ಶಿವಮೊಗ್ಗ : ಅ.29 ರಂದು ಜಿಲ್ಲಾ ಮಟ್ಟದ ಯುವಜನೋತ್ಸವ.

news.ashwasurya.in
ಅಶ್ವಸೂರ್ಯ/ಶಿವಮೊಗ್ಗ, ಅ. 14: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈಭಾರತ್ ಹಾಗೂ ಎನ್.ಎಸ್.ಎಸ್. ಘಟಗಳ ಸಹಯೋಗದಲ್ಲಿ ಅ.29 ರಂದು ಬೆಳಗ್ಗೆ 9 ಗಂಟೆಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ 2026-27ನೇ ಸಾಲಿನ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಯುವಜನೋತ್ಸವದಲ್ಲಿ ಜಾನಪದ ನೃತ್ಯ: 7+3 10 ಜನರ ಗುಂಪು ಸ್ಪರ್ಧೆ,5 ರಿಂದ 8 ನಿಮಿಷಗಳ ನೃತ್ಯ, (ಕ್ಯಾಸೆಟ್, ಪೆನ್ಡ್ರೈವ್, ಸಿಡಿ ಹಾಡುಗಳಿಗೆ ಅವಕಾಶವಿರುವುದಿಲ್ಲ).ಪ್ರಥಮ ಬಹುಮಾನ-ರೂ.8000/-, ದ್ವಿತೀಯ ರೂ.3000/-, ತೃತೀಯ-ರೂ.2000/-.
ಜಾನಪದ ಗೀತೆ: 7+3 10 ಜನರ ತಂಡವು 5 ರಿಂದ 8 ನಿಮಿಷಗಳ ಗೀತೆ (ಯಾವುದೇ ಸಿನಿಮಾ ಹಾಡುಗಳನ್ನು ಪ್ರಸ್ತುತಪಡಿಸುವಂತಿಲ್ಲ ಹಾಗೂ ಹಾಡುಗಳಲ್ಲಿ ಸಿನಿಮಾ ಮಿಶ್ರಣಕ್ಕೆ ಅವಕಾಶವಿರುವುದಿಲ್ಲ). ಪ್ರಥಮ ಬಹುಮಾನ ರೂ.5000/-, ದ್ವಿತೀಯ-ರೂ.3000/-, ತೃತೀಯ ರೂ.2000/-.
ಚಿತ್ರಕಲೆ: ಒಬ್ಬರಿಗೆ ವೈಯಕ್ತಿಕ 6 ಗಂಟೆಗಳ ಅವಧಿ. ಪ್ರಥಮ ಬಹುಮಾನ-ರೂ.3000/-, ದ್ವಿತೀಯ – ರೂ.2000/-, ತೃತೀಯ-ರೂ.1000/-.
ಕವಿತೆ ಬರೆಯುವುದು ವೈಯಕ್ತಿಕ 90 ನಿಮಿಷಗಳ ಅವಧಿ ಇರುತ್ತದೆ. ಪ್ರಥಮ ಬಹುಮಾನ-ರೂ.3000/-, ದ್ವಿತೀಯ – ರೂ. 2000/-, ತೃತೀಯ – ರೂ.1000/-.

ನುಕ್ಕಾಡ್ ನಾಟಕ: ‘ನಶಾ ಮುಕ್ತ ಯುವ’ಎಂಬ ವಿಷಯ ಕುರಿತು 10 ಜನರ ಗುಂಪು ಸ್ಫರ್ಧೆ, 7ನಿಮಿಷಗಳ ಅವಧಿ ಇರುತ್ತದೆ.ಪ್ರಥಮ ಬಹುಮಾನ-ರೂ.8000/-, ದ್ವಿತೀಯ-ರೂ.3000/-, ತೃತೀಯ-ರೂ.2000/- ಇರುತ್ತದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಯುವಕ/ಯುವತಿಯರು 15 ರಿಂದ 29 ವರ್ಷ ವಯೋಮಿತಿಯೊಳಗಿರಬೇಕು. ನೋಂದಣಿ ಸಮಯದಲ್ಲಿ ವಯಸ್ಸಿನ ದೃಢೀಕರಣ, ಆಧಾರ್ ಕಾರ್ಡ್/ಎಸ್.ಎಸ್.ಎಲ್.ಸಿ. ಅಂಕಪಟ್ಟಿ/ ಜನನ ಪ್ರಮಾಣ ಪತ್ರ ಇವುಗಳಲ್ಲಿ ಯಾವುದಾದರೊಂದು ದಾಖಲೆಯನ್ನು ಸಲ್ಲಿಸಬೇಕು. ಶಿವಮೊಗ್ಗ ಜಿಲ್ಲೆಯವರಾಗಿರಬೇಕು. ಅಥವಾ ಅನ್ಯ ಜಿಲ್ಲೆಯವರು ಭಾಗವಹಿಸಿದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿರುವ, ಕರ್ತವ್ಯ ಮಾಡುತ್ತಿರುವ ಬಗ್ಗೆ ಸಂಸ್ಥೆಯಿಂದ ಗುರುತಿನ ಚೀಟಿ/ದೃಢೀಕರಣ ಪತ್ರ ಸಲ್ಲಿಸಬೇಕು. ರಾಷ್ಟ್ರ ಮಟ್ಟದ ಯುವಜನೋತ್ಸವದಲ್ಲಿ ಸತತವಾಗಿ ಮೂರು ವರ್ಷಗಳು ಭಾಗವಹಿಸಿದ್ದು, ಅಥವಾ ಒಂದು ಬಾರಿ ಪದಕ ಪಡೆದಿದ್ದರೆ, ಅಂತಹ ಯುವ ಜನರು ಭಾಗವಹಿಸುವಂತಿಲ್ಲ. ತೀರ್ಪುಗಾರರ ತೀರ್ಮಾನವೇ ಅಂತಿಮ.
ಭಾಗವಹಿಸುವವರು ದಿ: 29/10/2026 ರ ಬೆಳಗ್ಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.:9845863549/7619638472 ಗಳನ್ನು ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


