
ಶಿವಮೊಗ್ಗ : ತೀರ್ಥಹಳ್ಳಿ ಸಮೀಪ ಚಲಿಸುತ್ತಿದ್ದ KSRTC ಬಸ್ ನ ಸ್ಟೇರಿಂಗ್ ಕಟ್.!ಪ್ರಯಾಣಿಕರ ಕಥೆ ಎನು.? ಅಪಾಯದಿಂದ ಪಾರದ ಪ್ರಯಾಣಿಕರು.!
news.ashwasurya.in
ಅಶ್ವಸೂರ್ಯ/ಶಿವಮೊಗ್ಗ :ತೀರ್ಥಹಳ್ಳಿ ಸಮೀಪ ಚಲಿಸುತ್ತಿದ್ದ KSRTC ಬಸ್ ನ ಸ್ಟೇರಿಂಗ್ ಕಟ್ ಆಗಿದ್ದು, ಅದೃಷ್ಟವಶಾತ್ ಭಾರಿ ಅನಾಹುತವೊಂದು ಹೊಸವರ್ಷದ ದಿನದಂದೆ ತಪ್ಪಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸಮೀಪದಲ್ಲಿ ಈ ಘಟನೆ ನಡೆದಿದೆ. ಶಿವಮೊಗ್ಗದಿಂದ ಕಟ್ಟೆಹಕ್ಲಿಗೆ ತೆರಳುತ್ತಿದ್ದ KSRTC ಬಸ್ ನ ಸ್ಟೇರಿಂಗ್ ಕಟ್ ಆಗಿದ್ದು ಕೂಡಲೇ ಸಮಯಪ್ರಜ್ಞೆಯಿಂದ ಚಾಲಕ ಬಸ್ ನಿಲ್ಲಿಸಿ ಅಪಘಾತವನ್ನು ತಪ್ಪಿಸಿದ್ದಾರೆ.
ಬಸ್ಸಿನಲ್ಲಿ ಸುಮಾರು 50 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರ ಪ್ರಾಣ ಉಳಿದಿದೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು ಇನ್ನಷ್ಟು ಮಾಹಿತಿ ಬರಬೇಕಿದೆ.


