ಪುತ್ತೂರು ಯುವತಿಗೆ ಮಗು ಕರುಣಿಸಿ ವಂಚಿಸಿದ ಕೃಷ್ಣ ಜೆ ರಾವ್ ಗೆ ಹೈಕೋರ್ಟ್ ಬಿಗ್ ಶಾಕ್.
news.ashwasurya.in
ಅಶ್ವಸೂರ್ಯ/ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಿಜೆಪಿ ಮುಖಂಡನ ಪುತ್ರ ಕೃಷ್ಣ ಜೆ ರಾವ್ ಪ್ರಕರಣಕ್ಕೆ ಹೈಕೋರ್ಟ್ ಬಿಗ್ ಟ್ವಿಸ್ಟ್ ನೀಡಿದೆ.
ಮದುವೆಯಾಗುವುದಾಗಿ ನಂಬಿಸಿ ಕೃಷ್ಣ ಜೆ ರಾವ್ ಯುವತಿಯ ಜೊತೆ ಲೈಂಗಿಕ ಸಂಪರ್ಕ ಬೆಳೆಸಿ ಪರಿಣಾಮ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ. ಯುವತಿ ಗರ್ಭಿಣಿ ಎಂದು ತಿಳಿದ ಮೇಲೆ ಕೃಷ್ಣ ಜೆ ರಾವ್ ನಂತರ ತನಗೂ ಆಕೆಗೂ ಸಂಬಂಧವಿಲ್ಲ ಎಂದು ಕೈ ಎತ್ತಿದ್ದ.
ಪ್ರಕರಣ ಸಂಬಂಧ ಯುವತಿಗೆ ವಿಶ್ವಕರ್ಮ ಸಮಾಜ ಬೆಂಬಲಕ್ಕೆ ನಿಂತಿತ್ತು. ಸಾಕಷ್ಟು ಬಾರಿ ಕೃಷ್ಣ ಜೆ ರಾವ್ ಮನವೊಲಿಸಲು ಪ್ರಯತ್ನ ನಡೆಸಲಾಯಿತು. ಆದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಯುವತಿ ಕುಟುಂಬಸ್ಥರು ಕೋರ್ಟ್ ಮೊರೆ ಹೋಗಿದ್ದಾರೆ.

ಇದೀಗ ಹೈಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ನಡೆಸಲಾಗುತ್ತಿದ್ದು, ಯುವತಿ ಹಾಗೂ ಆಕೆಯ ಮಗುವಿನ ಪೋಷಣೆಗೆ ಪ್ರತೀ ತಿಂಗಳು 75 ಸಾವಿರ ರೂ ಜೀವನಾಂಶ ನೀಡಲು ಹೈಕೋರ್ಟ್ ಆದೇಶ ನೀಡಿದೆ. ಕಳೆದ ಬಾರಿ ವಿಚಾರಣೆ ವೇಳೆ ಡಿಎನ್ಎ ಪರೀಕ್ಷೆಯಲ್ಲಿ ಮಗು ಕೃಷ್ಣ ಜೆ ರಾವ್ ನದ್ದೇ ಎಂದು ಖಚಿತವಾಗಿರುವ ಹಿನ್ನಲೆಯಲ್ಲಿ ಯುವತಿ ಹಾಗೂ ಮಗುವನ್ನು ನೋಡಿಕೊಳ್ಳುವುದು ಆತನ ಕರ್ತವ್ಯವಾಗಿದೆ ಎಂದು ಕೋರ್ಟ್ ಹೇಳಿತ್ತು. ಇದೀಗ ಒಂದು ವಾರದೊಳಗಾಗಿ ಮೊದಲ ಕಂತಿನ ಜೀವನಾಂಶ ಪಾವತಿಸಲು ಹೈಕೋರ್ಟ್ ಸೂಚನೆ ನೀಡಿದೆ.


