ಹೊಸ ಡ್ರೆಸ್ ನೋಡಲು ಬಾ ಎಂದು ಕರೆದ ಪ್ರೇಯಸಿ.! ಪ್ರೇಯಸಿಯ ಮಾತಿಗೆ ಬೆಲೆ ಕೊಟ್ಟು ಹೋದ ಪ್ರಿಯಕರ ಹೆಣವಾದ.!

ಅಶ್ವಸೂರ್ಯ/ಬಿಹಾರ : ಬಿಹಾರದ ಜಮುಯಿಯಲ್ಲಿ ಪ್ರೇಯಸಿ ಆರತಿ ತಾನು ಧರಿಸಿದ್ದ ಹೊಸ ಡ್ರೆಸ್ ನೋಡಲು ಕರೆದಿದ್ದಾಳೆಂದು ಹೋದ ಪ್ರಿಯಕರ ಸಣ್ಣಲಾಲ್‌ನನ್ನು ಯುವತಿಯ ತಂದೆಯೇ ಕ್ರೂರವಾಗಿ ಹತ್ಯೆ ಮಾಡಿದ್ದಾನೆ..! ನಂತರ ಆತನ ಶವವನ್ನು ಜಲಾಶಯಕ್ಕೆ ಎಸೆದಿದ್ದು, ಪೊಲೀಸರು ಪ್ರಕರಣದ ತನಿಖೆ ಮುಂದಾಗಿದ್ದಾರೆ.
ಬಿಹಾರದ ಜಮುಯಿ ಜಿಲ್ಲೆಯ ಚಪೋಲವಾ ಗ್ರಾಮದಲ್ಲಿ ಪ್ರೀತಿಯ ಹೆಸರಿನಲ್ಲಿ ಅತ್ಯಂತ ಆಘಾತಕಾರಿ ಮತ್ತು ಕ್ರೂರ ಘಟನೆಯೊಂದು ನಡೆದು ಹೋಗಿದೆ. ಆರತಿ ಎಂಬ ಯುವತಿ ತನ್ನ ಪ್ರೇಮಿ ಸಣ್ಣಲಾಲ್‌ಗೆ ಫೋನ್ ಮಾಡಿ, “ನಾನು ಹೊಸ ಡ್ರೆಸ್ ತಂದಿದ್ದೇನೆ ಅದನ್ನು ಧರಿಸುತ್ತೇನೆ ನೋಡಲು ಬಾ” ಎಂದು ಕರೆದಿದ್ದಾಳೆ. ಪ್ರೇಯಸಿಯ ಮಾತನ್ನು ಕೇಳಿ ಸಂತೋಷಗೊಂಡ ಸಣ್ಣಲಾಲ್ ತನ್ನ ಬೈಕ್ ಏರಿ ಸುಮಾರು ಎಪ್ಪತ್ತು ಕಿಲೋಮೀಟರ್ ದೂರವನ್ನು ಕೇವಲ ಮೂರು ಗಂಟೆಗಳಲ್ಲಿ ಕ್ರಮಿಸಿ, ರಾತ್ರಿ ಒಂಬತ್ತುವರೆ ಗಂಟೆಗೆ ಆಕೆಯ ಮನೆಯ ಹತ್ತಿರ ತಲುಪಿದ್ದಾನೆ.
ತನ್ನ ಸ್ನೇಹಿತ ಮನೋಜ್ ಜೊತೆ ಆಕೆಯ ಮನೆಯ ಕಡೆಗೆ ಹೋಗುತ್ತಿದ್ದಾಗ, ಹುಡುಗಿಯ ತಂದೆ ಇವರನ್ನು ನೋಡಿಬಿಟ್ಟಿದ್ದಾರೆ.

ತನ್ನ ಮಗಳ ಲವರ್​ ಎಂದು ತಿಳಿದ ತಕ್ಷಣ, ಸಿಡಿಮಿಡಿಗೊಂಡ ತಂದೆ, ಕೂಡಲೇ ಸಣ್ಣಲಾಲ್ ಮೇಲೆ ದಾಳಿ ಮಾಡಿ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಸ್ನೇಹಿತ ಮನೋಜ್ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಓಡಿ ಬಂದು ಪೋಷಕರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.ಇನ್ನೇನು ಸಣ್ಣಲಾಲ್ ಮನೆಯವರು ಮತ್ತು ವಿಷಯ ತಿಳಿದ‌ ಪೊಲೀಸರು ಬರುವಷ್ಟರಲ್ಲಿಯೇ ಹುಡುಗಿಯ ಮನೆಯವರು ಸಣ್ಣಲಾಲ್ ಶವವನ್ನು ತೆಗೆದುಕೊಂಡು ಹೋಗಿ ಜಲಾಶಯದಲ್ಲಿ ಬೀಸಾಡಿದ್ದಾರೆ.ತನಿಖೆಗೆ ಮುಂದಾದ ಪೊಲೀಸರು ಶವವನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಸ್ನೇಹಿತೆ ಖರೀದಿ ಮಾಡಿದ ಹೊಸ ಡ್ರೆಸ್​ ನೋಡಲು ಬಂದವ ಹೆಣವಾಗಿ ಹೋಗಿದ್ದು ಮಾತ್ರ ದುರಂತವೆ ಹೌದು.

Leave a Reply

Your email address will not be published. Required fields are marked *

Optimized by Optimole
error: Content is protected !!