

ಪ್ರೇಯಸಿಯನ್ನು ಕೊಂದು…ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಪ್ರಿಯಕರ.!
ಇಶಾರಾ ಅವರ ಕುಟುಂಬದವರು ಆಕೆಗೆ ಸತತವಾಗಿ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಸಿಗದಿದ್ದಾಗ, ಅವರು ಶನಿವಾರ ಪೊಲೀಸರಿಗೆ ದೂರು ನೀಡಿದ್ದರು.ಪೊಲೀಸರು ಮೊಬೈಲ್ ಲೊಕೇಶನ್ ಟ್ರ್ಯಾಕ್ ಮಾಡಿದಾಗ ಅದು ಶ್ರೇಷ್ಠ್ನ ಪಿಜಿ ಕೊಠಡಿಯನ್ನು ತೋರಿಸಿದೆ.ಪೊಲೀಸರು ಪಿಜಿ ಕೊಠಡಿಯ ಬಾಗಿಲನ್ನು ಮುರಿದು ಒಳಹೋದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಶಾರಾ ಶವ ಪತ್ತೆಯಾಗಿದೆ. ಅದೇ ಸಮಯದಲ್ಲಿ ರೈಲ್ವೆ ಹಳಿಗಳ ಮೇಲೆ ಶ್ರೇಷ್ಠ್ ಮಲ್ಲಿಕ್ ಶವವೂ ಪತ್ತೆಯಾಗಿದೆ….
news.ashwasurya.in
ಅಶ್ವಸೂರ್ಯ/ಗುರುಗ್ರಾಮ: ಅದೆಷ್ಟೋ ಪ್ರೇಮಿಗಳು ತಮ್ಮ ನಡುವಿನ ಪ್ರೀತಿಯ ಶಾಶ್ವತತೆಗೆ ಎದುರಾಗುವ ಎಲ್ಲಾ ಕಷ್ಟಗಳನ್ನಾಗಲಿ, ಸಮಸ್ಯೆಗಳನ್ನಾಗಲಿ ಬಹಳ ತಾಳ್ಮೆಯಿಂದ ಎದುರಿಸಿ ಪ್ರೀತಿಯನ್ನು ಗೆಲ್ಲುತ್ತಾರೆ. ಆದರೆ ಇನ್ನೂ ಕೆಲವು ಪ್ರೇಮಿಗಳು ತಮ್ಮ ತಾಳ್ಮೆಯನ್ನು ಕಳೆದುಕೊಂಡು ಸಾವಿನಂಚಿಗೆ ಸರಿಯುತ್ತಾರೆ. ಇಂತಹುದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ.
ಇಲ್ಲೊಬ್ಬ ಪಾಗಲ್ ಪ್ರೇಮಿ ತನ್ನ ಪ್ರೇಯಸಿಯನ್ನು ಬರ್ಬರವಾಗಿ ಕೊಲೆ ಮಾಡಿದ ನಂತರದಲ್ಲಿ ತಾನು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿ ಸಾವಿನ ಮನೆ ಸೇರಿದ್ದಾನೆ.!ಈ ಪ್ರಕರಣ ಬೆಳಕಿಗೆ ಬಂದಿರುವುದು ಹರಿಯಾಣದಲ್ಲಿ. ಶ್ರೇಷ್ಠ್ ಮಲಿಕ್(25) ಹಾಗೂ ಇಶಾರಾ ಆಯೂಬಿ(25) ಮೃತಪಟ್ಟವರು. ಇವರಿಬ್ಬರು ಖಾಸಗಿ ಕಂಪೆನಿಯೊಂದರಲ್ಲಿ ಸಾಫ್ಟ್ವೇರ್ ಎಂಜಿನಿಯರ್ಗಳಾಗಿ ಕೆಲಸ ಮಾಡುತ್ತಿದ್ದರಂತೆ.

