ಬೆಂಗಳೂರು : ಬರೆದಿಟ್ಕೊಳಿ, 2028ಕ್ಕೆ ಇದೇ ಡಿಕೆ ಶಿವಕುಮಾರ್, ಇದೇ ಸರ್ಕಾರ.!
news.ashwasurya.in
ಅಶ್ವಸೂರ್ಯ/ಬೆಂಗಳೂರು : ಈ ಹಿಂದೆ ನಾನು 136 ಸ್ಥಾನ ಬರುತ್ತದೆ ಅಂತ ಹೇಳಿದ್ದೆ, ಈಗಲೂ ಬರೆದಿಟ್ಕೊಳ್ಳಿ, 2028ಕ್ಕೆ ಇದೇ ಕಾಂಗ್ರೆಸ್ ಸರ್ಕಾರ ಇರುತ್ತದೆ. 2028ರ ಮುಂಬರುವ ಚುನಾವಣೆಯಲ್ಲೂ ಕಾಂಗ್ರೆಸ್ ಸರ್ಕಾರವೇ ಆಧಿಕಾರಕ್ಕೆ ಬರಲಿದೆ” ಎಂದು ಡಿಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಮತ್ತೆ ಸದ್ದು ಮಾಡುತ್ತಿದ್ದು, ಅಧಿಕಾರ ಹಂಚಿಕೆ ಗೊಂದಲದ ನಡುವೆಯೇ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸೋಮವಾರ ಪ್ರತಿಪಕ್ಷಗಳಿಗೆ ದೊಡ್ಡ ಸಂದೇಶ ನೀಡಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ಇಂದೇ ಪೇಪರ್ನಲ್ಲಿ ಬರೆದಿಟ್ಕೊಳಿ ಮುಂದೇನು ನಮ್ದೇ ಸರ್ಕಾರ. ‘ಇದೇ ಡಿಕೆ ಶಿವಕುಮಾರ್, ಇದೇ ಕಾಂಗ್ರೆಸ್ ಸರ್ಕಾರ’ ಇರುತ್ತದೆ ಎಂದು ಹೇಳಿದರು.
”ಪೇಪರ್ನಲ್ಲಿ ಬರೆದಿಟ್ಕೊಳಿ, ಈ ಹಿಂದೆ ನಾನು 136 ಸ್ಥಾನ ಬರುತ್ತದೆ ಅಂತ ಹೇಳಿದ್ದೆ, ಈಗಲೂ ಬರೆದಿಟ್ಕೊಳ್ಳಿ, 2028ಕ್ಕೆ ಇದೇ ಡಿಕೆ ಶಿವಕುಮಾರ್, ಇದೇ ಕಾಂಗ್ರೆಸ್ ಸರ್ಕಾರ ಇರುತ್ತದೆ. 2028ರ ಮುಂಬರುವ ಚುನಾವಣೆಯಲ್ಲೂ ಕಾಂಗ್ರೆಸ್ ಸರ್ಕಾರವೇ ಆಧಿಕಾರಕ್ಕೆ ಬರಲಿದೆ” ಎಂದು ಡಿಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

