ಜೋನ್ ಲೀಲಾ ಮಾಡ್ತಾಗೆ ಪಿಎಚ್.ಡಿ ಪ್ರದಾನ.
ಶಿವಮೊಗ್ಗ/ಬಳ್ಳಾರಿ : ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಆಂಗ್ಲ ಅಧ್ಯಯನದ ವಿಭಾಗದ ಪ್ರಾಧ್ಯಪಕರಾದ
ಎನ್.ಶಾಂತನಾಯ್ಕ ಮಾರ್ಗದರ್ಶನದಲ್ಲಿ ಜೋನ್ ಲೀಲಾ ಮಾಡ್ತಾ ಅವರು ಆಂಗ್ಲ ಬಾಷೆಯಲ್ಲಿ ಅಧ್ಯಯನ ಪಡಿಸಿದ ಫೇಥ್, ಫೇಟ್ ಮತ್ತು ಪೊರ್ಟಿಟ್ಯುಡ್: ಎ ಕಂಪೆರೇಟಿವ್ ಸ್ಟಡಿ ಆಫ್ ಬಿಬ್ಲಿಕಲ್ ವಿಮೆನ್ ಅಂಡ್ ಏಮಿ ಟ್ಯಾನ್’ಸ್ ವಿಮೆನ್ ಎಂಬ ಮಹಾ ಪ್ರಬಂಧವನ್ನು ಪಿಎಚ್.ಡಿಗೆ ಅಂಗೀಕರಿಸಲಾಗಿದೆ. ಜೋನ್ ಲೀಲಾ ಮಾಡ್ತಾ ಅವರು ಧಾರವಾಡದ ಕರ್ನಾಟಕ ಕಾಲೇಜು ಕಲಾ ವಿಭಾಗದಲ್ಲಿ ಕಳೆದ ಹದಿನೈದು ವರ್ಷದಿಂದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


