Headlines

ಬೆಂಗಳೂರು : ಇನ್ಸ್‌ಪೆಕ್ಟರ್ ಪಾಪಣ್ಣನೊ.? ಕಾಮಣ್ಣನೊ.? ಮಹಿಳಾ ರೌಡಿ ಶೀಟರ್‌ನ್ನೇ ಮಂಚ ಕರೆದ ಆಡಿಯೋ ರಿಲೀಸ್.!

ಪೋಲಿ ಪಾಪಣ್ಣನ ಆಡಿಯೋದಲ್ಲಿ ಅಂತದ್ದೇನಿದೆ.?

ಇನ್ಸ್‌ಪೆಕ್ಟರ್ ಪಾಪಣ್ಣ ಮಹಿಳಾ ರೌಡಿ ಶೀಟರ್ ಯಶಸ್ವಿನ ಜೊತೆ ಫೋನ್ ಮೂಲಕ ಮಾತನಾಡಿದ ಆಡಿಯೋ ಮಾದ್ಯಮ ಮಂದಿಗೆ ಲಭ್ಯವಾಗಿದೆ.ಪಾಪಣ್ಣನ ಮಧುರ ಕಂಠದಿಂದ ಹೊರಹೊಮ್ಮಿದ ಪದಗಳು….. ಎನು ಮಾಡುತ್ತಿದ್ದೆಯಾ ಡಾರ್ಲಿಂಗ್, ಮುದ್ದು ಚಿನ್ನ, ಬಂಗಾರಿ ನಿನಗೆ ಟೆನ್ಶ್‌ನ್ ಕೊಡಲ್ಲ. ಎಲ್ಲಿದ್ದೀಯಾ, ಇವತ್ತು ಮನೆಯಲ್ಲಿ ಯಾರು ಇಲ್ಲ ಮನೆಗೆ ಬಾ ಎಂದು ಕರೆಯುವ ಆಡಿಯೋಗಳು ಬಹಿರಂಗವಾಗಿದೆ. ನೀನು ತುಂಬಾ ಚೆನ್ನಾಗಿದ್ದಿಯಾ, ನನ್ನ ಜೊತೆ ಬಂದು ಮಲಗು ಎಂದು ಹೇಳಿರುವ ಆಡಿಯೋಗಳು ವೈರಲ್ ಆಗಿದೆ. ನನ್ನನ್ನು ಪಾಪಣ್ಣ ಸಾರ್ ಎಂದು ಕರೆಯಬೇಡು, ನಾನು ಪೊಲೀಸ್ ಇನ್ಸ್‌ಪೆಕ್ಟರ್ ರೀತಿ ನಿನ್ನ ಜೊತೆ ನಡೆದುಕೊಂಡಿದ್ದೀನಾ ಎಂದು ಪೋಲಿ ಪಾಪಣ್ಣ ಹೇಳುತ್ತಿರುವ ಆಡಿಯೋ ಕೋಲಾಹಲ ಎಬ್ಬಿಸಿದೆ.
ಲವ್ ಯು ಚಿನ್ನಾ, ಬಂಗಾರಿ ಬಾರೇ ಇಲ್ಲಿ
ಪಾಪಣ್ಣನದು ಬರಿ ಫೋನ್ ಕಾಲ್ ಮಾತ್ರವಲ್ಲ, ಮೆಸೇಜ್ ಮೂಲಕವೂ ಕಿರುಕುಳ ನೀಡಿದ್ದಾರೆ. ಲವ್ ಯು ಚಿನ್ನಾ, ಬಂಗಾರಿ ಬಾರೇ ಇಲ್ಲಿ ಎಂದು ಮೆಸೇಜ್ ಮಾಡಿದ್ದಾರೆ. ಅಸಭ್ಯ ಮೆಸೇಜ್ ಮಾಡಿರುವ ಹಲವು ಸ್ಕ್ರೀನ್‌ಶಾಟ್‌ಗಳು ಬಹಿರಂಗವಾಗಿದೆ. ನೀನು ಸಹಕರಿಸಿದರೆ ಕೇಸ್ ನೋಡಿಕೊಳ್ಳುತ್ತೇನೆ ಎಂದು ಮೆಸೇಜ್ ಮಾಡಿದ್ದಾರೆ.

ಮೇಡಂ ಯಶಸ್ವಿನಿ ಕೊಟ್ರು ಪೊಲೀಸ್ ಕಮಿಷನರ್‌ಗೆ ದೂರು.!

ಮಹಿಳಾ ರೌಡಿ ಶೀಟರ್ ಯಶಸ್ವಿನಿ ಕೋಣನಕುಂಟೆ ಇನ್ಸ್‌ಪೆಕ್ಟರ್ ಪಾಪಣ್ಣ ವಿರುದ್ಧ ಪೊಲೀಸ್ ಕಮಿಷನರ್‌ಗೆ ದೂರು ದಾಖಲಿಸಿದ್ದಾರೆ.ಕೆಟ್ಟ ಕೆಟ್ಟದಾಗಿ ಮೆಸೇಜ್ ಮಾಡುತ್ತಾರೆ. ಮನೆಗೆ ಬರ್ಲಾ ಎಂದು ಕೇಳುತ್ತಾರೆ. ನಾನು ನಿನಗೆ ಇನ್ಸ್‌ಪೆಕ್ಟರ್ ಅಲ್ಲ ಬಂಗಾರಿ ನಾನು ತುಂಬಾ ಕ್ಲೋಸ್ ಫ್ರೆಂಡ್ ಎಂದು ಹೇಳುತ್ತಾರೆ. ನನ್ನ ಮೇಲೆ ರೌಡಿ ಶೀಟರ್ ತೆರೆದು ಇದೀಗ ಕ್ಲೋಸ್ ಫ್ರೆಂಡ್ ಎಂದು ಹೇಳುತ್ತಾರೆ. ಕಿರುಕಳ ನೀಡುತ್ತಿದ್ದಾರೆ. ಪಾಪಣ್ಣ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!