
Under 19 WC Final: ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್.!ಮಂಡಿಯೂರಿದ ಇಂಗ್ಲೆಂಡ್.! ಟ್ರೋಫಿ ಗೆದ್ದ ಭಾರತ.

news.ashwasurya.in
ಅಶ್ವಸೂರ್ಯ/ಜಿಂಬಾಬ್ವೆ : ಹರಾರೆ ಕ್ರೀಡಾಂಗಣದಲ್ಲಿ ನಡೆದ ಅಂಡರ್ 19 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಭರ್ಜರಿ 100 ರನ್ಗಳ ಜಯ ಸಾಧಿಸುವ ಮೂಲಕ ಆರನೇ ಬಾರಿಗೆ ಟ್ರೋಫಿಯನ್ನು ಗೆದ್ದು ಬಿಗಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಬ್ಯಾಟಿಂಗ್ ಅಯ್ಕೆ ಮಾಡಿಕೊಂಡಿತ್ತು, ಬ್ಯಾಟಿಂಗ್ ಅಂಕಣಕ್ಕೆ ಇಳಿಯುತ್ತಿದ್ದಂತೆ ವೈಭವ್ ಸೂರ್ಯವಂಶಿ ಇಂಗ್ಲೆಂಡ್ ಬೌಲರ್ಗಳನ್ನು ಮನಸ್ಸೊ ಇಚ್ಚೆ ಚಚ್ಚಿ ಹಾಕಿದರು ದಾಖಲೆಯ ಶತಕದ ಜೊತೆಗೆ175 ರನ್ಗಳನ್ನು ಬಾರಿಸಿದ್ದರಿಂದ ಭಾರತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಬರೋಬ್ಬರಿ 411 ರನ್ ಕಲೆಹಾಕಿ ಇಂಗ್ಲೆಂಡ್ಗೆ 412 ರನ್ಗಳ ಕಠಿಣ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಇಂಗ್ಲೆಂಡ್ 40.2 ಓವರ್ಗಳಲ್ಲಿ 311 ರನ್ಗೆ ಆಲ್ಔಟ್ ಆಗಿದೆ.

ಭಾರತದ ಭರ್ಜರಿ ಬ್ಯಾಟಿಂಗ್ ಇನ್ನಿಂಗ್ಸ್ :
ಸೆಮಿಫೈನಲ್ ಪಂದ್ಯದಲ್ಲಿ ಶತಕ ಬಾರಿಸಿದ್ದ ಆರನ್ ಜಾರ್ಜ್ ಕೇವಲ 9 ರನ್ಗೆ ಔಟ್ ಆಗಿ ವಿಕೆಟ್ ಒಪ್ಪಿಸಿದರು. ಹೀಗೆ ಆರಂಭಿಕ ಆಘಾತ ಕಂಡ ಭಾರತಕ್ಕೆ ಮತ್ತೋರ್ವ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅಬ್ಬರಿಸಿದ ಹಿನ್ನೆಲೆಯಲ್ಲಿ ಭಾರತ ದೊಡ್ಡ ಮೊತ್ತವನ್ನು ಕಲೆಹಾಕಿತು. ತನ್ನ ಇನ್ನಿಂಗ್ಸ್ ಉದ್ದಕ್ಕೂ ಬೌಂಡರಿ ಹಾಗೂ ಸಿಕ್ಸರ್ ಸುರಿಮಳೆಯನ್ನೇ ಸುರಿಸಿದ ವೈಭವ್ ಸೂರ್ಯವಂಶಿ ಐಸಿಸಿ 50 ಓವರ್ಗಳ ಟೂರ್ನಿಗಳ ಫೈನಲ್ನಲ್ಲಿ ಅತಿ ಬೇಗನೆ ಶತಕ ಬಾರಿಸಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಕೇವಲ 55 ಎಸೆತಗಳಿಗೆ ತನ್ನ ಶತಕವನ್ನು ಪೂರೈಸಿದ ವೈಭವ್ 80 ಎಸೆತಗಳಲ್ಲಿ 15 ಸಿಕ್ಸರ್ ಹಾಗೂ 15 ಬೌಂಡರಿಗಳನ್ನು ಬಾರಿಸಿ ಒಟ್ಟು 175 ರನ್ಗಳನ್ನು ಚಚ್ಚಿಹಾಕಿದರು. ವೈಭವ್ ಜೊತೆ ಸೇರಿ ಎರಡನೇ ವಿಕೆಟ್ಗೆ ಉತ್ತಮ ಜೊತೆಯಾಟವಾಡಿದ ನಾಯಕ ಆಯುಷ್ ಮ್ಹಾತ್ರೆ 53 ರನ್ ಬಾರಿಸಿದರು. ಇನ್ನುಳಿದಂತೆ ವೇದಾಂತ್ ತ್ರಿವೇದಿ 32, ವಿಹಾನ್ ಮಲ್ಹೋತ್ರ 30, ಅಭೀಜ್ಞಾನ್ ಕುಂದು 40, ಆರ್ಎಸ್ ಅಂಬರೀಶ್ 18, ಖಿಲಾನ್ ಪಟೇಲ್ 3, ಹೆನಿಲ್ ಪಟೇಲ್ 5, ಕನಿಷ್ಕ್ ಚೌಹಾಣ್ ಅಜೇಯ 37 ರನ್ ಹಾಗೂ ಯಾವುದೇ ಎಸೆತ ಎದುರಿಸದ ದೀಪೇಶ್ ದೇವೇಂದ್ರನ್ ಅಜೇಯರಾಗಿ ಉಳಿದರು.
ಇಂಗ್ಲೆಂಡ್ ಪರ ಜೇಮ್ಸ್ ಮಿಂಟೊ ಮೂರು ವಿಕೆಟ್, ಸೆಬಾಸ್ಟಿಯನ್ ಮಾರ್ಗನ್ ಮತ್ತು ಅಲೆಕ್ಸ್ ಗ್ರೀನ್ ತಲಾ ಎರಡು ವಿಕೆಟ್ ಹಾಗೂ ಮ್ಯಾನಿ ಲಮ್ಸ್ಡೆನ್ ಒಂದು ವಿಕೆಟ್ ಪಡೆದರು.

