ಶಿವಮೊಗ್ಗ : ಮತದಾರರ ಪಟ್ಟಿ ಪರಿಷ್ಕರಣೆ : ಶಿವಮೊಗ್ಗ ಪಾಲಿಕೆ ಕಚೇರಿ ಆವರಣದಲ್ಲಿ ಜುಲೈ 25 – 26 ರಂದು ವಿಶೇಷ ಪ್ರಚಾರ ದಿನ.

news.ashwasurya.in
ಅಶ್ವಸೂರ್ಯ/ಶಿವಮೊಗ್ಗ,ಜುಲೈ 24: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಮಹಾನಗರ ಪಾಲಿಕೆ ಆಡಳಿತ ಮತ್ತಷ್ಟು ಬಿರುಸುಗೊಳಿಸಿದೆ.
SIR ಕುರಿತಂತೆ ಮತದಾರರಿಗೆ ಮತ್ತಷ್ಟು ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ, 25/07/2026 ಹಾಗೂ 26/07/2026 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಗಾಂಧಿ ಪಾರ್ಕ್ ಎದುರಿನ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ, ವಿಶೇಷ ಪ್ರಚಾರ ದಿನವನ್ನು ಹಮ್ಮಿಕೊಂಡಿದೆ.
ನಾಗರಿಕರು SIR ಸಂಬಂಧಿತ ಮಾಹಿತಿಗೆ ಅಥವಾ ಫಾರಂ ಭರ್ತಿ ಸಹಾಯಕ್ಕೆ, ತಮ್ಮ ಮತದಾರರ ಗುರುತಿನ ಚೀಟಿ (ಎಪಿಕ್ ಕಾರ್ಡ್) ಯೊಂದಿಗೆ ಭೇಟಿ ನೀಡಿ ನೆರವು ಪಡೆದುಕೊಳ್ಳಬಹುದಾಗಿದೆ ಎಂದು ಪಾಲಿಕೆ ಆಡಳಿತ ತಿಳಿಸಿದೆ.

ಕಾಲಮಿತಿಯೊಳಗೆ ನೀಡಿ : ಭರ್ತಿ ಮಾಡಿದ ಫಾರಂಗಳನ್ನು ನಾಗರಿಕರು BLO ಗಳಿಗೆ ನೀಡಬೇಕು. ಒಂದು ವೇಳೆ ಫಾರಂಗಳನ್ನು ನೀಡದಿದ್ದರೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗುವುದಿಲ್ಲ. ಭರ್ತಿ ಮಾಡಿ ಸಹಿ ಮಾಡಿದ ಫಾರಂಗಳನ್ನು BLO ರವರು ಭೇಟಿ ನೀಡಿದ ವೇಳೆ ಅಥವಾ ವಿವಿಧ ರಾಜಕೀಯ ಪಕ್ಷಗಳ ಅದಿಕೃತ BLA ಗಳ ಮೂಲಕವು BLO ಗಳಿಗೆ ನೀಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ನಾಗರಿಕರಿಗೆ ತಿಳಿಸಲಾಗಿದೆ.