ಇಶಾರಾಗೆ ಆಕೆಯ ಕುಟುಂಬಸ್ಥರು ಹಲವು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸದ ಹಿನ್ನೆಲೆ ಅವರು ಕೆಲಸದ ಸ್ಥಳದಲ್ಲಿ ವಿಚಾರಿಸಿದಾಗ ಇಶಾರಾ ಕೆಲಸಕ್ಕೆ ಹಾಜರಾಗಿಲ್ಲ ಎಂದು ತಿಳಿದು ಬಂದಿದೆ. ಬಳಿಕ ಆತಂಕಗೊಂಡ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಇಶಾರಾ ಮೊಬೈಲ್ನನ್ನು ಟ್ರ್ಯಾಕ್ ಮಾಡಿದ್ದಾರೆ.
ಆ ವೇಳೆ ಲೊಕೇಶನ್ ನಲ್ಲಿ ಕಂಡು ಬಂದ ಗುರುಗ್ರಾಮದ ಸೆಕ್ಟರ್-55ರಲ್ಲಿರುವ ಶ್ರೇಷ್ಠ್ ಮಲಿಕ್ ಬಾಡಿಗೆಗೆ ಪಡೆದಿದ್ದ ಪಿಜಿ ಕೊಠಡಿಯ ಬಾಗಿಲನ್ನು ಒಡೆದು ಪ್ರವೇಶಿಸಿದಾಗ, ರಕ್ತದ ಮಡುವಿನಲ್ಲಿ ಇಶಾರಾ ಮೃತದೇಹ ಪತ್ತೆಯಾಗಿದೆ. ಇಶಾರಾ ಕುತ್ತಿಗೆ ಭಾಗಕ್ಕೆ ತೀಕ್ಷ್ಣವಾದ ಆಯುಧದಿಂದ ಹಲವು ಬಾರಿ ಇರಿದಿರುವುದು ತನಿಖೆ ಮೂಲಕ ಬೆಳಕಿಗೆ ಬಂದಿದೆ.
ಇದೇ ವೇಳೆ ರೈಲು ನಿಲ್ದಾಣದ ಸಮೀಪ ರೈಲಿನ ಮುಂದೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೂ ನಡೆದಿರುವ ವಿಷಯ ತಿಳಿದ ಕೂಡಲೆ ಘಟನಾ ಸ್ಥಳಕ್ಕೆ ತೆರಳಿದ್ದ ಪೊಲೀಸರು ರೈಲು ಹಳಿಯಲ್ಲಿ ಸೊಂಟದಿಂದ ಎರಡು ತುಂಡಾದ ಮೃತದೇಹವನ್ನು ವಶಕ್ಕೆ ಪಡೆದಿದ್ದರು.ರೈಲ್ವೆ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿತ್ತು.

ತೆರಳಿದ ಪೊಲೀಸರು ರೈಲು ಹಳಿಯಲ್ಲಿ ಸೊಂಟದಿಂದ ಎರಡು ತುಂಡಾಗಿದ್ದ ಮೃತದೇಹವನ್ನು ವಶಕ್ಕೆ ಪಡೆದಿದ್ದು, ಅದು ಶ್ರೇಷ್ಠ್ ಮಲಿಕ್ ಅವರ ಮೃತದೇಹ ಎಂಬುದು ತನಿಖೆಯಿಂದ ತಿಳಿದು ಬಂದಿದೆ.
ಪೊಲೀಸರು ಕೈಗೊಂಡ ತನಿಖೆಯಿಂದ ಎರಡೂ ಘಟನೆಯಗಳಿಗೆ ಸಂಬಂಧವಿರುವುದನ್ನು ಪತ್ತೆಹಚ್ಚಿದ್ದಾರೆ. ಇನ್ನು ಘಟನೆ ನಡೆಯುವ ಮೂರು ದಿನಗಳ ಹಿಂದೆಯಷ್ಟೇ ಇಶಾರಾ ಆಯೂಬಿ ಶ್ರೇಷ್ಠ್ ಮಲಿಕ್ ವಾಸಿಸುತ್ತಿದ್ದ ಪಿಜಿ ಕೊಠಡಿಗೆ ಬಂದು ವಾಸವಾಗಿದ್ದರು ಎಂದು ಗೊತ್ತಾಗಿದೆ. ತನಿಖೆ ಕೈಗೊಂಡ ಪೊಲೀಸರು ಮೃತರಿಬ್ಬರ ಮೊಬೈಲ್ ಫೋನ್, ಕರೆ ವಿವರಗಳು, ಚಾಟ್ಗಳು ಹಾಗೂ ಇತರ ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.ಆದರೆ ಬದುಕು ಕಟ್ಟಿ ಕೊಳ್ಳಬೇಕಾಗಿದ್ದ ಪ್ರೇಮಿಗಳು ಕ್ಷುಲ್ಲಕ ಕಾರಣಕ್ಕೆ ಸಾವಿನೆಡೆಗೆ ಹೆಜ್ಜೆ ಹಾಕಿದ್ದು ಮಾತ್ರ ದುರಂತವೆ ಹೌದು.


