Headlines

ಉತ್ತರ ಕೋರಿಯಾದ ನಾಯಕ ಕಿಮ್ ಜಾಂಗ್-ಉನ್ ನಿಧನ? ಸಹೋದರಿ ಕೈಗೆ ಆಡಳಿತ! ಬಿಕ್ಕಟ್ಟಿನ ಭೀತಿ 9,000 ಚೀನಾ ಸೈನಿಕರ ನಿಯೋಜನೆ.!!

ಅಶ್ವಸೂರ್ಯ/ : ಉತ್ತರ ಕೋರಿಯದ ಪ್ರಬಲ‌ ಅಧ್ಯಕ್ಷ ಕಿಮ್ ಜಾಂಗ್-ಉನ್ ಅವರಿಗೆ ತೀವ್ರವಾದ ಮಿದುಳಿನ ರಕ್ತಸ್ರಾವ (cerebral haemorrhage) ಉಂಟಾಗಿ ಅವರು ಕೋಮಾಗೆ ಜಾರಿದ್ದರು ಮತ್ತು ತುರ್ತು ವೈದ್ಯಕೀಯ ಚಿಕಿತ್ಸೆ ಫಲಿಸದ ಹಿನ್ನೆಲೆಯಲ್ಲಿ ಮೃತಪಟ್ಟರು ಎಂದು ವರದಿಯಾಗಿದೆ.
ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್-ಉನ್ ಮೃತಪಟ್ಟಿದ್ದಾರೆ ಎಂಬಂತಹ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಉತ್ತರಾಧಿಕಾರ ಬಿಕ್ಕಟ್ಟಿನ ಭೀತಿಯ ನಡುವೆ ಅವರ ಸಹೋದರಿ ಕಿಮ್ ಯೋ-ಜಾಂಗ್ ಆಡಳಿತದ ನಿಯಂತ್ರಣವನ್ನು ವಹಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಚೀನಾವು ಪ್ಯೊಂಗ್ಯಾಂಗ್‌ಗೆ 9,000 ಸೈನಿಕರನ್ನು ನಿಯೋಜಿಸಿದೆ ಎಂದೂ ಹೇಳಲಾಗುತ್ತಿದ್ದು ಸತ್ಯಾಂಶ ಹೊರಬಿಳಬೇಕಿದೆ.
‘ಚೀನಾ ಡೆಮಾಕ್ರಸಿ ಪಾರ್ಟಿ’ಯ (CDP) ಅಧ್ಯಕ್ಷರಾದ ವಾಂಜುನ್ ಕ್ಸೀ ಸಾಮಾಜಿಕ ಜಾಲತಾಣವೊಂದರಲ್ಲಿ ಈ ಹೇಳಿಕೆ ನೀಡಿದ್ದಾರೆ. ಕಿಮ್ ಜಾಂಗ್-ಉನ್ ಅವರಿಗೆ ತೀವ್ರವಾದ ಮಿದುಳಿನ ರಕ್ತಸ್ರಾವ (cerebral haemorrhage) ಉಂಟಾಗಿ ಅವರು ಕೋಮಾಗೆ ಜಾರಿದ್ದರು ಮತ್ತು ತುರ್ತು ವೈದ್ಯಕೀಯ ಚಿಕಿತ್ಸೆಯ ನಂತರ ಮೃತಪಟ್ಟರು ಎಂದು ಅವರು ಹೇಳಿಕೊಂಡಿದ್ದಾರೆ.
ಕಿಮ್ ಜಾಂಗ್-ಉನ್ ಅವರ ಮಗಳಾದ ಕಿಮ್ ಜು-ಏ ಬದಲಿಗೆ ಸಹೋದರಿ ಕಿಮ್ ಯೋ-ಜಾಂಗ್ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ ಎಂದೂ ಕ್ಸೀ ಆರೋಪಿಸಿದ್ದಾರೆ. ಆದಾಗ್ಯೂ, ಈ ಹೇಳಿಕೆಗಳು ಇನ್ನೂ ದೃಢಪಟ್ಟಿಲ್ಲ. ಕಿಮ್ ಜಾಂಗ್-ಉನ್ ಮೃತಪಟ್ಟಿದ್ದಾರೆ, ಅವರ ಸಹೋದರಿ ಅಧಿಕಾರ ವಹಿಸಿಕೊಂಡಿದ್ದಾರೆ ಅಥವಾ ಚೀನಾದ ಸೈನಿಕರನ್ನು ಉತ್ತರ ಕೊರಿಯಾಕ್ಕೆ ನಿಯೋಜಿಸಲಾಗಿದೆ ಎಂಬುದಕ್ಕೆ ಯಾವುದೇ ಅಧಿಕೃತ ಮಾಹಿತಿ ಇನ್ನೂ ಸಿಕ್ಕಿಲ್ಲ.
ಕಿಮ್ ಜಾಂಗ್-ಉನ್ ಸಾವಿನ ಬಗ್ಗೆ ವಾಂಜುನ್ ಕ್ಸೀ ಹೇಳಿಕೆಗಳು: ಕ್ಸೀ ಪ್ರಕಾರ, ಕಿಮ್ ಜಾಂಗ್-ಉನ್ ಅವರಿಗೆ ಇದ್ದಕ್ಕಿದ್ದಂತೆ ಮೆದುಳಿನ ರಕ್ತಸ್ರಾವ ಉಂಟಾಗಿ ಅವರು ಕೋಮಾಗೆ ಜಾರಿದರು. ಉತ್ತರ ಕೊರಿಯಾದಲ್ಲಿನ ವೈದ್ಯಕೀಯ ಸೌಲಭ್ಯಗಳು ನಾಯಕನ ಸ್ಥಿತಿಗೆ ಅಗತ್ಯವಾದ ಚಿಕಿತ್ಸೆ ನೀಡಲು ಸಾಧ್ಯವಾಗದಿದ್ದರಿಂದ, ಚೀನಾದಿಂದ ವೈದ್ಯಕೀಯ ನೆರವು ಕೋರಿತು.’ಪೀಕಿಂಗ್ ಯೂನಿಯನ್ ಮೆಡಿಕಲ್ ಕಾಲೇಜ್ ಆಸ್ಪತ್ರೆ’ಯ ವೈದ್ಯಕೀಯ ತಜ್ಞರ ತಂಡವೊಂದನ್ನು ಉತ್ತರ ಕೊರಿಯಾಕ್ಕೆ ಕಳುಹಿಸಲಾಯಿತು ಎಂದು ಕ್ಸೀ ಹೇಳಿದ್ದಾರೆ.

