Headlines

ಶಿವಮೊಗ್ಗ ದಸರಾ ಉದ್ಘಾಟಿಸಿದ ನಟ ಶ್ರೀನಾಥ್: ವಂದೇ ಮಾತರಂ ಪೂರ್ಣ ಗೀತೆ ಗಾಯನಕ್ಕೆ ಆಕ್ಷೇಪಿಸಿ ವೇದಿಕೆಯಿಂದ ನಿರ್ಗಮಿಸಿದ ಕಾಂಗ್ರೆಸ್ ನಾಯಕರು.!

ದಸರಾ ಕಾರ್ಯಕ್ರಮ ಬಹಿಷ್ಕಾರಿಸಿದ್ದಾರೆ. ಶಿವಮೊಗ್ಗದ ಕೋಟೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ದಸರಾ ಕಾರ್ಯಕ್ರಮ ನಿಗದಿ ಮಾಡಲಾಗಿತ್ತು. ಹಿರಿಯ ನಟ ಶ್ರೀನಾಥ್, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಚೆನ್ನಬಸಪ್ಪ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಇದು ರಾಜ್ಯ ಸರ್ಕಾರದ ಕಾರ್ಯಕ್ರಮ. ಇಲ್ಲಿ ರಾಜ್ಯ ಸರ್ಕಾರದ ಆದೇಶ ಪಾಲಿಸದೇ ವಂದೇ ಮಾತರಂ ಗೀತೆ ಪೂರ್ಣ ಹಾಡಲು ಅವಕಾಶ ನೀಡಲಾಗಿದೆ ಎನ್ನುವುದು ಕಾಂಗ್ರೇಸ್ಸಿಗರ ವಾದ.
ಇವರಿವರ ರಾಜಕೀಯ ತಿಕ್ಕಾಟಕ್ಕೆ ಶಿವಮೊಗ್ಗ ನಗರದ ನಾಗರಿಕರು ಭಾಗವಹಿಸಿ ವರ್ಷಕ್ಕೊಮ್ಮೆ ಸಂತೋಷ, ಸಡಗರ ಸಂಭ್ರಮದಿಂದ ಆಚರಿಸುವ ದಸರಾ ಕಾರ್ಯಗಳನ್ನು ಹಾಳು ಮಾಡುವುದು ಸರಿ ಅಲ್ಲ, ಶಿವಮೊಗ್ಗ ನಗರದಲ್ಲಿ 9 ದಿನಗಳ ಕಾಲ ನೆಡೆಯುವ ಅದ್ದೂರಿ ದಸರಾ ಕಾರ್ಯಕ್ರಮಗಳನ್ನು ಯಾವುದೇ ಪಕ್ಷದವರು ಹಾಳುಗೇಡವಲು ಮುಂದಾಗಬೇಡಿ, ಇದು ಶಿವಮೊಗ್ಗ ನಗರದ ನಾಗರಿಕರ ಹೆಮ್ಮೆಯ ದಸರಾ‌ ಉತ್ಸವ.

ಈ ವಿವಾದ ಶಿವಮೊಗ್ಗ ದಸರಾಕ್ಕೆ ಮಾತ್ರ ಸೀಮಿತವಾಗಿಲ್ಲ. ಸೆಪ್ಟೆಂಬರ್‌ನಲ್ಲಿ ನಡೆದ ಮುಖ್ಯಮಂತ್ರಿಳು ಉಪಸ್ಥಿತರಿದ್ದ ತೀರ್ಥಹಳ್ಳಿ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆಯನ್ನು ಎರಡು ಚರಣಗಳಿಗೆ ಸೀಮಿತಗೊಳಿಸಿದ್ದಕ್ಕೆ ಶಿವಮೊಗ್ಗದ ಬಿಜೆಪಿ ಶಾಸಕ ಎಸ್.ಎನ್. ಚನ್ನಬಸಪ್ಪ ಆಕ್ಷೇಪ ವ್ಯಕ್ತಪಡಿಸಿ ಕಾರ್ಯಕ್ರಮದಿಂದ ಹೊರನಡೆದಿದ್ದರು.
ಅದೇ ರೀತಿ, ಕರ್ನಾಟಕ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ವಿಶೇಷ ಅಧಿವೇಶನದ ಆರಂಭದಲ್ಲಿಯೂ ಗೀತೆಯ ಎರಡು ಚರಣಗಳನ್ನು ಮಾತ್ರ ಹಾಡಿದ ವಿಚಾರಕ್ಕೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿ, ಉಳಿದ ಚರಣಗಳನ್ನು ಹಾಡಿದ್ದರು.
ಒಂದೆಡೆ, ರಾಜ್ಯ ಸರ್ಕಾರ ತನ್ನ ಕಾರ್ಯಕ್ರಮಗಳಲ್ಲಿ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ ನೀತಿಯನ್ನು ಅನುಸರಿಸುತ್ತಿದೆ. ಮತ್ತೊಂದೆಡೆ, ಕೇಂದ್ರದ ಮಾರ್ಗಸೂಚಿಗಳ ಪ್ರಕಾರ ಪೂರ್ಣ ಗೀತೆಯನ್ನು ಹಾಡಬೇಕೆಂಬ ವಿಚಾರ ರಾಜಕೀಯ ಚರ್ಚೆಗೆ ಕಾರಣವಾಗಿದೆ.

ರಾಜಕೀಯವಾಗಿ ಮಹತ್ವ ಪಡೆದ ಘಟನೆ

ಶಿವಮೊಗ್ಗ ದಸರಾ ನಾಡಿನ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ಇಂತಹ ಸಾರ್ವಜನಿಕ ಉತ್ಸವದ ವೇದಿಕೆಯಲ್ಲಿ “ವಂದೇ ಮಾತರಂ” ಗಾಯನದ ವಿಚಾರ ರಾಜಕೀಯ ವಿವಾದಕ್ಕೆ ತಿರುಗಿರುವುದು ದುರಂತವೆ ಹೌದು.!

Leave a Reply

Your email address will not be published. Required fields are marked *

Optimized by Optimole
error: Content is protected !!