ಶಿವಮೊಗ್ಗ ದಸರಾ : ಮದವೇರಿದ ಆನೆ ಸೋಮ.! ಎಲ್ಲೆಂದರಲ್ಲಿ ಓಡಿ ಅಂಬಾರಿ ಕಳಚಿ ಬಿದ್ದು ಚಾಮುಂಡೇಶ್ವರಿ ವಿಗ್ರಹಕ್ಕೆ ಹಾನಿ.

news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ದಸರಾದಲ್ಲಿ ವಿಘ್ನ ಎದುರಾಗಿದೆ. ಅದ್ಧೂರಿಯಾಗಿ ಯಾವುದೇ ತೊಂದರೆ ಇಲ್ಲದೆ ನಡೆಯಬೇಕಿದ್ದ ದಸರಾದಲ್ಲಿ ಅಂಬಾರಿ ಹೊತ್ತ ಸೋಮ ಹುಚ್ಚೆದ್ದು ಓಡಿದ್ದರಿಂದ ಸೋಮ ಹೊತ್ತಿದ್ದ ಚಾಮುಂಡೇಶ್ವರಿ ದೇವಿ ಇದ್ದ ಮಂಟಪ ನೆಲಕ್ಕೆ ಉರುಳಿಬಿದ್ದು ದೇವಿಯ ವಿಗ್ರಹಕ್ಕೆ ಹಾನಿಯಾಗಿದೆ.! ಅಂಬಾರಿ ಬಿದ್ದ ರಭಸಕ್ಕೆ ದೇವಿ ಚಾಮಂಡೇಶ್ವರಿ ದೇವಿಯ ಕೈ ಮುರಿದು ಹಾನಿಯಾಗಿದೆ.
ಈ ಘಟನೆಯಿಂದ ಶಿವಮೊಗ್ಗ ಜನತೆಯಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಈ ವಿಘ್ನದಿಂದ ಅಪಶಕುನ ನುಡಿದಿದೆ ಅನ್ನೋ ಮಾತಗಳು ಕೇಳಿಬರುತ್ತಿದೆ. ಅಂಬಾರಿಯಲ್ಲಿ ಮೆರವಣಿಗೆ ಮೂಲಕ ಸಾಗಬೇಕಿದ್ದ ದೇವಿ ಚಾಮಂಡೇಶ್ವರಿ ವಿಗ್ರಹವೂ ಅಂಬಾರಿ ಹೊತ್ತ ಸೋಮ ಮದವೇರಿ ವಿಚಿತ್ರವಾಗಿ ವರ್ತಿಸಿದ ಕಾರಣಕ್ಕೆ ಅಂಬಾರಿ ಕೆಳಗೆ ಬಿದ್ದು ಅಮ್ಮನ ವಿಗ್ರಹದ ಕೈ ಮುರಿದು ವಿಗ್ರಹಕ್ಕೆ ಹಾನಿಯಾಗಿದೆ. ಇತ್ತ ಆನೆಯ ಮಾವುತನೂ ಬಿದ್ದು ಗಾಯಗೊಂಡಿದ್ದಾನೆ.
ಶಿವಮೊಗ್ಗದ ದಸರಾ ಪ್ರತಿ ವರ್ಷದಿಂದ ಈ ವರ್ಷವೂ ಅದ್ದೂರಿಯಾಗಿ ಆರಂಭಗೊಂಡಿತ್ತು. ಕಳೆದ ಆರು ವರ್ಷಗಳಿಂದ ಸಾಗರ್ ಆನೆ ಶಿವಮೊಗ್ಗ ದಸರಾದ ಅಂಬಾರಿ ಜವಾಬ್ದಾರಿ ಹೊತ್ತಿತ್ತು.ಆದರೆ ಈ ಬಾರಿ ಕಾಲು ನೋವಿನ ಪರಿಣಾಮ ಆನೆ ಸೋಮನಿಗೆ ಅಂಬಾರಿ ಹೋರುವ ಜವಾಬ್ದಾರಿ ನೀಡಲಾಗಿತ್ತು. ಆನೆಯ ಅಂಬಾರಿ ಮೆರವಣಿಗೆ ಚಾಲನೆ ಸಿಕ್ಕ ಕೆಲವೇ ಹೊತ್ತಲ್ಲಿ ಈ ಅವಘಡ ಸಂಭವಿಸಿದೆ.