ಅಧಿಕೃತ ಆಧಾರಗಳು ಲಭ್ಯವಾಗಿಲ್ಲ :
ಈ ಎಲ್ಲಾ ಆರೋಪಗಳು ಮತ್ತು ಊಹಾಪೋಹಗಳ ನಡುವೆಯೂ, ಕಿಮ್ ಜಾಂಗ್-ಉನ್ ಅವರ ನಿಧನ ಅಥವಾ ಚೀನಾ ಸೈನ್ಯ ನಿಯೋಜನೆಯ ಬಗ್ಗೆ ಯಾವುದೇ ಅಧಿಕೃತ ಆಧಾರಗಳು ಲಭ್ಯವಾಗಿಲ್ಲ. ಉತ್ತರ ಕೊರಿಯಾದ ಸರ್ಕಾರಿ ಮಾಧ್ಯಮಗಳು ಇತ್ತೀಚೆಗೆ ಕಿಮ್ ಜಾಂಗ್-ಉನ್ ಅವರು ತಮ್ಮ ಪತ್ನಿ ರಿ ಸೋಲ್-ಜು ಮತ್ತು ಪುತ್ರಿ ಕಿಮ್ ಜು-ಎ ಅವರೊಂದಿಗೆ ರಾಷ್ಟ್ರೀಯ ಉಡುಪು ಮತ್ತು ಪಾದರಕ್ಷೆಗಳ ಪ್ರದರ್ಶನದಲ್ಲಿ ಭಾಗವಹಿಸಿರುವ ಕಾರ್ಯಕ್ರಮಗಳ ಚಿತ್ರಗಳನ್ನು ಬಿಡುಗಡೆ ಮಾಡಿವೆ.
ದಕ್ಷಿಣ ಕೊರಿಯಾದ ಗುಪ್ತಚರ ಸಂಸ್ಥೆಗಳು ಸಹ ಕಿಮ್ ಸಕ್ರಿಯರಾಗಿದ್ದಾರೆ ಎಂದೇ ಹೇಳುತ್ತಿವೆ. ಪ್ರಪಂಚದ ಅತ್ಯಂತ ರಹಸ್ಯಮಯ ದೇಶಗಳಲ್ಲಿ ಒಂದಾದ ಉತ್ತರ ಕೊರಿಯಾದ ಸುತ್ತ ಇಂತಹ ವದಂತಿಗಳು ಹುಟ್ಟುವುದು ಹೊಸದೇನಲ್ಲವಾದರೂ, ಈ ಬಾರಿಯ ಬೆಳವಣಿಗೆಗಳನ್ನು ಜಾಗತಿಕ ಸಮುದಾಯ ಸೂಕ್ಷ್ಮವಾಗಿ ಗಮನಿಸುತ್ತಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!