
BAN vs PAK: ಇದೇನಾ ಸ್ಪೋರ್ಟ್ಸ್ಮೆನ್ಶಿಪ್ ಅಂದ್ರೆ.? ಬಾಂಗ್ಲಾ ಆಟಗಾರನಿಗೆ ಸಹಾಯ ಮಾಡಲು ಹೋಗಿ ಪಾಕ್ ಬ್ಯಾಟ್ಸ್ಮನ್ ವಿಚಿತ್ರ ರನೌಟ್ ! ವಿಡಿಯೋ ವೈರಲ್.!
news.ashwasurya.in
ಅಶ್ವಸೂರ್ಯ/ ಡಾಕ : ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ವಿಚಿತ್ರ ಘಟನೆಯೊಂದು ನೆಡೆದಿದೆ.! ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಅಘಾ ತಮ್ಮ ಬ್ಯಾಟಿಂಗ್ ಸರದಿಯಲ್ಲಿ ವಿಚಿತ್ರ ರೀತಿಯಲ್ಲಿ ರನೌಟ್ ಆದರು. ಇದಾದ ನಂತರ ಸಲ್ಮಾನ್ ಅಲಿ ಅಘಾ ವಿಚಿತ್ರ ರನೌಟ್ ದೊಡ್ಡ ವಿವಾದವನ್ನು ಸೃಷ್ಟಿಸಿದೆ.
ವೈರಲ್ ವಿಡಿಯೋ..👇
ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವೆ ಏಕದಿನ ಸರಣಿ ಆರಂಭವಾಗಿದ್ದು. ಈ ಏಕದಿನ ಸರಣಿ ಬಾಂಗ್ಲಾದೇಶದಲ್ಲಿ ನಡೆಯುತ್ತಿದ್ದು, ಎರಡನೇ ಪಂದ್ಯ ಢಾಕಾದಲ್ಲಿ ನಡೆದಿದ್ದು. ಈ ಪಂದ್ಯದಲ್ಲಿ ಪಾಕಿಸ್ತಾನ ಆಟಗಾರ ಸಲ್ಮಾನ್ ಅಲಿ ಅಘಾ ವಿಚಿತ್ರ ರೀತಿಯಲ್ಲಿ ರನೌಟ್ ಆದರು. ಸಲ್ಮಾನ್ ಅಲಿ ಅಘಾ ಅವರನ್ನು ಮೆಹದಿ ಹಸನ್ ಮಿರಾಜ್ ರನೌಟ್ ಮಾಡಿದ ರೀತಿಗೆ ದೊಡ್ಡ ವಿವಾದವನ್ನು ಸೃಷ್ಟಿಸಿದೆ . ರನೌಟ್ ಆದ ನಂತರ ಸಲ್ಮಾನ್ ಅಘಾ ಕೂಡ ಮೈದಾನದಲ್ಲಿ ತುಂಬಾ ಕೋಪಗೊಂಡಿದ್ದರು. ಈ ಬಗ್ಗೆ ಸಂಪೂರ್ಣ ಮಾಹಿತಿ ವಿಡಿಯೋ ಇಲ್ಲಿದೆ ನೋಡಿ.
ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಸಲ್ಮಾನ್ ಅಲಿ ಆಘಾ ಅವರನ್ನು ಮೆಹದಿ ಹಸನ್ ರನ್ ಔಟ್ ಮಾಡಿದ್ದು ಕ್ರೀಡಾ ಮನೋಭಾವದ ಕೊರತೆಯ ಬಗ್ಗೆ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಕ್ರೀಡಾ ಮನೋಭಾವದ ಬಗ್ಗೆ ಹಿರಿಯ ಮತ್ತು ಕಿರಿಯ ಕ್ರಿಕೆಟಿಗರು ಈ ವಿಶ್ವದಾದ್ಯಂತ ಚರ್ಚೆ ಮಾಡಿದ್ದಾರೆ.! ಚರ್ಚೆಗೆ ಕಾರಣವಾದ ಘಟನೆ 39 ನೇ ಓವರ್ನಲ್ಲಿ ನಡೆದಿದೆ.

ಎನದು ವಿಚಿತ್ರ ರನೌಟ್.?