ಅಂಬಾರಿ ಹೊತ್ತ ಸೋಮಣ್ಣ ಆನೆ ಭಯದಿಂದ ದಿಕ್ಕಾಪಾಲಾಗಿ ಓಡಲು ಆರಂಭಿಸಿದೆ. ಆನೆಯನ್ನು ನಿಯಂತ್ರಿಸಲು ಮಾವುತರು ಅರಣ್ಯ ಇಲಾಖೆಯ ಸಿಬ್ಬಂದಿಗಳು ಇನ್ನಿಲ್ಲದ ಪ್ರಯತ್ನ ಮಾಡಿದ್ದಾರೆ. ಆದರೆ ಸಾಧ್ಯವಾಗಿಲ್ಲ ಆನೆ ಒಂದೇ ಸಮನೇ ಒಡಲು ಆರಂಭಿಸಿದಾಗ ಕಟ್ಟಿದ್ದ ಅಂಬಾನಿ ಕಳಚಿ ಬಿದ್ದಿದೆ.ಅಂಬಾರಿ ಕಳಚಿ ಬೀಳುತ್ತಿದ್ದಂತೆ ಮಾವುತ ಕೂಡ ಆನೆಯಿಂದ ಬಿದ್ದಿದ್ದಾನೆ. ಅಂಬಾರಿಯಲ್ಲಿ ಮೆರವಣಿಗೆ ಮೂಲಕ ಸಾಗಬೇಕಿದ್ದ ದೇವಿ ಚಾಮಂಡೇಶ್ವರಿ ವಿಗ್ರಹವೂ ಕೆಳಕ್ಕೆ ಬಿದ್ದಿದೆ. ಆನೆ ಮೇಲಿಂದ ಬಿದ್ದ ರಭಸಕ್ಕೆ ಚಾಮಂಡೇಶ್ವರಿ ದೇವಿಯ ವಿಗ್ರಹದ ಕೈ ಮುರಿದಿದೆ. ಇತ್ತ ಅಂಬಾರಿ ಬಿದ್ದು ಕೆಲ ವಾಹನಗಳು ಜಖಂಗೊಂಡಿದೆ. ಇತ್ತ ಆನೆ ಹೋದ ರಭಸಕ್ಕೂ ಕೆಲ ವಾಹನ ಜಖಂಗೊಂಡಿದೆ. ದೇವಿ ವಿಗ್ರಹ ಹಾಗೂ ಮುರಿದ ಕೈಗಳನ್ನು ಸ್ಥಳೀಯರು ಹಾಗೂ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದಾರೆ. ಅಂಬಾರಿ ಕಳಚಿ ಬಿದ್ದಿದ್ದು ಮಾತ್ರವಲ್ಲ, ಚಾಮುಂಡೇಶ್ವರಿ ವಿಗ್ರಹಕ್ಕೆ ಹಾನಿ, ಮಾವುತನಿಗೆ ಗಾಯ ಘಟನೆಗಳು ಅಪಶಕುನ ದ ಮುನ್ಸೂಚನೆ ಎಂಬ ಮಾತುಗಳು ಕೇಳಿಬರುತ್ತಿದೆ.
ಅದೇನೆ ಇರಲಿ ಇದು ಅರಣ್ಯ ಇಲಾಖೆಯವರ ದಿಢೀರ್ ನಿರ್ಧಾರದಿಂದ ಈ ಘಟನೆ ನೆಡೆದಿದೆ.ಕಾಕಷ್ಟು ತಾಲಿಮು ನೆಡೆಸದೆ ಸೋಮನ ಮೇಲೆ 450 ಕೆಜಿ ತೂಕದ ಅಂಬಾರಿ ಹೋರಿಸಿದ್ದಾರೆ.ಆರಂಭದಲ್ಲೇ ಚಾಮುಂಡೇಶ್ವರಿ ದೇವಿ ಇದ್ದ ಅಂಬಾರಿ ಹೊತ್ತಂತ ಸೋಮ ಜನರನ್ನು ಅಲ್ಲಿಯ ಗಲಾಟೆಯನ್ನು ನೋಡಿ ಗಾಬರಿಯಾಗಿ ಈ ರೀತಿಯಾಗಿ ವರ್ತಿಸಿದೆ. ಇದಕ್ಕೆ ಕಾರಣ ಅರಣ್ಯ ಇಲಾಖೆಯವರ ಬೇಜವಬ್ದಾರಿ ತನ ಎನ್ನುವುದಂತು ಸತ್ಯ. ಬೇಜವಬ್ದಾರಿ ತೋರಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.ಸಧ್ಯ ನೆರೆದಿದ್ದ ಜನರೇಡೆಗೆ ಸೋಮ ನುಗ್ಗಿದ್ದರೆ ದೊಡ್ಡ ಅನಾಹುತವೆ ನಡೆದು ಹೋಗುತ್ತಿತ್ತು ತಾಯಿ ಚಾಮುಂಡೇಶ್ವರಿ ದೇವಿಯ ಅನುಗ್ರಹದಿಂದ ಸಣ್ಣ ಪ್ರಮಾಣದ ಹಾನಿಯಾಗಿದೆ.


