Headlines

ಶಿವಮೊಗ್ಗ : ಅಸುರಕ್ಷಿತ ಬದುಕಿಗೆ ಸುರಕ್ಷತೆಯ ಕವಚ ಸೃಷ್ಠಿಸಿಕೊಳ್ಳಲು ಪೊಲೀಸ್‌ ಸಿಬ್ಬಂಧಿಗೆ ಮನವಿ : ಬಿ.ನಿಖಿಲ್, ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (IPS)

ತಂದೆ ಬದುಕಿದ್ದಾಗ ಬದುಕಿನ ಕಷ್ಟನಷ್ಟಗಳು ಅರಿವಿಗೆ ಬರಲಿಲ್ಲ. ಅವರ ಆಕಸ್ಮಿಕ ನಿಧನದ ನಂತರ ಆಕಾಶವೇ ಕಳಚಿ ಬಿದ್ದಾಂತಾಯಿತು. ಮುಂದೇನು ಎಂಬ ಮಿಲಿಯನ್‌ ಡಾಲರ್‌ ಪ್ರಶ್ನೆ ಕಣ್ಣೆದುರಿಗೆ ಬಂದು ನಿಂತಾಗ ಕಣ್ಣಿಗೆ ಕತ್ತಲು ಆವರಿಸಿದಂತಾಗಿ ದಿಕ್ಕೇ ತೋಚದಂತಾಗಿತ್ತು. ತಂದೆಯವರ ಅಂತ್ಯಕ್ರಿಯೆಯ ಎಲ್ಲಾ ಕಾರ್ಯವಿಧಿಗಳು ಪೂರ್ಣಗೊಂಡು ನಿಧಾನವಾಗಿ ವಾಸ್ತವ ಬದುಕಿಗೆ ತೆರೆದುಕೊಳ್ಳುವಾಗ ಅಪ್ಪನ ಸ್ನೇಹಿತರು, ವೃತ್ತಿ ಬಾಂಧವರು ಸ್ಯಾಲರಿ ಪ್ಯಾಕೇಜ್‌ ಬಗ್ಗೆ ತಿಳಿಸಿದಾಗ ಕಣ್ಣಿಗೆ ಆವರಿಸಿದ್ದ ಅಂಧಕಾರ ಕಳೆದು ಬೆಳಕಿನ ಮಿಂಚುಳ್ಳಿ ಬದುಕಿನ ಹೊಸ ಬಾಗಿಲು ತೆರೆದ ಅನುಭವವಾಯಿತು. ದಿನಕಳೆದಂತೆ ಒಂದು ದಿನ ಪೊಲೀಸ್‌ ಠಾಣೆಯ ಹಿರಿಯ ಅಧಿಕಾರಿಗಳನ್ನು, ಅಪ್ಪ ಖಾತೆ ತೆರೆದಿದ್ದ ಬ್ಯಾಂಕಿನ ಮ್ಯಾನೇಜರರನ್ನು ಮಾತನಾಡಿಸಿದಾಗ ಹೊಸ ಬದುಕು ಪುನರ್‌ ಆರಂಭವಾದಂತೆ ಭಾಸವಾಯಿತು. ಎರಡು ತಿಂಗಳ ಅವಧಿಯಲ್ಲಿ ಸ್ಯಾಲರಿ ಪ್ಯಾಕೇಜ್‌ ಮಾಡಿಸಿದ ಅಪ್ಪ ನಮ್ಮ ಕುಟುಂಬದ ಮುಂದಿನ ಸುಂದರ ಬದುಕಿಗೆ ಆಸರೆಯಾಗಿದ್ದ. ಅಪ್ಪ ಮಾಡಿಸಿದ ಸ್ಯಾಲರಿ ಪ್ಯಾಕೇಜ್‌ ಮತ್ತು ವಿಮೆಯಿಂದಾಗಿ ಒಟ್ಟು 1.08ಕೋಟಿ ರೂ.ಗಳ ಸೌಲಭ್ಯ ದೊರೆತಿದೆ. ಮುಗಿದೇ ಹೋಯಿತೆಂದು ಭಾವಿಸಿದ್ದ ಕುಟುಂಬಕ್ಕೆ ಹೊಸ ದಾರಿ ಸಿಕ್ಕಿದೆ. ಈ ಸೌಲಭ್ಯವನ್ನು ದೊರಕಿಸಿಕೊಡುವಲ್ಲಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮತ್ತು ಅವರ ತಂಡದವರನ್ನು ಜೀವನ ಪರ್ಯಂತ ಮರೆಯುವುದಿಲ್ಲ. ಅಂತೆಯೇ ಅತ್ಯಲ್ಪ ಅವಧಿಯಲ್ಲಿ ಎಲ್ಲಾ ಸೌಲಭ್ಯವನ್ನು ದೊರಕಿಸಿಕೊಟ್ಟ ಬ್ಯಾಂಕ್‌ ಆಫ್‌ ಬರೋಡಾದ ಅಧಿಕಾರಿ ಸಿಬ್ಬಂಧಿಗಳು ಅಭಿನಂದಾರ್ಹರು. ಈ ಮಾತನ್ನು ಹೇಳುವಾಗ ಯಶಸ್ವಿನಿಯ ಕಣ್ಣಾಲಿಗಳು ತುಂಬಿ ಬಂದಿದ್ದವು.            - ಕುಮಾರಿ ಯಶಸ್ವಿನಿ, ಮೃತ ಅಸಿಸ್ಟೆಂಟ್‌ ಪೊಲೀಸ್‌ ಸಬ್‌ ಇನ್ಸ್‌ಫೆಕ್ಟರ್‌ ಬಸವರಾಜ ಅವರ ಪುತ್ರಿ, ಆನವಟ್ಟಿ.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕಾರಿಯಪ್ಪ, ಬ್ಯಾಂಕ್‌ ಆಫ್‌ ಬರೋಡಾದ ವಿಭಾಗೀಯ ವ್ಯವಸ್ಥಾಪಕ ದೀಪಕ್‌ ಎನ್.ಸಹಕಾರ್‌, ಪ್ರಧಾನ ವ್ಯವಸ್ಥಾಪಕ ದೀರಜ್‌ ಚೋಪ್ರಾ, ಹಿರಿಯ ವ್ಯವಸ್ಥಾಪಕ ಚಂದ್ರಶೇಖರ್‌ ಜಿ.ಕೆ., ಶಾಖಾ ವ್ಯವಸ್ಥಾಪಕ ಬಷೀರ್‌ ಹುಡೇದ್‌ ಸೇರಿದಂತೆ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಗಳ ಕಚೇರಿಯ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.
ಛಾಯಾಚಿತ್ರ ವಿವರ : ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಬಿ.ನಿಖಿಲ್‌ ಅವರು ಮೃತ ಪೊಲೀಸ್‌ ಸಬ್‌ ಇನ್ಸ್‌ಫೆಕ್ಟರ್‌ ಬಸವರಾಜು ಅವರ ಪತ್ನಿ ಶ್ರೀಮತಿ ರೇಣುಕಾ ಅವರಿಗೆ ಬ್ಯಾಂಕ್‌ ಆಫ್‌ ಬರೋಡ ವತಿಯಿಂದ ನೀಡಲಾದ ಸೌಲಭ್ಯದ ಚೆಕ್ಕನ್ನು ನೀಡಿದರು. ಈ ಸಂದರ್ಭದಲ್ಲಿ ಮೃತ ಪೊಲೀಸ್‌ ಅಧಿಕಾರಿ ಬಸವರಾಜ ಅವರ ಪುತ್ರಿ ಕು.ಯಶಸ್ವಿನಿ, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕಾರಿಯಪ್ಪ, ಬ್ಯಾಂಕ್‌ ಆಫ್‌ ಬರೋಡಾದ ವಿಭಾಗೀಯ ವ್ಯವಸ್ಥಾಪಕ ದೀಪಕ್‌ ಎನ್.ಸಹಕಾರ್‌, ಪ್ರಧಾನ ವ್ಯವಸ್ಥಾಪಕ ದೀರಜ್‌ ಚೋಪ್ರಾ, ಹಿರಿಯ ವ್ಯವಸ್ಥಾಪಕ ಚಂದ್ರಶೇಖರ್‌ ಜಿ.ಕೆ., ಶಾಖಾ ವ್ಯವಸ್ಥಾಪಕ ಬಷೀರ್‌ ಹುಡೇದ್‌ ಸೇರಿದಂತೆ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಗಳ ಕಚೇರಿಯ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Optimized by Optimole
error: Content is protected !!