ಪಂದ್ಯದ 39 ನೇ ಓವರ್ನಲ್ಲಿ ಮೆಹದಿ ಹಸನ್ ಮಿರಾಜ್ ಬೌಲಿಂಗ್ ಮಾಡಲು ಬಂದರು. ಸ್ಟ್ರೈಕ್ನಲ್ಲಿ ಇದ್ದ ಮೊಹಮ್ಮದ್ ರಿಜ್ವಾನ್ ಚೆಂಡನ್ನು ಬೌಲರ್ನ ಬಲಭಾಗಕ್ಕೆ ಫ್ಲಿಕ್ ಮಾಡಿದರು ಮತ್ತು ಮಿರಾಜ್ ಚೆಂಡನ್ನು ತನ್ನ ಕಾಲಿನಿಂದ ನಿಲ್ಲಿಸಿದರು. ನಾನ್-ಸ್ಟ್ರೈಕರ್ನ ತುದಿಯಲ್ಲಿದ್ದ ಆಘಾ ಕ್ರೀಸ್ನಿಂದ ಹೊರಗಿದ್ದರು. ಇದರ ನಡುವೆ ಮಿರಾಜ್ ಮತ್ತು ಆಘಾ ಡಿಕ್ಕಿ ಹೊಡೆದರು.
ನಂತರ ಆಘಾ ಚೆಂಡನ್ನು ಎತ್ತಿಕೊಂಡು ಬೌಲರ್ಗೆ ಹಿಂತಿರುಗಿಸಲು ಕೆಳಗೆ ಬಾಗಿದರು. ಆದರೆ ಮಿರಾಜ್ ಆಘಾ ಅವರನ್ನು ತಡೆದು, ಸ್ವತಃ ಚೆಂಡನ್ನು ಎತ್ತಿಕೊಂಡು ವಿಕೆಟ್ ಗೆ ಅಂಡರ್ ಆರ್ಮ್ ಥ್ರೋ ಮಾಡಿದರು. ಈ ವೇಳೆ ಆಘಾ ಕ್ರೀಸ್ನ ಹೊರಗೆ ಇದ್ದರು. ಹೀಗಾಗಿ ನಿರ್ಧಾರವನ್ನು ಮೂರನೇ ಅಂಪೈರ್ಗೆ ಕಳುಹಿಸಿದ ತಕ್ಷಣ, ಸಲ್ಮಾನ್ ಆಘಾ ಕೋಪದಿಂದ ತನ್ನ ಹ್ಯಾಂಡ್ ಗ್ಲೌಸ್ ಮತ್ತು ಹೆಲ್ಮೆಟ್ ಅನ್ನು ಮೈದಾನಕ್ಕೆ ಎಸೆದು ಆಕ್ರೋಶ ಹೊರಹಾಕಿದರು.

ಅಂಕಣದಲ್ಲೇ ಅಸಮಾಧಾನ ವ್ಯಕ್ತಪಡಿಸಿದ ಬ್ಯಾಟ್ಸ್ಮನ್.
ಸಲ್ಮಾನ್ ಆಘಾ ಅವರನ್ನು ರನೌಟ್ ಮಾಡುವ ನಿರ್ಧಾರವನ್ನು ಮೂರನೇ ಅಂಪೈರ್ಗೆ ಕಳುಹಿಸಲಾಯಿತು. ಅಂತಿಮವಾಗಿ ಆಘಾ ಅವರಿಗೆ ಔಟ್ ಎಂದು ನೀಡಲಾಯಿತು. ಈ ನಿರ್ಧಾರದಿಂದ ಆಘಾ ತೀವ್ರ ಅಸಮಾಧಾನಗೊಂಡರುಅವರು ಮೈದಾನದಲ್ಲಿ ಮೀರಜ್ ಅವರನ್ನು ಅಪಹಾಸ್ಯ ಮಾಡಿದರು. ನಂತರ ಅಸಮಾಧಾನದಿಂದ ಮೈದಾನದಿಂದ ನಿರ್ಗಮಿಸಿದರು.
ಸಲ್ಮಾನ್ ಆಘಾ ಕೋಪದಿಂದ ಪೆವಿಲಿಯನ್ ಕಡೆಗೆ ನಡೆಯುತ್ತಿದ್ದಂತೆ ತಮ್ಮೊಳಗೆ ಮಾತನಾಡುತ್ತಿದ್ದರು. ಹೊರಹೋಗುವಾಗ, ಅವರು ಹೆಲ್ಮೆಟ್ ಮತ್ತು ಹ್ಯಾಂಡ್ ಗ್ಲೌಸ್ ಅನ್ನು ಬೌಂಡರಿಯಿಂದ ಹೊರಗೆ ಎಸೆದು ನಂತರ ಮೈದಾನದಿಂದ ಓಡಿಹೋದರು. ಸಲ್ಮಾನ್ ಆಘಾ ಅವರ ರನೌಟ್ ವೀಡಿಯೊ ಪ್ರಸ್ತುತ ವೈರಲ್ ಆಗುತ್ತಿದೆ.