ಇಂಗ್ಲೆಂಡ್ ಬ್ಯಾಟಿಂಗ್ : ಇಂಗ್ಲೆಂಡ್ ತಂಡದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಜೋಸೆಫ್ ಮೂರ್ಸ್ 17 ರನ್ಗೆ ವಿಕೆಟ್ ಒಪ್ಪಿಸಿದ ಕಾರಣ ತಂಡ 19 ರನ್ಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಆರಂಭದಲ್ಲೇ ಆಘಾತಕ್ಕೆ ಒಳಗಾದ ತಂಡಕ್ಕೆ ಮತ್ತೋರ್ವ ಆರಂಭಿಕ ಆಟಗಾರ ಬೆನ್ ಡಾಕಿನ್ಸ್ ಹಾಗೂ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬೆನ್ ಮೇಯ್ಸ್ 74 ರನ್ಗಳ ಜತೆಯಾಟವನ್ನಾಡುವ ಮೂಲಕ ತಂಡಕ್ಕೆ ಶಕ್ತಿ ತುಂಬಿದರು. ಬೆನ್ ಡಾಕಿನ್ಸ್ 66 ರನ್ ಬಾರಿಸಿದರೆ, ಬೆನ್ ಮೇಯ್ಸ್ 45 ರನ್ ಗಳಿಸಿದರು. ಥಾಮಸ್ 31 ರನ್ ಬಾರಿಸಿದ್ದಾಗ ವಿಕೆಟ್ ಒಪ್ಪಿಸಿದರು. ಈ ಮೂಲಕ ಇಂಗ್ಲೆಂಡ್ ಕೇವಲ 174 ರನ್ಗೆ 4 ವಿಕೆಟ್ ಕಳೆದುಕೊಂಡಿತು. ಬೆನ್ನಲ್ಲೇ ರಾಫಿ ಆಲ್ಬರ್ಟ್ ಡಕ್ಔಟ್, ಫರ್ಹಾನ್ ಅಹ್ಮದ್ 1 ಹಾಗೂ ಸೆಬಾಸ್ಟಿಯನ್ ಮಾರ್ಗನ್ ಡಕ್ಔಟ್ ಆದರು. ಅಲ್ಲಿಗೆ ಇಂಗ್ಲೆಂಡ್ 177 ರನ್ಗೆ 7 ವಿಕೆಟ್ ಕಳೆದುಕೊಂಡು ತೀರ ಸಂಕಷ್ಟಕ್ಕೆ ಸಿಲುಕಿತು.

ಒಂದೆಡೆ ವಿಕೆಟ್ ಬೀಳುತ್ತಿದ್ದರೆ ಮತ್ತೊಂದೆಡೆ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಕಾಲೆಬ್ ಫಾಲ್ಕನರ್ ಏಕಾಂಗಿ ಹೋರಾಟ ನಡೆಸಿ 67 ಎಸೆತಗಳಲ್ಲಿ 115 ರನ್ ಬಾರಿಸಿದರು. ಇನ್ನುಳಿದಂತೆ ಜೇಮ್ಸ್ ಮಿಂಟೊ 28, ಮ್ಯಾನ್ನಿ ಲಮ್ಸ್ಡೆನ್ 3 ರನ್ ಹಾಗೂ ಯಾವುದೇ ಎಸೆತ ಎದುರಿಸದ ಅಲೆಕ್ಸ್ ಗ್ರೀನ್ ಅಜೇಯರಾಗಿ ಉಳಿದರು.
ಭಾರತದ ಪರ ಆರ್ಎಸ್ ಅಂಬರೀಶ್ ಮೂರು ವಿಕೆಟ್, ದೀಪೇಶ್ ದೇವೇಂದ್ರನ್ ಎರಡು ವಿಕೆಟ್ ಹಾಗೂ ಕನಿಷ್ಕ್ ಚೌಹಾಣ್ ತಲಾ ಎರಡು ವಿಕೆಟ್ ಮತ್ತು ಖಿಲಾನ್ ಪಟೇಲ್ ಹಾಗೂ ನಾಯಕ ಆಯುಷ್ ಮ್ಹಾತ್ರೆ ಒಂದು ವಿಕೆಟ್ ಪಡೆದರು.ಅಂತಿಮವಾಗಿ ಇಂಗ್ಲೆಂಡ್ 100 ರನ್ಗಳ ಅಂತರದಿಂದ ಭಾರತದ ಎದುರು ಸೋಲಿಗೆ ಶರಣಾಯಿತು. ಭಾರತ ಆರನೇ ಬಾರಿಗೆ ಕಪ್ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿತು.


