ಶಿವಮೊಗ್ಗ :ಹೊಸನಗರಲ್ಲಿ ಸ್ಕೀಮ್ ಹೆಸರಲ್ಲಿ ಮಹಾ ಮೋಸ.! ಸುಮಾರು 2000 ಸಾವಿರ ಮಂದಿಗೆ ದೋಖಾ.! ಅಂದಾಜು 3 ಕೋಟಿಯ ಉಂಡೆ ನಾಮ ತಿಕ್ಕಿಬಿಟ್ರು ಖದೀಮರು.!
news.ashwasurya.in
ಅಶ್ವಸೂರ್ಯ/ಹೊಸನಗರ : ಹೊಸನಗರದ 27 ವರ್ಷದ ನಿಹಾಲ್ ಎಂಬ ವ್ಯಕ್ತಿಗೆ 2023 ನಿಹಾಲ್ ಸ್ನೇಹಿತರಿಂದ ಪರಿಚಯವಾದ ಅಬ್ದುಲ್ ರಜಾಕ್ ಮತ್ತು ಶೇಕ್ ಮಹಮ್ಮದ್ ಫಜಲ್ ಎಂಬುವವರು “ಅಯಾನ್” ಗ್ರೂಪ್ನ ಮಾಲೀಕರಾಗಿದ್ದು,ಪರಿಚಯವಾದ ಒಂದೆರಡು ದಿನಗಳಲ್ಲಿ ನಿಹಾಲ್ ಬಳಿಗೆ ಹೋಗಿ ನಾವು 13, 16, 21 ತಿಂಗಳ ಸ್ಕೀಮ್ ಗಳನ್ನು ಮಾಡಿದ್ದೇವೆ. ಇದಕ್ಕೆ ಪ್ರತಿ ತಿಂಗಳು ಒಂದು ಸಾವಿರದಂತೆ ಸಾರ್ವಜನಿಕರಿಂದ ವಂತಿಗೆ ಪಡೆದು ಸದಸ್ಯರನ್ನಾಗಿ ಮಾಡಿ ಸ್ಕೀಮಿನ ಅವಧಿಯ ಮಧ್ಯದಲ್ಲಿ ಸದಸ್ಯರಾದವರಿಗೆ ನಾವು ಆಕರ್ಷಕ ಬಹುಮಾನ ಹಾಗೂ ಸ್ಕೀಮ್ ಮುಗಿದ ನಂತರ ಸಮಾಧಾನಕರ ಬಹುಮಾನ ನೀಡುವುದಾಗಿಯೂ ಹೇಳಿದ್ದಾರೆ ಜೋತೆಗೆ ಪ್ರತಿಕಾರ್ಡಿಗೆ 300 ರೂ. ಹಾಗೆ ಕಮೀಷನ್ ನೀಡುವುದಾಗಿಯೂ ಭರವಸೆ ನೀಡಿದ ಮೇರೆಗೆ ನಿಹಾಲ್ ಅವರು 2023 ನೇ ಸಾಲಿನ ಮೇ ತಿಂಗಳಿನಿಂದ ಒಟ್ಟು 150 ಕಾರ್ಡುದಾರರನ್ನು ಸಂಪರ್ಕಿಸಿ ಅವರಿಂದ ಪ್ರತಿ ತಿಂಗಳು ಕಂತಿನ ಹಣವನ್ನು ನೇರವಾಗಿ ಅಬ್ದುಲ್ ರಜಾಕ್ ಮತ್ತು ಶೇಕ್ ಮಹಮ್ಮದ್ ಫಜಲ್ ರವರ ಫೋನ್ ಪೆ ನಂ :- 8123203441, 9036793134 ಮತ್ತು 9945880441 ಇವರ ವಿವಿಧ ಫೋನ್ ಪೆ ಖಾತೆಗೆ ಜಮಾ ಮಾಡಿಸಿದ್ದಾರೆ.ನಂತರ ದಿನಾಂಕ: 04/05/2025 ರಲ್ಲಿ ಸ್ಕೀಮ್ ಮುಕ್ತಾಯವಾಗಿದ್ದರು ಸಹ ಸ್ಕೀಮಿನ ಕಾರ್ಡಿನಲ್ಲಿ ಹೇಳಲಾಗಿದ್ದ ಯಾವುದೇ ಗೃಹ ಉಪಯೋಗಿ ವಸ್ತುಗಳನ್ನಾಗಲೀ ಅಥವಾ ನಗದು ಹಣವನ್ನಾಗಲಿ ಮರುಪಾವತಿ ಮಾಡಿರುವುದಿಲ್ಲ.
