಸಮನ್ಸ್: ಮರು ತನಿಖೆಯನ್ನು ತೀವ್ರಗೊಳಿಸಿರುವ ಎಸ್ಐಟಿ, ಪ್ರಕರಣದ ಆರಂಭಿಕ ಹಂತದಲ್ಲಿ ತನಿಖೆ ನಡೆಸಿದ್ದ ಕೆಳಹಂತದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.
ಪೊಲೀಸ್ ಸಿಬ್ಬಂದಿಯ ವಿಚಾರಣೆ ಬೆನ್ನಲ್ಲೇ ಫಾರೆನ್ಸಿಕ್ ತಂಡ (FSL) ಹಾಗೂ ವೈದ್ಯರ ವಿಚಾರಣೆ ನಡೆಸಲು ಎಸ್ಐಟಿ ಸಿದ್ಧತೆ ನಡೆಸಿದೆ.
ಸಮಯದ ಮಿತಿ: ಸೌಜನ್ಯ ಪ್ರಕರಣದ ಮರು ತನಿಖೆಯನ್ನು ಪೂರ್ಣಗೊಳಿಸಲು ಎಸ್ಐಟಿಗೆ ಇನ್ನು ಕೇವಲ 50 ರಿಂದ 60 ದಿನಗಳು ಮಾತ್ರ ಬಾಕಿ ಉಳಿದಿದ್ದು, ಎಲ್ಲಾ ಆಯಾಮಗಳಲ್ಲೂ ಸಾಕ್ಷ್ಯಾಧಾರ ಹಾಗೂ ಮಾಹಿತಿ ಸಂಗ್ರಹಿಸಲು ತನಿಖಾ ತಂಡ ಮುಂದಾಗಿದ್ದು ಮರು ತನಿಖೆ ಚುರುಕು ಗೊಂಡಿದೆ.
ಎಸ್ಐ (SI), ಎಎಸ್ಐ (ASI), ಪಿಸಿ (PC), ಹೆಡ್ ಕಾನ್ಸ್ಟೇಬಲ್ ಹಾಗೂ ರೈಟರ್ಗಳು ಸೇರಿದಂತೆ ಸುಮಾರು 8 ಅಧಿಕಾರಿ/ಸಿಬ್ಬಂದಿಗಳಿಗೆ ಬುಲಾವ್ ನೀಡಲಾಗಿದೆ.