ಶಿವಮೊಗ್ಗ : ಕಳೆದು ಹೋದ ಮೊಬೈಲನ್ನು ಪತ್ತೆ ಮಾಡುವ ಉದ್ದೇಶದಿಂದ CEIR (Central Equipment Identity Register) ಪೊರ್ಟಲ್ ನ್ನು ಜಾರಿಗೆ ತಂದ ಪೊಲೀಸ್ ಇಲಾಖೆ.

news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಕೇಂದ್ರ ಸರ್ಕಾರವು ದೂರಸಂಪರ್ಕ ಇಲಾಖೆಯ ಸಹಯೋಗದಲ್ಲಿ ಕಳೆದು ಹೋದ ಮೊಬೈಲನ್ನು ಪತ್ತೆ ಮಾಡುವ ಉದ್ದೇಶದಿಂದ CEIR (Central Equipment Identity Register) ಪೊರ್ಟಲ್ ನ್ನು ಜಾರಿಗೆ ತಂದಿದ್ದು, ಸಾರ್ವಜನಿಕರು ತಮ್ಮ ಕಳೆದು ಹೋದ ಮೊಬೈಲ್ ಮಾಹಿತಿಯನ್ನು ಸದರಿ CEIR (Central Equipment Identity Register) ನೋಂದಾಯಿಸಬಹುದಾಗಿದೆ.

ಶ್ರೀ ನಿಖಿಲ್ ಬಿ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಕಾರಿಯಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು -1 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ದೊಡ್ಡಪೇಟೆ ಪೊಲೀಸ್ ಠಾಣೆಯ ಶ್ರೀ ಸತ್ಯನಾರಾಯಣ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡವು CEIR (Central Equipment Identity Register) ಪೊರ್ಟಲ್ ಸಹಾಯದಿಂದ ಒಟ್ಟು 100 ಮೊಬೈಲ್ ಫೋನ್ ಗಳನ್ನು ಪತ್ತೆ ಮಾಡಿದ್ದು,

ಈ ದಿನ ದಿನಾಂಕ: 22-06-2026 ರಂದು ಠಾಣಾ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ಮೊಬೈಲ್ ಫೊನ್ ಅನ್ನು ಸಂಬಂಧಪಟ್ಟ ಮಾಲೀಕರಿಗೆ ಹಸ್ತಾಂತರ ಮಾಡಲಾಯಿತು.
ಹಾಗೆಯೇ ಠಾಣಾ ಆವರಣದಲ್ಲಿ, ಸಾರ್ವಜನಿಕರಿಗಾಗಿ ಹೊಸದಾಗಿ ನಿರ್ಮಿಸಿರುವ ಸಂದರ್ಶಕರ ಕೊಠಡಿ (Visitors Lounge) ಅನ್ನು ಸಹಾ ಉದ್ಘಾಟಿಸಲಾಯಿತು.