ಆರೋಪಿ ಅಬ್ದುಲ್ ರಜಾಕ್

ಒಟ್ಟು ಸುಮಾರು ರೂ. 24,00,000/- ಅನ್ನು ಗ್ರಾಹಕರ ರೂಪದಲ್ಲಿ ಪಾವತಿಯಾಗಿರುತ್ತದೆ. ಈ ಬಗ್ಗೆ ನಿಹಾಲ್ ಅನೇಕ ಬಾರಿ ಅಬ್ದುಲ್ ರಜಾಕ್ ಮತ್ತು ಶೇಕ್ ಮಹಮ್ಮದ್ ಫಜಲ್ ರವರಿಗೆ ಕೇಳಿದರು ಅವರಿಂದ ಯಾವುದೇ ಸಕಾರಾತ್ಮಕ ಉತ್ತರಗಳು ಬಂದಿರುವುದಿಲ್ಲ. ನಿಹಾಲ್ ರಂತೇಯೆ ಇತರೆ 7-8 ಜನ ಏಜೆಂಟರುಗಳು ಸಹ ಸಾರ್ವಜನಿಕರಿಂದ ಹಣವನ್ನು ಸಂಗ್ರಹ ಮಾಡಿ ಅಯಾನ್ ಗ್ರೂಪ್ ಸದಸ್ಯರಿಂದ ಹಣವನ್ನು ಹಾಕಿಸಿರುತ್ತಾರೆ. ಸುಮಾರು 2000 ಕ್ಕೂ ಹೆಚ್ಚು ಜನರಿಗೆ ಮೋಸ ನಂಬಿಕೆ ದ್ರೋಹ ವಂಚನೆ ಮಾಡಿರುವ ಅಬ್ದುಲ್ ರಜಾಕ್ ಮತ್ತು ಶೇಕ್ ಮಹಮ್ಮದ್ ಫಜಲ್ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ನಮ್ಮಿಂದ ಪಾವತಿಯಾಗಿರುವ ಸುಮಾರು 3 ಕೋಟಿಗೂ ಅಧಿಕ ಹಣವನ್ನು ಹಿಂದಿರುಗಿಸಿಕೊಡಿಸಬೇಕಾಗಿ ನಿಹಾಲ್ ಅವರು ನೀಡಿದ ದೂರನ್ನು ದಾಖಲಿಸಿಕೊಂಡ ಪಿಎಸ್ಐ ಹೊಸನಗರ ಮತ್ತು ಸಿಬ್ಬಂಧಿಗಳ ತಂಡವು ತನಿಖೆ ಕೈಗೊಂಡು, ಪ್ರಕರಣದ ಆರೋಪಿ ಅಬ್ದುಲ್ ರಜಾಕ್ 47 ವರ್ಷ ವಾಸ ಉಡುಪಿ ಜಿಲ್ಲೆ ಈತನನ್ನು ದಸ್ತಗಿರಿ ಮಾಡಿ, ಘನ ನ್ಯಾಯಾಲಯದ ಮುಂದೆ ಹಾಜರ್ ಪಡಿಸಿರುತ್ತದೆ.ತನಿಖೆ ಮುಂದುವರೆದಿದ್ದು ಇನ್ನೂಳಿದ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.


